ಬಿಹಾರ: ನಾಲ್ವರು ಎಐಎಂಐಎಂ ಶಾಸಕರು ಆರ್‌ಜೆಡಿ ಪಕ್ಷಕ್ಕೆ ಸೇರ್ಪಡೆ

ಬಿಹಾರದ ಐವರು   ಎಐಎಂಐಎಂ ಶಾಸಕರ ಪೈಕಿ ನಾಲ್ವರು ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಬಿಹಾರ ವಿಧಾನಸಭೆಯಲ್ಲಿ ನಾವೇ ದೊಡ್ಡ ಪಕ್ಷ ಎಂದು  ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

ಬಿಹಾರ: ನಾಲ್ವರು ಎಐಎಂಐಎಂ ಶಾಸಕರು ಆರ್‌ಜೆಡಿ ಪಕ್ಷಕ್ಕೆ ಸೇರ್ಪಡೆ
ಆರ್ಜೆಡಿ ಸೇರಿಸಿದ ಎಐಎಂಐಎಂ ಶಾಸಕರು
TV9kannada Web Team

| Edited By: Rashmi Kallakatta

Jun 29, 2022 | 3:16 PM

ಅಸಾದುದ್ದೀನ್ ಓವೈಸಿ (Asaduddin Owaisi) ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ನಾಲ್ವರು ಶಾಸಕರು ಬುಧವಾರ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (RJD) ಗೆ ಸೇರಿದ್ದಾರೆ. ಎಐಎಂಐಎಂ ನವೆಂಬರ್ 2020 ರ ಅಸೆಂಬ್ಲಿ ಚುನಾವಣೆಯಲ್ಲಿ  ಸ್ಪರ್ಧಿಸಿದ 20 ಅಸೆಂಬ್ಲಿ ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಇಲ್ಲಿ ಉತ್ತಮ ಪ್ರದರ್ಶ ನೀಡಿತ್ತು.ಅಖ್ತರುಲ್ ಇಮಾನ್ (ಅಮೂರ್ ಕ್ಷೇತ್ರ), ಮುಹಮ್ಮದ್ ಇಝರ್ ಅಸ್ಫಿ (ಕೊಚದಮಾಮ್), ಶಹನವಾಜ್ ಆಲಂ (ಜೋಕಿಹತ್), ಸೈಯದ್ ರುಕ್ನುದ್ದೀನ್ (ಬೈಸಿ) ಮತ್ತು ಅಜರ್ ನಯೀಮಿ (ಬಹದ್ದೂರ್‌ಗುಂಜ್)- ಈ ಐವರು ಶಾಸಕರು ಗೆದ್ದಿದ್ದರು,. ಅಖ್ತರುಲ್ ಅವರನ್ನು ಹೊರತುಪಡಿಸಿ ಉಳಿದ ನಾಲ್ವರು ಈಗ ಆರ್‌ಜೆಡಿ ಸೇರಿದ್ದಾರೆ. 80 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ ಆರ್‌ಜೆಡಿ.ಶೇಕಡಾ 1.24 (5,23,279) ಮತಗಳನ್ನು ಪಡೆದಿರುವ ಓವೈಸಿ ಅವರ ಪಕ್ಷವು ಗ್ರ್ಯಾಂಡ್ ಡೆಮಾಕ್ರಟಿಕ್ ಸೆಕ್ಯುಲರ್ ಫ್ರಂಟ್‌ನ ಒಂದು ಘಟಕವಾಗಿತ್ತು. ಇದು ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಉಪೇಂದ್ರ ಕುಶ್ವಾಹ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿತ್ತು.

ಬಿಹಾರದ ಐವರು   ಎಐಎಂಐಎಂ ಶಾಸಕರ ಪೈಕಿ ನಾಲ್ವರು ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಬಿಹಾರ ವಿಧಾನಸಭೆಯಲ್ಲಿ ನಾವೇ ದೊಡ್ಡ ಪಕ್ಷ ಎಂದು  ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada