ಕಲಬುರಗಿ: ನಗರ ಪಾಲಿಕೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ವಿಚಾರವಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ದೇವೇಗೌಡರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದು ನಿಜ. ನಮ್ಮ ಸಂಖ್ಯಾಬಲ ಜಾಸ್ತಿ ಇದೆ ಬೆಂಬಲ ಕೊಡಿ ಎಂದಿರುವೆ. ನಾನು ದೇವೇಗೌಡರಿಗೆ ಈ ಬಗ್ಗೆ ಕರೆ ಮಾಡಿ ಹೇಳಿದ್ದು ನಿಜ. ಹೆಚ್.ಡಿ. ದೇವೇಗೌಡರ ಉತ್ತರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಏನಾಗುತ್ತೋ ಕಾದು ನೋಡೋಣ. ಎಲ್ಲವೂ ವಿಶ್ವಾಸದ ಮೇಲೆ ನಡೆಯುತ್ತೆ, ಹೀಗಾಗಿ ಕಾಯ್ತೇವೆ ಎಂದು ಮಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕಲಬುರಗಿ ನಗರ ಪಾಲಿಕೆ ಚುನಾವಣಾ ಫಲಿತಾಂಶ ಅತಂತ್ರ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಅಧಿಕಾರ ಪಡೆಯಲು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಸದ್ಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಪಾಲಿಕೆ ಸದಸ್ಯರು ಇನ್ನೂ ಕಲಬುರಗಿಯತ್ತ ತೆರಳಿಲ್ಲ. ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ಜೆಡಿಎಸ್ ಸದಸ್ಯರು ವಾಸ್ತವ್ಯ ಹೂಡಿದ್ದಾರೆ. ರೆಸಾರ್ಟ್ನಲ್ಲಿ ಇದ್ದುಕೊಂಡು ಹೆಚ್.ಡಿ. ಕುಮಾರಸ್ವಾಮಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಇನ್ನೂ ಕೆಲ ದಿನಗಳ ಕಾಲ ರೆಸಾರ್ಟ್ನಲ್ಲೇ ಇರಲು ಚಿಂತನೆ ನಡೆಸಿದ್ದಾರೆ. ಮೈತ್ರಿ ಖಚಿತವಾಗುವವರೆಗೆ ರೆಸಾರ್ಟ್ನಲ್ಲೇ ವಾಸ್ತವ್ಯ ಸಾಧ್ಯತೆ ಕಂಡುಬಂದಿದೆ.
ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಬಿಜೆಪಿಯವ್ರು ಕೆಡವಿದ್ದರು. ಈಗ ಪಾಲಿಕೆ ಮೈತ್ರಿಗಾಗಿ ಬಿಜೆಪಿಯು ಜೆಡಿಎಸ್ ಮನೆ ಬಾಗಿಲಿಗೆ ಹೋಗಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಕಿಡಿ ಕಾರಿದ್ದಾರೆ. ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಖಚಿತ ಎಂದು ಕಲಬುರಗಿ ನಗರದಲ್ಲಿ ಶರಣ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಜೆಡಿಎಸ್ ಮನವೊಲಿಸುವ ಜವಾಬ್ದಾರಿ ಸಿಎಂ ಬೊಮ್ಮಾಯಿ ಹೆಗಲಿಗೆ; ಪಾಲಿಕೆ ಕೈ ತಪ್ಪುವ ಆತಂಕದಲ್ಲಿ ಕಾಂಗ್ರೆಸ್
ಇದನ್ನೂ ಓದಿ: ಕಲಬುರಗಿಯಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸಲು ಜೆಡಿಎಸ್ ಒಲವು; ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಮೈತ್ರಿ ನಿಲುವು
Published On - 2:33 pm, Sat, 11 September 21