Sumalatha: ಕುತೂಹಲ ಹೆಚ್ಚಿಸಿದ ಜೆಪಿ ನಡ್ಡಾ, ಸುಮಲತಾ ಅಂಬರೀಶ್ ಮಾತುಕತೆ

ಬಿಜೆಪಿ ಸೇರ್ಪಡೆ ವರದಿಗಳ ಬೆನ್ನಲ್ಲೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಗುರುವಾರ ರಾತ್ರಿ ಕಮಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Sumalatha: ಕುತೂಹಲ ಹೆಚ್ಚಿಸಿದ ಜೆಪಿ ನಡ್ಡಾ, ಸುಮಲತಾ ಅಂಬರೀಶ್ ಮಾತುಕತೆ
ಸುಮಲತಾ ಮತ್ತು ಜೆಪಿ ನಡ್ಡಾ (ಸಂಗ್ರಹ ಚಿತ್ರ)
Follow us
ಗಣಪತಿ ಶರ್ಮ
|

Updated on: Mar 09, 2023 | 11:05 PM

ಬೆಂಗಳೂರು: ಬಿಜೆಪಿ (BJP) ಸೇರ್ಪಡೆ ವರದಿಗಳ ಬೆನ್ನಲ್ಲೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಗುರುವಾರ ರಾತ್ರಿ ಕಮಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬೆಂಗಳೂರಿನ ವಸಂತನಗರದ ಖಾಸಗಿ ಹೋಟೆಲ್​ನಲ್ಲಿ ನಡ್ಡಾ ಅವರ ಜತೆ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ ನಂತರ ಸುಮಲತಾ ಅಲ್ಲಿಂದ ವಾಪಸಾದರು. ಶುಕ್ರವಾರ ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿರುವ ಬಗ್ಗೆ ಸಂಸದೆ ಈಗಾಗಲೇ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸುಮಲತಾ ಶುಕ್ರವಾರ ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ರಾಮನಗರದ ಮೂಲಕ ಮಂಡ್ಯದತ್ತ ಹೊರಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.

ಸುಮಲತಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿ ಹರಡಿದ್ದು, ಕಳೆದ ಕೆಲವು ದಿನಗಳಿಂದ ಅವರ ರಾಜಕೀಯ ಚಟುವಟುಕೆಗಳೂ ಅದಕ್ಕೆ ಇಂಬುನೀಡುವಂತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ನೀಡಿರುವ ಹೇಳಿಕೆಗಳೂ ಪುಷ್ಟಿ ನೀಡಿವೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಬಗ್ಗೆ ಹಲವಾರು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ, ಏನಾಗುತ್ತದೆ ನೋಡೋಣ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಕೂಡ ಹೇಳಿದ್ದಾರೆ. ಈ ಎಲ್ಲ ವಿದ್ಯಮಾನಗಳ ಮಧ್ಯೆಯೇ ಸುಮಲತಾ ಅವರು ನಡ್ಡಾ ಜತೆ ಮಾತುಕತೆ ನಡೆಸಿದ್ದಾರೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಸುಮಲತಾ ಅಂಬರೀಶ್​ ಬಿಜೆಪಿ ಸೇರಿದ್ರೆ ಸಂಸದೆ ಸ್ಥಾನದಿಂದ ಅನರ್ಹ ? ಕಮಲ ಮುಡಿಯಲು ಹೊರಟ ಮಂಡ್ಯ ಗೌಡ್ತಿಗೆ ಕಾನೂನು ತೊಡಕು!

ಈ ಮಧ್ಯೆ, ಬಿಜೆಪಿ ಸೇರ್ಪಡೆಗೆ ತಯಾರಿ ನಡೆಸಿರುವ ಸುಮಲತಾ​ಗೆ ಕಾನೂನು ತೊಡಕೂ ಎದುರಾಗಲಿದೆ. ಸುಮಲತಾ ಬಿಜೆಪಿ ಸೇರ್ಪಡೆಯಾಗಲು ಬಯಸಿದರೂ ಅಧಿಕೃತವಾಗಿ ಕಾನೂನಾತ್ಮಕವಾಗಿ ಸೇರಲು ಸಾಧ್ಯವಿಲ್ಲ. ಒಂದು ವೇಳೆ ಬಿಜೆಪಿ ಸೇರ್ಪಡೆಯಾದರೆ ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ನಿಯಮಾವಳಿಯಂತೆ ಸಂಸದ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ಸುಮಲತಾ ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್