ಕಾರವಾರ, ಜ.25: ಆರೋಗ್ಯದ ಕಾರಣ ನೀಡಿ ನಾಲ್ಕು ವರ್ಷ ಜನರ ಕೈಗೆ ಸಿಗದಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ (Uttara Kannada) ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಂಸದರ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ಮಣ್ಣನೆ ಸಿಗುತ್ತಿಲ್ಲ ಎಂಬ ಅಂಶ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆಯಿಂದಾಗಿ ಹೊರಬಿದ್ದಿದೆ.
ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆ ಜನವರಿ 23 ರಂದು ನಡೆದಿದ್ದು, ಈ ಸಭೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಉತ್ತರ ಕನ್ನಡ ಬಿಜೆಪಿ ಜಿಲ್ಲಾದ್ಯಕ್ಷ ಎನ್ಎಸ್ ಹೆಗಡೆ ನಡುವೆ ಭಾರೀ ವಾಗ್ವಾದ ನಡೆದಿರುವುದು ಬಹಿರಂಗವಾಗಿದೆ.
ಇದನ್ನೂ ಓದಿ: ಮುರುಕುರಾಮಯ್ಯನ ಗ್ಯಾರಂಟಿಗಳು ಉಳಿಯಲ್ಲ, ಅವುಗಳು ಸುಳ್ಳು: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಅನಂತ್ ಕುಮಾರ್ ಹೆಗಡೆ
ಜಿಲ್ಲಾದ್ಯಕ್ಷ ಎನ್ಎಸ್ ಹೆಗಡೆ, ಮಾಜಿ ಸ್ಪಿಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆ ಗೌಪ್ಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ ಸೂಚಿಸುವ ಹೆಸರಿಗೆ ಸ್ಪಿಕರ್ ಕಾಗೇರಿ ಒಲವು ವ್ಯಕ್ತಪಡಿಸದ ಹಿನ್ನೆಲೆ ರಾಜ್ಯ ಮಟ್ಟದ ನಾಯಕರಿಗೆ ಆಯ್ಕೆ ಜವಾಬ್ದಾರಿ ಕೊಡುವುದಕ್ಕೆ ತಿರ್ಮಾನಿಸಿ ಕಾಗೇರಿ ಅವರು ಸಭೆಯಿಂದ ಹೊರ ನಡೆದರು.
ಕಾಗೇರಿ ಸಭೆಯಿಂದ ಹೊರ ನಡೆದ ಬಳಿಕ ಲಿಸ್ಟ್ ಫೈನಲ್ ಮಾಡಿ ಎಂಬ ಅನಂತ್ ಕುಮಾರ್ ಹೆಗಡೆ ಸೂಚನೆಗೆ ಜಿಲ್ಲಾಧ್ಯಕ್ಷರು ಸೊಪ್ಪು ಹಾಕಿಲ್ಲ. ಕಾಗೇರಿ ಅವರು ಇರುವಾಗಲೇ ಹೇಳಬೇಕಿತ್ತು. ಅವರು ಹೊದ ಮೇಲೆ ಹಿಗೆಲ್ಲ ಮಾಡಿದರೆ ನನಗೆ ಕೆಟ್ಟ ಹೆಸರ ಬರುತ್ತದೆ. ನಾನು ಲಿಸ್ಟ್ ಮಾಡಲ್ಲ ಎಂದಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅನಂತ್ ಕುಮಾರ್ ಹೆಗಡೆ, ಇಂತಹ ಸಭೆಗೆಲ್ಲ ನನ್ನನ್ನು ಯಾಕೆ ಕರೆಯುತ್ತೀರಾ? ಎಲ್ಲ ಅರ್ಧಂಬರ್ಧ ಮಾಡುತ್ತೀರಾ ಎಂದು ಏರು ಧ್ವನಿಯಲ್ಲಿ ಹರಿಹಾಯ್ದು ಸಭೆಯಿಂದ ಹೊರ ನಡೆದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ