ನಾನು ಬೀದಿಯಲ್ಲಿ ಹೋಗಿ ಅವರ ಜತೆ ಕುಸ್ತಿ ಮಾಡಲು ಆಗಲ್ಲ; ಡಿಕೆ ಶಿವಕುಮಾರ್ ಸವಾಲ್​ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ನಾನು ಬೀದಿಯಲ್ಲಿ ಹೋಗಿ ಅವರ ಜತೆ ಕುಸ್ತಿ ಮಾಡಲು ಆಗಲ್ಲ; ಡಿಕೆ ಶಿವಕುಮಾರ್ ಸವಾಲ್​ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಗೃಹ ಸಚಿವ ಆರಗ ಜ್ಞಾನೇಂದ್ರ

ತೊಡೆ ತಟ್ಟೋದು, ಸವಾಲು ಹಾಕೋದನ್ನು ಜನ ನೋಡ್ತಿದ್ದಾರೆ. ಕಾಯ್ದೆ ಬಿಜೆಪಿಗೆ ಬೇರೆ, ಕಾಂಗ್ರೆಸ್​ಗೆ ಬೇರೆ, ಜೆಎಡಿಎಸ್​ಗೆ ಬೇರೆ ಇಲ್ಲ ಎಂದು ಮತನಾಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ಎಫೆಕ್ಟ್ ಏನಾಗುತ್ತಿದೆ ಅಂತಾ ತಾಳ್ಮೆಯಿಂದ ಯೋಚನೆ ಮಾಡಲಿ.

TV9kannada Web Team

| Edited By: sandhya thejappa

Jan 08, 2022 | 10:54 AM

ಬೆಂಗಳೂರು: ಪಾದಯಾತ್ರೆ ವಿಚಾರವಾಗಿ ಡಿಕೆ ಶಿವಕುಮಾರ್ (DK Shivakumar) ಸವಾಲ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಟಿವಿ9ಗೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬೀದಿಯಲ್ಲಿ ಹೋಗಿ ಅವರ ಜತೆ ಕುಸ್ತಿ ಮಾಡಲು ಆಗಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಯಸ್ಸಲ್ಲಿ ನನಗಿಂತ ಕಿರಿಯ. ಅವರಿಂದ ಅಂತಹ ಮಾತು ನಿರೀಕ್ಷಿಸಿರಲಿಲ್ಲ. ಶಿವಕುಮಾರ್ ಬಹಳ ಲಘುವಾಗಿ ಮಾತನಾಡುತ್ತಾರೆ. ಯಾರನ್ನೋ ನಿಲ್ಲಿಸಬೇಕು, ತಡೆಗಟ್ಟಬೇಕೆಂಬ ಉದ್ದೇಶ ನಮಗಿಲ್ಲ. ಸರ್ಕಾರ ನಡೆಸಿದ ಅನುಭವಸ್ಥರು ಈಗ ಪಾದಯಾತ್ರೆ ಕೈಬಿಡಲಿ. ಕಾಂಗ್ರೆಸ್ನವರು ಬೇಜವಾಬ್ದಾರಿಯ ವರ್ತನೆ ಮಾಡಬಾರದು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತೊಡೆ ತಟ್ಟೋದು, ಸವಾಲು ಹಾಕೋದನ್ನು ಜನ ನೋಡ್ತಿದ್ದಾರೆ. ಕಾಯ್ದೆ ಬಿಜೆಪಿಗೆ ಬೇರೆ, ಕಾಂಗ್ರೆಸ್​ಗೆ ಬೇರೆ, ಜೆಎಡಿಎಸ್​​ಗೆ ಬೇರೆ ಇಲ್ಲ ಎಂದು ಮತನಾಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ಎಫೆಕ್ಟ್ ಏನಾಗುತ್ತಿದೆ ಅಂತಾ ತಾಳ್ಮೆಯಿಂದ ಯೋಚನೆ ಮಾಡಲಿ. ಹಿಂದೆ ಕೃಷ್ಣೆಯ ಕಡೆಗೆ ನಡಿಗೆ ಅಂತಾ ಹೇಳಿ ಅಲ್ಲಿನ ಜನರಿಗೆ ವಂಚನೆ ಮಾಡಿದರು. ಇದು ರಾಜಕೀಯ ನಡಿಗೆ. ಕಾನೂನು, ಕಾಯ್ದೆಗಳು ಅದರ ದಾರಿ ಹಿಡಿಯುತ್ತವೆ ಅಷ್ಟೇ ಎಂದರು.

ಎರಡನೇ ಅಲೆಯಲ್ಲಿ ಸ್ಮಶಾನದಲ್ಲಿ ಶವಗಳು ಕ್ಯೂ ಇರುವಂತಾಯ್ತು. ಯಾರನ್ನೋ ನಿಲ್ಲಿಸಬೇಕು, ತಡೆಗಟ್ಟಬೇಕು ಅನ್ನೋ ಉದ್ದೇಶ ನಮ್ಮದಲ್ಲ. ಕಾಂಗ್ರೆಸ್ನವರು ದೇಶ ಆಳಿದ ಪಕ್ಷದ ಜವಾಬ್ದಾರಿಯುತ ವ್ಯಕ್ತಿಗಳು. ಬಾಂಗ್ಲಾ ವಾರ್ ಆದಾಗ ಇಂದಿರಾ ಗಾಂಧಿ ಜೊತೆ ವಾಜಪೇಯಿ ನಿಂತರು. ಸರ್ಕಾರ ನಡೆಸಿದ ಅನುಭವಸ್ಥರು ಈಗ ಪಾದಯಾತ್ರೆ ಕೈ ಬಿಡಬೇಕು. ಮೊನ್ನೆಯಿಂದ ಅವರು ತೊಡೆ ತಟ್ಟುತ್ತಿದ್ದಾರೆ. ವೀರಾವೇಶವಾಗಿ ಮಾತನಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಯಾಕೆ ವೀರಾವೇಶದ ಮಾತಾಡಲಿಲ್ಲ? ಅಂತ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ; ಗೋವಿಂದ ಕಾರಜೋಳ ಮೇಕೆದಾಟು ಯೋಜನೆಗೆ ಕಾನೂನು ಹೋರಾಟ ಮಾಡ್ತಿದ್ದೇವೆ. ನಾವು ಏನೂ ಮಾಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ಮಾಡಿ ಪ್ರಯತ್ನ ಮಾಡುತ್ತಿದ್ದೇವೆ. ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್‌ಗೂ ಪ್ರಯತ್ನಿಸುತ್ತಿದ್ದೇವೆ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗಿದೆ. ನಾವೂ ಸಮರ್ಥವಾಗಿ ಎದುರಿಸಲು ಪ್ರಯತ್ನ ಪಡುತ್ತಿದ್ದೇವೆ ಅಂತ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಕೊರೊನಾ ನಿಯಂತ್ರಿಸಲು ಸಾರ್ವಜನಿಕರೂ ಸಹಕರಿಸಬೇಕು. ಕೊವಿಡ್‌ನಿಂದ ಈ ಹಿಂದೆ ಸಾಕಷ್ಟು ಸಾವು ನೋವು ಆಗಿದೆ. ಮತ್ತೆ ಆ ಸಮಸ್ಯೆ ಆಗಬಾರದೆಂದು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಜನರ ರಕ್ಷಣೆ, ಕೊವಿಡ್ ನಿಯಂತ್ರಣ ಸರ್ಕಾರದ ಜವಾಬ್ದಾರಿ ಅಂತ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಪಕ್ಷದ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ಆದ್ರೆ ಸಮಯ ನೋಡಿ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ ಗೋವಿಂದ ಕಾರಜೋಳ, ಈಗ ಸಾವಿರಾರು ಜನರನ್ನ ಸೇರಿಸಿ ಹೋರಾಟ ಎಷ್ಟು ಸರಿ? ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸ ಮಾಡಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಕೆಲಸ ಮಾಡಲಿಲ್ಲ. ಈಗ ವೋಟ್ ಬ್ಯಾಂಕ್‌ಗಾಗಿ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪ್ರತಿ ಬಾರಿ ಅಣ್ಣಾಮಲೈ ಹೆಸರು ಹೇಳುತ್ತಾರೆ. ಅಣ್ಣಾಮಲೈ ಚುನಾಯಿತ ಪ್ರತಿನಿಧಿಯಲ್ಲ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಷ್ಟೆ, ಸರ್ಕಾರದ ಭಾಗಿಯಲ್ಲ. ತಮಿಳುನಾಡು ಸರ್ಕಾರದಲ್ಲಿ ಭಾಗಿ ಇರೋದು ಕಾಂಗ್ರೆಸ್ ಅಂತ ಹೇಳಿದರು.

ಇದನ್ನೂ ಓದಿ

ವೀಕೆಂಡ್ ಕರ್ಫ್ಯೂಗೆ ಕ್ಯಾರೆ ಎನ್ನದ ಕರ್ನಾಟಕ ಜನ! ಅನಗತ್ಯ ಓಡಾಡುವ ವಾಹನಗಳು ಸೀಜ್

ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ; ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದು ವಾಪಸ್ ಬರುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು

Follow us on

Related Stories

Most Read Stories

Click on your DTH Provider to Add TV9 Kannada