ನಮ್ಮ ರಾಮ ಬೇರೆಯೇ ಇದ್ದಾನೆ: ಮಧು ಬಂಗಾರಪ್ಪ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶ್ರೀರಾಮನಿಗೆ ಇಲ್ಲಿಂದಲೇ ದೊಡ್ಡ ನಮಸ್ಕಾರ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯರನ್ನೇ ಕರೆದಿಲ್ಲ ಅಂದರೆ ನಮ್ಮನ್ನೆಲ್ಲಿ ಕರೆಯುತ್ತಾರೆ. ನಮ್ಮನ್ನು ಇವರು ಲೆಕ್ಕಕ್ಕೆ ಇಡುತ್ತಾರಾ? ರಾಮ‌ ನಮ್ಮನ್ನು ಲೆಕ್ಕಕ್ಕೆ ಇಡುತ್ತಾರೆ. ನಮ್ಮ ರಾಮ ಬೇರೆಯೇ ಇದ್ದಾನೆ, ಅವನು ಜೋಪಾನವಾಗಿ ಕಾಪಾಡುತ್ತಾನೆ ಎಂದರು.

ನಮ್ಮ ರಾಮ ಬೇರೆಯೇ ಇದ್ದಾನೆ: ಮಧು ಬಂಗಾರಪ್ಪ
ಮಧು ಬಂಗಾರಪ್ಪ
Follow us
Basavaraj Yaraganavi
| Updated By: Rakesh Nayak Manchi

Updated on: Jan 14, 2024 | 8:23 PM

ಶಿವಮೊಗ್ಗ, ಜ.14: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನೇ ಆಹ್ವಾನಿಸಿಲ್ಲ. ಇನ್ನು ನಮ್ಮನ್ನು ಲೆಕ್ಕಕ್ಕೆ ಇಡುತ್ತಾರಾ? ರಾಮ‌ ನಮ್ಮನ್ನು ಲೆಕ್ಕಕ್ಕೆ ಇಡುತ್ತಾನೆ. ಜನವರಿ 22 ರಂದು ಶ್ರೀರಾಮನಿಗೆ ಇಲ್ಲಿಂದಲೇ ದೊಡ್ಡ ಸಮಸ್ಕಾರ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು. ಅಲ್ಲದೆ, ನಮ್ಮ ರಾಮ ಬೇರೆಯೇ ಇದ್ದಾನೆ, ಜೋಪಾನವಾಗಿ ಕಾಪಾಡುತ್ತಾನೆ ಎಂದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ ಮಾತನಾಡಿದ ಅವರು, ನಮ್ಮೂರಲ್ಲಿ ರಾಮನ ದೇವಸ್ಥಾನ ಇದೆ, ಇದಕ್ಕೆ ಬಹಳ ಕನೆಕ್ಟ್ ಇದೆ. ಅನುಮತಿ ಪಡೆದು ಹೋಗಬೇಕು ಅಂತಾ ತೀರ್ಮಾನ ಮಾಡಿದ್ದೇವೆ. ಕನೆಕ್ಟ್ ಆದ ಮೇಲೆ ಅನುಮತಿ ಪಡೆದು ಹೋಗಬೇಕೆಂದು ತೀರ್ಮಾನಿಸಿದ್ದೇವೆ. ಅದು ಯಾವಾಗ ಕರೆಸಿಕೊಳುತ್ತಾನೋ ನೋಡೋಣ, ಒಟ್ಟಾರೆ ಕರೆಸಿಕೊಳ್ಳುತ್ತಾನೆ ಎಂದರು.

ಇದನ್ನೂ ಓದಿ: ಮೋದಿ ಹೆಸರು ಹೇಳೋದು ಬಿಟ್ಟು ನಳಿನ್ ಕುಮಾರ್ ಕಟೀಲ್ ಏನು ಅಭಿವೃದ್ಧಿ ಮಾಡಿದ್ದಾರೆ: ಮಧು ಬಂಗಾರಪ್ಪ ವಾಗ್ದಾಳಿ

ಸಂಸದ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿಯವರು ಹಂತ ಹಂತವಾಗಿ ನಿರ್ನಾಮವಾಗಿ ಹೋಗುತ್ತಿದ್ದಾರೆ. ಇಂತಹ ಹೇಳಿಕೆಗಳಿಂದಲೇ 67 ಸ್ಥಾನಗಳಿಗೆ ಇಳಿದಿದ್ದಾರೆ. ದೇವರು ಹಸರಿನಲ್ಲಿ ನಮಗೆ ಶಾಪ ಕೊಡುತ್ತಾರೆ. ದೇವರು ಕೆಲವೊಮ್ಮೆ ನಮಗೆ ರಿವರ್ಸ್ ಹೊಡೆದು ಬಿಡುತ್ತಾನೆ. ಒಳ್ಳೆಯವರು ಯಾರು, ನಮ್ಮನ್ನು ಯಾರು ದುರುಪಯೋಗ ‌ಪಡಿಸಿಕೊಳ್ಳುತ್ತಾರೆ ಎಂದು ದೇವರಿಗೆ ಚನ್ನಾಗಿ ಗೊತ್ತು‌ ಎಂದರು.

ಯರಿಯೂರಪ್ಪಗೆ ಟಾಂಗ್ ಕೊಟ್ಟ ಮಧು ಬಂಗಾರಪ್ಪ

ವಚನಕಾರ ಅಲ್ಲಮಪ್ರಭು ಜನ್ಮಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ ಮಧು ಬಂಗಾರಪ್ಪ, ಇದೇ ಕ್ಷೇತ್ರದವರು ಮುಖ್ಯಮಂತ್ರಿ ಆಗಿದ್ದರು. ಬಳ್ಳಿಗಾವಿ ಅಭಿವೃದ್ಧಿ ಆಗಿಲ್ಲ. ಯಾಕೆ ಬಳ್ಳಿಗಾವಿಯನ್ನ ಅಭಿವೃದ್ಧಿ ಮಾಡಿಲ್ಲ ಎಂಬುದನ್ನು ನೀವೇ ಕೇಳಿ ಎಂದು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.

ಪುರಾತತ್ವ ಇಲಾಖೆ ಅಧೀನದಲ್ಲಿ ಇದ್ದಿದ್ದಕ್ಕೆ ಕಸಗುಡಿಸಬೇಡಿ ಎಂದಿದ್ದಾರಾ ಎಂದು ಕೇಳಿದ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇದೆ. ಅಲ್ಲಮಪ್ರಭು ಅವರ ಸ್ಥಾನದಿಂದ ಹೊಸ ಯುಗ ಆರಂಭವಾಗುತ್ತದೆ. ರಾಜಕೀಯ ಸ್ವರೂಪ ಪಡೆದುಕೊಳ್ಳೋದು ಒಳ್ಳೆಯದೇ. ಆದರೆ ಎಲ್ಲದಕ್ಕೂ ದೇವರ ಹೆಸರು‌ ಇಟ್ಟುಕೊಂಡು ಓಡಾಡಲು ಆಗಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ