ಆಪರೇಷನ್​ ಹಸ್ತ; ನಮ್ಮ ಪಕ್ಷ ಸಮುದ್ರ ಇದ್ದಂತೆ, ಯಾವುದೇ ನದಿ ಹರಿದುಬಂದರೂ ಸೇರುತ್ತೆ ಎಂದ ಸಚಿವ ಮಂಕಾಳು ವೈದ್ಯ

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೇರೆ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಅವರು ‘ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮಾಜಿ ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್ ಜೊತೆ ಚರ್ಚೆ ನಡೆಸಿದ್ದೇನೆ. ಪಕ್ಷ ಸೇರ್ಪಡೆ ವಿಚಾರದಲ್ಲಿ ಚರ್ಚಿಸಿಲ್ಲ ಎಂದರು.

ಆಪರೇಷನ್​ ಹಸ್ತ; ನಮ್ಮ ಪಕ್ಷ ಸಮುದ್ರ ಇದ್ದಂತೆ, ಯಾವುದೇ ನದಿ ಹರಿದುಬಂದರೂ ಸೇರುತ್ತೆ ಎಂದ ಸಚಿವ ಮಂಕಾಳು ವೈದ್ಯ
ಮಂಕಾಳು ವೈದ್ಯ
Edited By:

Updated on: Aug 20, 2023 | 2:46 PM

ಉತ್ತರ ಕನ್ನಡ, ಆ.20: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Assembly Election) ಕಾಂಗ್ರೆಸ್​ (Congress) 135 ಸೀಟ್​ಗಳನ್ನು ಗೆದ್ದು​ ಅಧಿಕಾರ ಚುಕ್ಕಾಣಿ ಹಿಡಿದಿದೆ. ಈ ಮಧ್ಯೆ ಹಿಂದೆ ಕಾಂಗ್ರೆಸ್​ ಬಿಟ್ಟು ಹೋಗಿ ಬಿಜೆಪಿ(BJP) ಸೇರಿಕೊಂಡು ಸರ್ಕಾರ ಸ್ಥಾಪಿಸಲು ಕಾರಣರಾದ ಶಾಸಕರು ಮತ್ತೆ ಕಾಂಗ್ರೆಸ್​ಗೆ​ ಬರುವ ಮಾತುಗಳು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ. ಈ ಕುರಿತು ‘ಕಾಂಗ್ರೆಸ್​ ಸಮುದ್ರ ಇದ್ದಂತೆ, ಯಾವುದೇ ನದಿ ಹರಿದುಬಂದರೂ ಸೇರುತ್ತೆ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ(Minister Mankala Vaidya) ಹೇಳಿದ್ದಾರೆ.

ಇಂದು (ಆ.20) ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬೇರೆ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಅವರು ‘ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಣಯ ಕೈಗೊಳ್ಳಲಿದ್ದಾರೆ. ಮಾಜಿ ಸಚಿವ ಶಿವರಾಂ ಹೆಬ್ಬಾರ್ ಹಾಗೂ ನಾನು ದಶಕಗಳಿಂದಲೂ ಒಳ್ಳೆಯ ಸ್ನೇಹಿತರು. ಅಭಿವೃದ್ಧಿ ವಿಚಾರದಲ್ಲಿ ಅರೆಬೈಲ್ ಶಿವರಾಂ ಹೆಬ್ಬಾರ್ ಜೊತೆ ಚರ್ಚೆ ನಡೆಸಿದ್ದೇನೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರದಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದರು.

ಇದನ್ನೂ ಓದಿ:ಎಸ್​ಟಿ ಸೋಮಶೇಖರ್,​​ ಬೆಂಬಲಿಗರನ್ನು ಕಾಂಗ್ರೆಸ್​ಗೆ ಕರೆತರಬೇಕೆಂದು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್​ ನೀಡಿದ್ದಾರೆ: ಶಾಸಕ ಎನ್​ ಶ್ರೀನಿವಾಸ್​​​

ನಮ್ಮ ಪಕ್ಷದಲ್ಲಿ ಎರಡು ತಂಡಗಳಿಲ್ಲ ಎಂದ ಸಚಿವ ಮಂಕಾಳು ವೈದ್ಯ

ಕಾಂಗ್ರೆಸ್​ನಲ್ಲಿ ಎರಡು ತಂಡಗಳಿವೆ ಎಂಬ ಉಭಯ ಪಕ್ಷದವರ ಹೇಳಿಕೆಗೆ ‘135 ಶಾಸಕರೂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ತಂಡದವರು. ನಮ್ಮ ಪಕ್ಷದಲ್ಲಿ ಎರಡು ತಂಡಗಳಿಲ್ಲ. ಬಿಜೆಪಿ ನಾಯಕರು ತಲೆ ಕೆಟ್ಟವರು, ಅವರಿಗೆ ಸ್ವಲ್ಪವೂ ಬುದ್ಧಿ ಇಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಶಾಸಕರನ್ನು ಖರೀದಿಸಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ