AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್​: ವಿವಿಧ ಕಾಮಗಾರಿ ವೀಕ್ಷಣೆ, ಕಣ್ಣೀರು ಹಾಕಿದ ಬೀದಿಬದಿ ವ್ಯಾಪರಸ್ಥರು

ಈಜಿಪುರ ಮೇಲ್ಸೇತುವೆ, ರಾಜೀವ್ ಗಾಂಧಿ ಪ್ರತಿಮೆ ವಿನ್ಯಾಸ ಸೇರಿದಂತೆ ಗಾಂಧಿ ಬಜಾರ್ ಸ್ಮಾರ್ಟ್ ಸಿಟಿ ಕಾಮಗಾರಿಯನ್ನುಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್​ ಇಂದು ವೀಕ್ಷಣೆ ಮಾಡಿದ್ದಾರೆ. ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಹ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಕೂಡ ಸಿಟಿ ರೌಂಡ್ಸ್​​ ಹಾಕಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್​: ವಿವಿಧ ಕಾಮಗಾರಿ ವೀಕ್ಷಣೆ, ಕಣ್ಣೀರು ಹಾಕಿದ ಬೀದಿಬದಿ ವ್ಯಾಪರಸ್ಥರು
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Vinay Kashappanavar
| Edited By: |

Updated on: Aug 19, 2023 | 5:01 PM

Share

ಬೆಂಗಳೂರು, ಆಗಸ್ಟ್ 19: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಫುಲ್​ ಆಕ್ಟಿವ್ ಆಗಿದ್ದು, ಶನಿವಾರ ​ಸಿಟಿ ರೌಂಡ್ಸ್​ ಹಾಕಿದ್ದಾರೆ. ಆ ಮೂಲಕ ಈಜಿಪುರ ಮೇಲ್ಸೇತುವೆ ಸ್ಥಿತಿ ಗತಿ, ಇಟ್ಟಮಡುನಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಪ್ರತಿಮೆ ವಿನ್ಯಾಸ, ಬನಶಂಕರಿ ಬಸ್ ನಿಲ್ದಾಣ ಮತ್ತು ಗಾಂಧಿ ಬಜಾರ್ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಡಿ.ಕೆ.ಶಿವಕುಮಾರ್​​ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾಥ್​ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳ ವರ್ಷದಿಂದ ಈಜಿಪುರ ಫ್ಲೈಓವರ್ ಕಾಮಗಾರಿ ಸ್ಥಗಿತಗೊಂಡಿದೆ. 2014ರಲ್ಲಿ ಕಾಮಗಾರಿ ಆರಂಭವಾಗಿತ್ತು, 2017ರಲ್ಲಿ ನಿಂತು ಹೋಗಿದೆ ಎಂದು ಹೇಳಿದರು.

ಕೇವಲ ಶೇಕಡಾ 30ರಷ್ಟು ಕಾಮಗಾರಿ ಮಾಡಿ ಬಿಟ್ಟು ಹೋಗಿದ್ದಾರೆ. ಕಂಪನಿಯವರ ವಿರುದ್ಧ ಕೋರ್ಟ್​ನಲ್ಲಿ ಪಾಲಿಕೆ ಲೀಗಲ್ ಟೀಂ ದಾವೆ ಹಾಕಿದೆ. ಲೀಗಲ್ ಸಮಸ್ಯೆ ಮುಗಿದಿವೆ. ಮರು ಟೆಂಡರ್ ಕರೆದಿದ್ದಾರೆ, ಆದರೆ ಯಾರು ಟೆಂಡರ್ ಹಾಕುತ್ತಿಲ್ಲ. ಕಾಮಗಾರಿಗೆ ಒಟ್ಟು 300 ಕೋಟಿಗಳಷ್ಟು ಹಣ ಬೇಕಾಗುತ್ತೆ ಎಂದು ತಿಳಿಸಿದರು.

ಕಣ್ಣೀರು ಹಾಕಿದ ವ್ಯಾಪರಸ್ಥರು

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿನ ಗಾಂಧಿ ಬಜಾರ್ ಕಾಮಗಾರಿ ವೀಕ್ಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್​ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಬೀದಿಬದಿ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಗಾಂಧಿ ಬಜಾರ್ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ರಸ್ತೆ ಆಗಲೀಕರಣ ಮಾಡಿ ಕೊಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದ ವಿರುದ್ಧ ಆ 23ರಂದು ಬೃಹತ್​ ಪ್ರತಿಭಟನೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ರಸ್ತೆ ಕಾಮಗಾರಿಯಿಂದ ಇಲ್ಲದೆ ನಮ್ಮಗೆ ಸರಿಯಾದ ರೀತಿ ವ್ಯಾಪಕ ಆಗುತ್ತಿಲ್ಲ. ವ್ಯಾಪರ ಇಲ್ಲದೆ ಜೀವನ ಸಾಗಿಸುವುದೇ ಹೇಗೆ. ನಮ್ಮಜ್ಜಿ ನಮ್ಮ ತಾತನ ಕಾಲದಿಂದಲೂ ನಾವು ಕೆಲಸ ವ್ಯಾಪರ ಮಾಡುತ್ತಿದ್ದೇವೆ. ಸರ್ಕಾರ ಈ ಕೂಡಲೇ ಸಮಸ್ಯೆ ಬಗೆಹರಿಸುವಂತೆ ವ್ಯಾಪರಸ್ಥರು ಕಣ್ಣೀರು ಹಾಕಿದ್ದಾರೆ.

ಬಿಜೆಪಿ ನಾಯಕರ ಆರೋಪಕ್ಕೆ ಡಿ.ಕೆ.ಶಿವಕುಮಾರ್​ ತಿರುಗೇಟು

ಬಿಜೆಪಿ ಶಾಸಕರ ಕುರಿತಾಗಿ ಮಾತನಾಡಿದ ಅವರು, ತಮ್ಮ ಲೋಪ ಮುಚ್ಚಿಕೊಳ್ಳಲು ಬಿಜೆಪಿ ಶಾಸಕರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಡಿ.ಕೆ.ಶಿವಕುಮಾರ್​ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಯಾರು ಯಾರು ಅವರ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಬೇಕು. ದೇಶ ಉಳಿಸಬೇಕು ಅಂತಾ ತೀರ್ಮಾನ ಮಾಡಿದ್ದಾರೆ, ಒಳ್ಳೆಯದು. ಬೇರೆ ರಾಜ್ಯಗಳಲ್ಲಿ ಬಿಜೆಪಿ ರಾಜಕಾರಣ ಮಾಡಿದಾಗ ಏನಾಗಿತ್ತು ಎಂದು ಪ್ರಶ್ನಿಸಿದರು.

ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಲ್ಲಿ BJP ಮಾಡಿದ್ದು ಸರಿನಾ? ಅವರ ಅನುಕೂಲಕ್ಕೆ ತಕ್ಕಂತೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ನೀವು ನಿರ್ಬಂಧ ಮಾಡಲು ಆಗುತ್ತಾ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.