ನಿನ್ನೆ ಸರ್ವರ್ ಹ್ಯಾಕ್​​, ಇಂದು ಅನುಮಾನ ಎಂದ ಸಚಿವ ಸತೀಶ್​ ಜಾರಕಿಹೊಳಿ

|

Updated on: Jun 21, 2023 | 3:56 PM

ನಿನ್ನೆ ಸರ್ವರ್ ಹ್ಯಾಕ್ ಆಗಿದೆ ಸಚಿವ ಸತೀಶ್​ ಜಾರಕಿಹೊಳಿ ಇಂದು ಅನುಮಾನ ಇದೆ ಎಂದಿದ್ದಾರೆ. ಆ ಮೂಲಕ ಸರ್ಕಾರದ ಸರ್ವರ್​ ಹ್ಯಾಕ್ ಹೇಳಿಕೆಯನ್ನು ಇಲ್ಲಿಗೆ ಬಿಟ್ಟುಬಿಡಿ. ಅದು ಮುಗಿದು ಹೋಯಿತು ಅಷ್ಟೇ ಎಂದಿದ್ದಾರೆ.

ನಿನ್ನೆ ಸರ್ವರ್ ಹ್ಯಾಕ್​​, ಇಂದು ಅನುಮಾನ ಎಂದ ಸಚಿವ ಸತೀಶ್​ ಜಾರಕಿಹೊಳಿ
ಸಚಿವ ಸತೀಶ್​ ಜಾರಕಿಹೊಳಿ
Follow us on

ಬೆಳಗಾವಿ: ಸರ್ಕಾರದ ಸರ್ವರ್​ ಹ್ಯಾಕ್ ಹೇಳಿಕೆಯನ್ನು ಇಲ್ಲಿಗೆ ಬಿಟ್ಟುಬಿಡಿ. ನನಗೆ ಅನುಮಾನ ಬಂದಿದ್ದಕ್ಕೆ ಹೇಳಿದ್ದೇನೆ ಎಂದು ಸಚಿವ ಸತೀಶ್​ ಜಾರಕಿಹೊಳಿ (Satish Jarkiholi) ಹೇಳಿದರು. ಜಿಲ್ಲೆಯ ಹುಕ್ಕೇರಿಯಲ್ಲಿ ಮಾತನಾಡಿದ ಅವರು, ಸರ್ವರ್ ಹ್ಯಾಕ್ ಆಗಿಲ್ಲ ಅಂದರೆ ಮುಗಿದು ಹೋಯಿತು ಅಷ್ಟೇ. ಕೇಂದ್ರದ ವಿರುದ್ಧ ಫೋನ್ ಟ್ಯಾಪ್​, EVM ಹ್ಯಾಕ್​ನಂತಹ ಆರೋಪ ಕೇಳಿಬಂದಿದೆ. ಅದೇ ರೀತಿ ಸರ್ವರ್ ಹ್ಯಾಕ್ ಆಗಿರಬಹುದು ಎನ್ನುವುದು ನನ್ನ ಸಂಶಯ ಎಂದು ಹೇಳಿದರು.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಪಡೆಯಲು ಅರ್ಜಿ ಸಲ್ಲಿಸಬೇಕಿದೆ. ಆದರೆ ಸರ್ವರ್ ಮಾತ್ರ ಬ್ಯುಸಿ ಎಂದು ತಿಳಿತ್ತಿದೆ. ಈ ಕುರಿತಾಗಿ ಜನರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೇಂದ್ರವು ನಮ್ಮ ಸಿಸ್ಟಮ್​ಗಳನ್ನು ಹ್ಯಾಕ್ ಮಾಡಿದೆ ಎಂದು ಮಂಗಳವಾರ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದರು.

ಸರ್ವರ್ ಹ್ಯಾಕ್ ಬಗ್ಗೆ ನನ್ನ ಹೇಳಿಕೆ ಹಿಂಪಡೆಯಲ್ಲ ಎಂದ ಸಚಿವ ಸತೀಶ್

ಬಿಜೆಪಿಯ ಅನೇಕ ನಾಯಕರು ಇಂತಹ ಹೇಳಿಕೆ ನೀಡಿದ್ದಾರೆ. ಸಚಿವ ಸತೀಶ್​​ ಹೇಳಿಕೆಗೆ ಕಾಂಗ್ರೆಸ್ಸಿಗರು ಸಮರ್ಥನೆಗೆ ಬಾರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನನ್ನ ಹೇಳಿಕೆಯನ್ನು ಪಕ್ಷದವರು ಯಾಕೆ ಸಮರ್ಥನೆ ಮಾಡಿಕೊಳ್ಳಬೇಕು. ಪ್ರತಿ ದಿನವೂ ಸಾಕಷ್ಟು ಆರೋಪ ಪ್ರತ್ಯಾರೋಪಗಳು ಬರುತ್ತವೆ. ಎಲ್ಲದಕ್ಕೂ ಕಾಗದ ತೋರಿಸಲು ಆಗುವುದಿಲ್ಲ. ಬೇರೆ ವಿಷಯವನ್ನು ಚರ್ಚಿಸೋಣ, ಈ ವಿಷಯ ಇಲ್ಲಿಗೆ ಬಿಡೋಣ. ಆದರೆ ಸರ್ವರ್ ಹ್ಯಾಕ್ ಬಗ್ಗೆ ನನ್ನ ಹೇಳಿಕೆಯನ್ನು ಹಿಂಪಡೆಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದ ಕೇಂದ್ರ ಸರ್ಕಾರ: ಸತೀಶ್ ಜಾರಕಿಹೊಳಿ ಆರೋಪ

ನನ್ನದು ರಾಜಕೀಯ ಸ್ಟೇಟ್​ಮೆಂಟ್​​ ಅಷ್ಟೇ

ರಾಜಕೀಯದಲ್ಲಿ ಇಂತಹ ಹೇಳಿಕೆ ಇದ್ದೇ ಇರುತ್ತೆ. ಬಿಜೆಪಿಯವರು ಆರೋಪ ಮಾಡೋದು ಬಿಟ್ಟು ಮತ್ತೇನು ಮಾಡಲ್ಲ. ಬಿಜೆಪಿ ನಾಯಕರು ಬಹಳಷ್ಟು ಇಂತಹ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರ ಇಂತಹ ಹೇಳಿಕೆಗಳ ದೊಡ್ಡ ಪಟ್ಟಿ ಕೊಡುತ್ತೇವೆ. ನನ್ನದು ರಾಜಕೀಯ ಸ್ಟೇಟ್​ಮೆಂಟ್​​ ಅಷ್ಟೇ ಎಂದು ಹೇಳಿದರು.

ಇದನ್ನೂ ಓದಿ: ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ: ಹೊಸ ಬಾಂಬ್ ಸಿಡಿಸಿದ ಮತ್ತೋರ್ವ ಬಿಜೆಪಿ ನಾಯಕ

15 ಕೆಜಿ ಅಕ್ಕಿ ಕೊಡಬೇಕೆಂದು ಶಶಿಕಲಾ ಜೊಲ್ಲೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, 5+5 ಸೇರಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಈರಣ್ಣ ಕಡಾಡಿ ಕಳ್ಳನಿಗೆ ಒಂದು ಪಿಳ್ಳೆ ನೆಪ ವಿಚಾರವಾಗಿ ಮಾತನಾಡಿ, ಅಂಥ ಹೇಳಿಕೆಗಳಿಗಿಲ್ಲ ಮುಗಿದು ಹೋಗಿವೆ ಅಂಥವುಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ವಿಚಾರ ಮಾಡುವಂತೆ ಬಿಜೆಪಿ ನಾಯಕರಿಗೆ ಟಾಂಗ್​ ನೀಡಿದರು. ಲೋಕೋಪಯೋಗಿ ಇಲಾಖೆಯ ಅಕ್ರಮಗಳ ಬಗ್ಗೆ ಬೇರೆ ಸಂಸ್ಥೆಗಳಿಂದ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.