ಶಾಸಕರು ದುಬೈಗೆ ಓಡಿ ಹೋಗುವುದು ತಡೆಯಲು ಸಭೆ: ಕಾಂಗ್ರೆಸ್​ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 01, 2023 | 4:32 PM

ಶಾಸಕರು ದುಬೈಗೆ ಓಡಿ ಹೋಗುವುದು ತಡೆಯಲು ಕಾಂಗ್ರೆಸ್​ನವರ ಸಭೆ ಮಾಡುತ್ತಿದ್ದಾರೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವದ ದಿನದಂದು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಶಾಸಕರು ದುಬೈಗೆ ಓಡಿ ಹೋಗುವುದು ತಡೆಯಲು ಸಭೆ: ಕಾಂಗ್ರೆಸ್​ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ
ಸಚಿವೆ ಶೋಭಾ ಕರಂದ್ಲಾಜೆ
Follow us on

ನವದೆಹಲಿ, ನವೆಂಬರ್​​ 01: ಶಾಸಕರು ದುಬೈಗೆ ಓಡಿ ಹೋಗುವುದು ತಡೆಯಲು ಕಾಂಗ್ರೆಸ್​ನವರ ಸಭೆ ಮಾಡುತ್ತಿದ್ದಾರೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಾಗ್ದಾಳಿ ಮಾಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವದ ದಿನದಂದು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇಡೀ ದಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ ಅವಸರದಲ್ಲಿ ಕಾರ್ಯಕ್ರಮ ಮುಗಿಸಿ, ರಾಜಕೀಯ ಆರಂಭಿಸಿದೆ. ಕಾಂಗ್ರೆಸ್ ಒಳಬೇಗುದಿ ಕಡಿಮೆ ಮಾಡಲು ಮತ್ತು ಸಿಎಂ ಸಿದ್ದರಾಮಯ್ಯ, ಡಿಕೆಎಂ ಡಿ.ಕೆ ಶಿವಕುಮಾರ್ ಅವರನ್ನು ಒಂದು ಮಾಡಲು ಸಭೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉಚಿತ ಪ್ರಯಾಣ ಎಂದು ಬಸ್ ಕಡಿಮೆ ಮಾಡಿದೆ. ಅರ್ಧದಷ್ಟು ಬಸ್ ಸಂಚಾರ ಮಾಡುತ್ತಿಲ್ಲ. ಬಸ್‌ಗಳ ಡಿಸೇಲ್ ತುಂಬಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಲಕ್ಷ್ಮೀ ಯೋಜನೆ ಮಹಿಳೆಯರಿಗೆ ತಲುಪಿಲ್ಲ. ವಿದ್ಯುತ್ ಉಚಿತ ಅಂತ ಹೇಳಿದ್ರು ಆದರೆ ವಿದ್ಯುತ್ ಇಲ್ಲ. ರೈತರು ವಿದ್ಯುತ್ ಬರುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯನ್ನ ಕೆಳಗಿಳಿಸಲು ಷಡ್ಯಂತ್ರ ನಡೆದಿದೆ: ಬಸನಗೌಡ ಪಾಟೀಲ್ ಯತ್ನಾಳ್​

ವರ್ಗಾವಣೆಗೆ ಲಂಚ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಸರ್ಕಾರದ ವಿರುದ್ಧ ಶಾಪ ಹಾಕುತ್ತಿದ್ದಾರೆ. ಆರ್‌ಡಿ ಪಾಟೀಲ್ ಮತ್ತೆ ಲಂಚ ಪಡೆಯುತ್ತಿದ್ದಾರೆ. ಆದರೆ ಪ್ರಿಯಾಂಕಾ ಖರ್ಗೆ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ಅವ್ಯವಸ್ಥೆಗೆ ಶಾಸಕರು ಹಿಡಿಶಾಪ ಹಾಕುತ್ತಿದ್ದಾರೆ. ಶಾಸಕರ ಗುಂಪುಗಳಾಗುತ್ತಿವೆ, ಇದನ್ನು ತಡೆಯಲು ಹೈಕಮಾಂಡ್ ನಾಯಕರು ಬೆಂಗಳೂರಿಗೆ ತೆರಳಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸಿಎಂ, ಡಿಸಿಎಂ ಪರಸ್ಪರ ಕಿತ್ತಾಡುತ್ತಿದ್ದಾರೆ

ಬೈರತಿ ಸುರೇಶ್ ಆಪ್ತ ಮೌನೇಶ ಸರ್ಕಾರಿ ದಾಖಲೆಗಳನ್ನು ನಕಲಿ ಮಾಡುತ್ತಿದ್ದಾರೆ. ಸ್ಟೇಷನ್ ಬೇಲ್ ಕೊಟ್ಟು, ಅಕ್ರಮ ಮಾಡಲು ಮತ್ತೆ ಅವಕಾಶ ನೀಡುತ್ತಿದೆ. ರಾಜ್ಯದಲ್ಲಿ ಬಡವರ ಗೋಳಾಟ ಕೇಳುವವರಿಲ್ಲ. ಬರಗಾಲ ಇದೆ, ರೈತರ ಸಂಕಷ್ಟ ಕೇಳುವರಿಲ್ಲ. ಸಿಎಂ, ಡಿಸಿಎಂ ಪರಸ್ಪರ ಕಿತ್ತಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಸಿಬಿಐ ಕೇಸ್ ತಡೆ ರದ್ದಾಗಿದೆ. ಇದರ ಹಿಂದೆ ಯಾರ ಕೈವಾಡ ಇದೆ. ಅಧಿಕಾರಕ್ಕೆ ಹೊಡೆದಾಡುತ್ತಿದ್ದಾರೆ. ವಿಪಕ್ಷ ಶಾಸಕರಿಗೆ ಗೌರವ ಇಲ್ಲ, ಅನುದಾನ ಇಲ್ಲ. ಹಿಂದೆ ಕನಿಷ್ಠ 2-3 ಕೋಟಿ ರೂ. ಬರುತ್ತಿತ್ತು, ಇಂದು ಅನುದಾನ ಬರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನ ಬೇಕೆನ್ನುವವರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ: ಕಾಂಗ್ರೆಸ್​ ಶಾಸಕ ಕೊತ್ತೂರು ಮಂಜುನಾಥ್

ಗ್ಯಾರಂಟಿ ಫೇಲ್ ಆಯ್ತು, ಇತ್ತ ಬೊಕ್ಕಸವೂ ಖಾಲಿ ಆಯ್ತು. ಕೆಲವು ಸಚಿವರು ಇನ್ನು ಮೂರು ಉಪ ಮುಖ್ಯಮಂತ್ರಿಗಳು ಬೇಕು ಎನ್ನುತ್ತಾರೆ. ಇನ್ನು ಕೆಲವರು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮಗೆ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೇ ಬಿಟ್ಟು ತೊಲಗಿ ಎಂದಿದ್ದಾರೆ.

ನಾವೇ ವಿಪಕ್ಷ ನಾಯಕರು, ನಾವೇ ಪ್ರಶ್ನೆ ಮಾಡುತ್ತೇವೆ

ಸಮಸ್ಯೆ ಪ್ರಶ್ನಿಸಲು ವಿಪಕ್ಷ ನಾಯಕರು ಇಲ್ಲ ಪ್ರಶ್ನೆಗೆ ಉತ್ತರಿಸಿದ ಅವರು, ನಾವೇ ವಿಪಕ್ಷ ನಾಯಕರು, ನಾವೇ ಪ್ರಶ್ನೆ ಮಾಡುತ್ತೇವೆ. ಸಿಎಂ ಹಾರಿಕೆ ಉತ್ತರ ನೀಡುವುದು ನಿಲ್ಲಿಸಬೇಕು. ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಆರೋಪ‌ ಮಾಡುತ್ತಿದ್ದಾರೆ. ಸಿಎಂ ಅಂಕಿ ಅಂಶಗಳನ್ನು ತೆಗೆದು ನೋಡಲಿ. ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ. ಬಿಜೆಪಿ ಸರ್ಕಾರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ನೋಡಲಿ. ಅಂಕಿ ಅಂಶಗಳ ಜೊತೆಗೆ ನಾವು ಚರ್ಚಿಸಲು ಸಿದ್ಧ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.