ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ದೀರಿ: ಸಿದ್ದರಾಮಯ್ಯ ಹೇಳಿಕೆಗೆ ಜಿಟಿ ದೇವೇಗೌಡ ಕೆಂಡಾಮಂಡಲ

| Updated By: Rakesh Nayak Manchi

Updated on: Sep 01, 2023 | 2:42 PM

ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ದೀರಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರನ್ನು ಟೀಕಿಸಿದ್ದರು. ಈ ಹೇಳಿಕೆಯಿಂದ ಕರಳಿದ ಜಿಟಿ ದೇವೇಗೌಡ, ಚುನಾವಣೆಯಲ್ಲಿ ನಾನು 5 ಬಾರಿ ಗೆದ್ದಿದ್ದೇನೆ, ಆದರೆ ನೀವು ಸೋತಿದ್ದೀರಿ. ರಾಜಶೇಖರಮೂರ್ತಿ, ನನ್ನ ವಿರುದ್ಧ ಚುನಾವಣೆಯಲ್ಲಿ ನೀವು ಸೋತಿದ್ದೀರಿ ಎಂದರು.

ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ದೀರಿ: ಸಿದ್ದರಾಮಯ್ಯ ಹೇಳಿಕೆಗೆ ಜಿಟಿ ದೇವೇಗೌಡ ಕೆಂಡಾಮಂಡಲ
ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಬೆಂಗಳೂರು, ಸೆ.1: ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ದೀರಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಕೆಂಡಾಮಂಡಲರಾದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ (GT Devegowda), ನಾನು ಯಾರ ಸಹವಾಸದಲ್ಲಿ ಇದ್ದೇ ಅಂತ ಮೊದಲು ನೀವು ತಿಳಿದುಕೊಳ್ಳಿ. ಚುನಾವಣೆಯಲ್ಲಿ ನಾನು 5 ಬಾರಿ ಗೆದ್ದಿದ್ದೇನೆ. ಆದರೆ ನೀವು ರಾಜಶೇಖರಮೂರ್ತಿ, ನನ್ನ ವಿರುದ್ಧ ಸೋತಿದ್ದೀರಿ. 2013ರಲ್ಲಿ ನನ್ನನ್ನು ಸೋಲಿಸಲು ಬಂದಿದ್ದೀರಿ. ಆಗ ಸೋಲಿಸಲು ಆಯ್ತಾ? ಎಂದು ಪ್ರಶ್ನಿಸಿದರು.

ನಿಮ್ಮ ಹೇಳಿಕೆ ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಮಾಡಿದ ಅವಮಾನ ಎಂದು ಹೇಳಿದ ಜಿಟಿ ದೇವೇಗೌಡ, ಈ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ನೀವು ಬೈದಿಲ್ವಾ? ಆದರೆ ಈಗ ಯಾರ ಕಾಲ ಕೆಳಗೆ ನೀವು ಇದ್ದೀರಿ ಅಂತಾ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಇದನ್ನೂ ಓದಿ: ಕುರುವ, ಕೊರಮ, ಕೊರಚ ಸಮಾಜ ಪರಿಶಿಷ್ಟ ಜಾತಿಗೆ ಸೇರಿವೆ: ಎಸ್‌ಸಿ ಕೆಟಗರಿಯಿಂದ ತೆಗೆಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಿದ್ದು ಯಾರು? ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಅವರ ಜೊತೆಗೆ ಸೇರಿರಲಿಲ್ವಾ? 1983ರ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿದ್ದ ಸಮುದಾಯ ಯಾವುದು? ಗೆಲ್ಲಿಸಿದವರ ಹೆಸರನ್ನು ನೀವು ಹೇಳಲಿಲ್ಲ, ನೆನಪು ‌ಮಾಡಿಕೊಂಡಿಲ್ಲ. ನೀವು ಸಿಎಂ ಆಗಿದ್ದೀರಾ, ನೀವು ಯಾರಿಗೂ ಅಗೌರವ ತೋರಿಸಬೇಡಿ ಎಂದು ಜಿಟಿ ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು.

ಸೋನಿಯಾ ಗಾಂಧಿಗೆ ಭಾರತೀಯ ಪೌರತ್ವ ನೀಡಬೇಡಿ ಎಂದಿದ್ದ ಸಿದ್ದರಾಮಯ್ಯ

ಈ ಹಿಂದೆ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಪಕ್ಷವನ್ನು ಸೀಮೆಎಣ್ಣೆ ಪಾರ್ಟಿ ಎಂದು ಟೀಕಿಸಿದ್ದರು. ಬಿಜೆಪಿಯನ್ನು ಬೆಂಕಿ ಪೊಟ್ಟಣ ಪಾರ್ಟಿ ಎಂದು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನೂ ಬೈದಿದ್ದಾರೆ. ಸೋನಿಯಾ ಗಾಂಧಿಗೆ ಭಾರತೀಯ ಪೌರತ್ವ ನೀಡಬೇಡಿ ಎಂದು ಹೇಳಿದ್ದರು. ಆಗ ಕಾಂಗ್ರೆಸ್​​​ ಪಕ್ಷವನ್ನ ಟೀಕಿಸಿದವರು ಈಗ ಅವರ ಜೊತೆಗೆ ಸೇರಿದ್ದೀರಾ ಎಂದು ಪ್ರಶ್ನಿಸಿದರು.

ಉಪಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಲು ನಾನು ಏನೇನು ಮಾಡಿದ್ದೆ ಗೊತ್ತಿಲ್ವಾ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಜೆಡಿಎಸ್ ಶಾಸಕ, ನೀವು ಬೇರೆಯವರಿಗೆ ಅಧಿಕಾರ ನಡೆಸಲು ಬಿಡುವುದಿಲ್ಲ. ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅವಧಿಯನ್ನು 20 ತಿಂಗಳಿಗೆ ಇಳಿಸಿ ಅನ್ಯಾಯ ಮಾಡಿದ್ದೀರಿ. ನಾನು ನಾಯಕನೇ ಸುಮ್ಮನೆ ಏಕವಚನದಲ್ಲಿ ಮಾತಾಡಬೇಡಿ. ಅವನು ಜವಾನನೇ ಆಗಿರಲಿ ಗೌರವ ಕೊಡಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ