ಬೆಂಗಳೂರು: ಸಿಎಂ ಅಭ್ಯರ್ಥಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಶುರುವಾಗಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed), ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಆಸೆ ಇರುತ್ತದೆ. ನನಗೂ ಸಿಎಂ ಆಗುವ ಆಸೆ ಇದೆ. ಒಂದೇ ಸಮುದಾಯದಿಂದ ಯಾರೂ ಮುಖ್ಯಮಂತ್ರಿ ಆಗಲ್ಲ. ಒಕ್ಕಲಿಗ ಸಮುದಾಯದಂತೆ ನಮ್ಮ ಸಮುದಾಯ ದೊಡ್ಡದಿದೆ. ಎಲ್ಲ ಸಮಾಜದವರು ಸೇರಿ ಮತ ಕೊಟ್ರೆ ಸಿಎಂ ಆಗಬಹುದು. ರಾಜ್ಯಕ್ಕೆ ಒಳ್ಳೆಯದಾಗಬೇಕೆಂದರೆ ಸಿದ್ದರಾಮಯ್ಯ (Siddaramaiah) ಸಿಎಂ ಅನ್ನೋದು ಜನರ ಆಸೆ. ಹಾಗೇ ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಡಿಕೆ ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ.
ಸೋನಿಯಾ ಗಾಂಧಿಗೆ ಇಂದು ಇಡಿ ವಿಚಾರಣೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶಾಸಕರು, ಟಾರ್ಗೆಟ್ ಮಾಡಿ ಸೋನಿಯಾ ಗಾಂಧಿ ವಿಚಾರಣೆ ನಡೆಸುತ್ತಿದ್ದಾರೆ. ಬಿಜೆಪಿಯವರು ನಮ್ಮನ್ನು ಹೆದರಿಸಲು ವಿಚಾರಣೆ ಮಾಡುತ್ತಿದ್ದಾರೆ. ಮುಚ್ಚೋಗಿದ್ದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಿಸಿದ್ದಾರೆ. 10 ವರ್ಷದ ಹಿಂದೆ ನ್ಯಾಷನಲ್ ಹೆರಾಲ್ಡ್ ಕೇಸ್ ಕ್ಲೋಸ್ ಆಗಿತ್ತು. ಆದರೆ ಇದೀಗ ವಿಚಾರಣೆ ಹೆಸರಲ್ಲಿ ಸೋನಿಯಾ ಗಾಂಧಿ, ರಾಹುಲ್ಗೆ ಕಿರುಕುಳ ನೀಡುತ್ತಿದ್ದಾರೆಂದು ಹೇಳಿದರು.
ಇದನ್ನೂ ಓದಿ: ‘ಗುಮ್ಮ’ನ ಕರೆತಂದ ‘ವಿಕ್ರಾಂತ್ ರೋಣ’ ತಂಡ; ಹೇಗಿದೆ ನೋಡಿ ನಾಲ್ಕನೇ ಸಾಂಗ್
ದೇಶದಲ್ಲಿ ಕಾಂಗ್ರೆಸ್ನವರನ್ನು ಬಿಟ್ಟರೆ ಬೇರೆ ಯಾರು ಇಲ್ಲ. ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ರಾಜ್ಯದಲ್ಲಿ ನಾನು, ಡಿಕೆ ಶಿವಕುಮಾರ್ ಮೇಲೆ ಯಾಕೆ ದಾಳಿ ಮಾಡಿರೋದು? ಬೇರೆ ಯಾರು ಇಲ್ವಾ ಎಂದು ಬಿಜೆಪಿ ವಿರುದ್ಧ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
Published On - 11:24 am, Thu, 21 July 22