Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಹೆಚ್ಚು ಜಯ: ಪ್ರಕಾಶ್ ಅಮ್ಮಣ್ಣಾಯ

ಈ ಬಾರಿ ಕರ್ನಾಟಕದ ಚುನಾವಣೆಗೆ ಇದೇ ಮೊದಲ ಬಾರಿಗೆ ಸ್ಪರ್ಧಿಸುವವರಿಗೆ ಹೆಚ್ಚಿನ ಜಯ ದೊರೆಯುತ್ತದೆ. ಇಂಥದ್ದೊಂದು ನಿರ್ಧಾರ ಮಾಡುವುದು ಮುಖ್ಯ ಎಂಬುದು ಜ್ಯೋತಿಷಿ ಅಮ್ಮಣ್ಣಾಯ ಅವರ ಅಭಿಪ್ರಾಯ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಹೆಚ್ಚು ಜಯ: ಪ್ರಕಾಶ್ ಅಮ್ಮಣ್ಣಾಯ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಹೆಚ್ಚು ಜಯ: ಪ್ರಕಾಶ್ ಅಮ್ಮಣ್ಣಾಯ
Follow us
TV9 Web
| Updated By: Digi Tech Desk

Updated on:Nov 23, 2022 | 11:54 AM

ಬೆಂಗಳೂರು: ಮುಂದಿನ ವರ್ಷ ಅಂದರೆ 2023ರ ಏಪ್ರಿಲ್ ನಂತರ ಕರ್ನಾಟಕದಲ್ಲಿ ಚುನಾವಣೆ (Karnataka Election 2023) ನಡೆದಲ್ಲಿ ಹೊಸಬರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಇಳಿಸುವಂಥ ರಾಜಕೀಯ ಪಕ್ಷಗಳು ಅತಿ ಹೆಚ್ಚಿನ ಸ್ಥಾನಗಳು ಗೆಲ್ಲುತ್ತವೆ ಎಂದು ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ (Astrologer Prakash Ammannaya) ಅವರು ತಿಳಿಸಿದ್ದಾರೆ. ಹೀಗೆ ಅವರು ಭವಿಷ್ಯ ನುಡಿಯುವುದಕ್ಕೆ ಕಾರಣ ಏನು, ಅದರ ಹಿನ್ನೆಲೆ ಏನು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ. ಶೋಭಕೃತ್ ಸಂವತ್ಸರದಲ್ಲಿ ಚಾಂದ್ರಮಾನದಲ್ಲಿ ಬುಧ ರಾಜ ಹಾಗೂ ಶುಕ್ರ ಮಂತ್ರಿ ಆಗಿರುತ್ತಾನೆ, ಇನ್ನು ಸೌರಮಾನದಲ್ಲಿ ಶುಕ್ರ ರಾಜ ಹಾಗೂ ಬುಧ ಮಂತ್ರಿ ಆಗಿರುತ್ತಾನೆ. ಆದರೆ ಇದರ ಫಲ ಮಾತ್ರ ಒಂದೇ ಆಗಿರುತ್ತದೆ. ಬುಧ ಅಂದರೆ ಯುವರಾಜ. ಆದ್ದರಿಂದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸುವವರಿಗೆ ಹೆಚ್ಚಿನ ಜಯ ದೊರೆಯಲಿದೆ ಎಂಬುದು ಅಮ್ಮಣ್ಣಾಯ ಅವರ ಅಭಿಪ್ರಾಯವಾಗಿದೆ.

ಹಾಗಿದ್ದರೆ ಮುಂದೆ ಕರ್ನಾಟಕದಲ್ಲಿ ಸ್ಥಿರ ಸರ್ಕಾರ ಬರುತ್ತದೆಯಾ ಅಥವಾ ಅತಂತ್ರವೋ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ, ಇದನ್ನು ನಿಖರವಾಗಿ ಹೇಳಬೇಕೆಂದರೆ ಅದಕ್ಕೆ ರಾಜ್ಯಕ್ಕೆ ಚುನಾವಣೆ ಘೋಷಣೆ ಆಗುವ ದಿನದ ಆ ಕ್ಷಣದ ಮುಹೂರ್ತ ವಿಶ್ಲೇಷಣೆ ಮಾಡಬೇಕಾಗುತ್ತದೆ. ಆಗ ಕರಾರುವಾಕ್ ಆಗಿ ಹೇಳಬಹುದು ಎಂದು ಅವರು ಹೇಳಿದರು. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರ ಪೈಕಿ ವೃಷಭ, ಕನ್ಯಾ, ವೃಶ್ಚಿಕ ಹಾಗೂ ಮಕರ ಲಗ್ನದವರೇನಾದರೂ ಇದ್ದಲ್ಲಿ ಇವರಿಗೆ ಗೆಲುವು ಸಿಗುವುದು ಕಷ್ಟ. ಅದಕ್ಕೆ ಕಾರಣ ಏನು ಮತ್ತು ಯಾವ ಗ್ರಹ ಸ್ಥಿತಿ ಕಾರಣ ಎಂಬುದನ್ನು ಸಹ ಅವರು ವಿವರಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಗುರು ಗ್ರಹವು ಮೀನದಿಂದ ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲಿಂದ ಗುರುವು ಐದು, ಏಳು ಹಾಗೂ ಒಂಬತ್ತನೇ ಮನೆಯ ವೀಕ್ಷಣೆ ಮಾಡುತ್ತದೆ ಮತ್ತು ಈ ಸ್ಥಾನಗಳು ಕನ್ಯಾ, ವೃಶ್ಚಿಕ, ಮಕರ ಲಗ್ನಕ್ಕೆ ವ್ಯಯ ಸ್ಥಾನ ಆಗುತ್ತದೆ. ಇನ್ನು ವೃಷಭ ಲಗ್ನಕ್ಕಂತೂ ವ್ಯಯ ಸ್ಥಾನದಲ್ಲೇ ಗುರು ಗ್ರಹವು ಇರುತ್ತದೆ. ಆದ್ದರಿಂದ ಇವರಿಗೂ ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆ ಕಷ್ಟ ಎಂದರು.

ಲೇಖನ: ಎನ್.ಕೆ.ಸ್ವಾತಿ

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 am, Wed, 23 November 22

ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು