ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಸಿಡಿ ಭೀತಿ?; ಸಿಡಿ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ

| Updated By: ganapathi bhat

Updated on: Jul 30, 2021 | 3:41 PM

MP Renukacharya: ನನ್ನ ವಿರುದ್ಧ ಆರೋಪಿಸುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಜೀವನದಲ್ಲಿ ಅವರು ಏನು ಮಾಡಿದ್ದಾರೆಂದು ಯೋಚಿಸಲಿ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಸಿಡಿ ಭೀತಿ?; ಸಿಡಿ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ
ಶಾಸಕ ರೇಣುಕಾಚಾರ್ಯ
Follow us on

ಬೆಂಗಳೂರು: ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಸಿಡಿ ಭೀತಿ ಉಂಟಾಗಿದೆ. ಹೀಗಾಗಿ ರೇಣುಕಾಚಾರ್ಯ ಸಿಡಿ ಪ್ರಸಾರ ಮಾಡದಂತೆ ಮಧ್ಯಂತರ ತಡೆ ತರಲಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿದೆ. ಇಂದು (ಜುಲೈ 30) ಮಾತನಾಡಿದ ಅವರು ನನ್ನನ್ನು ಯಾರೂ ಸಹ ಬ್ಲ್ಯಾಕ್​​ಮೇಲ್ ಮಾಡಲು ಸಾಧ್ಯವಿಲ್ಲ. ಬ್ಲ್ಯಾಕ್​​ಮೇಲ್ ಖೆಡ್ಡಾಗೆ ಬೀಳಲ್ಲ ಎಂದು ಹೇಳಿಕೆ ನೀಡಿದ್ದಾರೆ. ನನ್ನ ವಿರುದ್ಧ ಆರೋಪಿಸುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಜೀವನದಲ್ಲಿ ಅವರು ಏನು ಮಾಡಿದ್ದಾರೆಂದು ಯೋಚಿಸಲಿ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ಯಾವುದನ್ನ ಬೇಕಾದರೂ ಎಡಿಟ್ ಮಾಡಬಹುದು. ಯಾರ ಮುಖ ಯಾವುದಕ್ಕೂ ಜೋಡಿಸಬಹುದು. ಯಾರದ್ದೋ ಕಾಲು, ಯಾರದ್ದೋ ದೇಹ ಗ್ರಾಫಿಕ್ಸ್ ಮಾಡಿಸಬಹುದು. ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡಿದ್ದಾರೆ. ಹೀಗಾಗಿ ನಾನು ತಡೆಯಾಜ್ಞೆ ತರುವುದಕ್ಕೆ ನೋಡುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನನ್ನು ಯಾರೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಬಿಎಸ್​ವೈ ಕೈಕಾಲು ಹಿಡಿದು ಯತ್ನಾಳ್ ಬಿಜೆಪಿಗೆ ಬಂದಿದ್ದಾರೆ
ಯತ್ನಾಳ್​ಗೆ ಯಡಿಯೂರಪ್ಪ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಯಡಿಯೂರಪ್ಪ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಯಾರೋ ಒಂದಿಬ್ಬರು ಮಾತಾಡಿದರೆ ಗೌರವ‌ ಕಡಿಮೆ‌ಯಾಗಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್​ವೈ ಕೈಕಾಲು ಹಿಡಿದು ಯತ್ನಾಳ್ ಬಿಜೆಪಿಗೆ ಬಂದಿದ್ದಾರೆ. ಜೆಡಿಎಸ್​ಗೆ ಹೋದಾಗ ಯತ್ನಾಳ್​ರ ಹಿಂದುತ್ವ ಎಲ್ಲಿ ಹೋಗಿತ್ತು? ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್​ನಲ್ಲಿ ಇದ್ದಾಗ ಯತ್ನಾಳ್​ ಅಲ್ಪಸಂಖ್ಯಾತರ ಓಲೈಕೆ ಮಾಡಿಲ್ವಾ ಎಂದು ಯತ್ನಾಳ್​ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿ ನಿವಾಸಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಭೇಟಿ; ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ‌ನೀಡುವಂತೆ ಒತ್ತಾಯ

ನಾನು ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ: ದೆಹಲಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ

(MP Renukacharya on Blackmail CD and slams Basanagouda Patil Yatnal BJP Politics)