AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಮ್ಮಾಯಿ ನಿವಾಸಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಭೇಟಿ; ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ‌ನೀಡುವಂತೆ ಒತ್ತಾಯ

Karnataka BJP Politics: ದಾವಣಗೆರೆ ಶಕ್ತಿ ಕೇಂದ್ರ, ರಾಜಧಾನಿಯಾಗಬೇಕಿತ್ತು. ವಾಣಿಜ್ಯ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆ ಇದು. ದಾವಣಗೆರೆ ವೈವಿದ್ಯಮಯ ಜಿಲ್ಲೆ. ಇಲ್ಲಿಗೆ ಒಂದು ಸಚಿವ ಸ್ಥಾನ ನೀಡಬೇಕೆಂದು ವರಿಷ್ಟರಲ್ಲಿ ಕೇಳಿದ್ದೇವೆ. ದಾವಣಗೆರೆ ಸಮಸ್ತ ಅಭಿವೃದ್ದಿಗೆ ಸಚಿವ ಸ್ಥಾನ ಕೇಳಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಬೊಮ್ಮಾಯಿ ನಿವಾಸಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಭೇಟಿ; ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ‌ನೀಡುವಂತೆ ಒತ್ತಾಯ
ಶಾಸಕ ರೇಣುಕಾಚಾರ್ಯ
TV9 Web
| Edited By: |

Updated on:Jul 28, 2021 | 5:04 PM

Share

ಬೆಂಗಳೂರು: ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ರಿಗೆ ಮನವಿ ಮಾಡಿದ್ದೇವೆ. ದಾವಣಗೆರೆ ಜಿಲ್ಲೆ ಸಮಸ್ತ ಅಭಿವೃದ್ಧಿಗೆ ಸಚಿವ ಸ್ಥಾನ ಕೇಳಿದ್ದೇವೆ ಎಂದು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಸಿಎಂ ಬೊಮ್ಮಾಯಿ ಮನೆ ನಿವಾಸದ ಬಳಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ದಾವಣಗೆರೆ ಶಕ್ತಿ ಕೇಂದ್ರ, ರಾಜಧಾನಿಯಾಗಬೇಕಿತ್ತು. ವಾಣಿಜ್ಯ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆ ಇದು. ದಾವಣಗೆರೆ ವೈವಿದ್ಯಮಯ ಜಿಲ್ಲೆ. ಇಲ್ಲಿಗೆ ಒಂದು ಸಚಿವ ಸ್ಥಾನ ನೀಡಬೇಕೆಂದು ವರಿಷ್ಟರಲ್ಲಿ ಕೇಳಿದ್ದೇವೆ. ದಾವಣಗೆರೆ ಸಮಸ್ತ ಅಭಿವೃದ್ದಿಗೆ ಸಚಿವ ಸ್ಥಾನ ಕೇಳಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ನನಗೆ ಸಚಿವ ಸ್ಥಾನ ನೀಡುವುದು ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ ನಾನು ಮಾಡಿದ ಕೆಲಸಗಳ ಮೇಲೆ ನನಗೆ ನಂಬಿಕೆ ಇದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಹೈಕಮಾಂಡ್ ಅವಕಾಶ ನೀಡಿದರೆ ಸಚಿವನಾಗಿ ಕೆಲಸ ಮಾಡುವೆ. ನನಗೆ ಅವಕಾಶ ನೀಡದಿದ್ದರೂ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ನಿವಾಸದ ಬಳಿ ತೇರದಾಳ ಶಾಸಕ ಸಿದ್ದು ಸವದಿ ಹೇಳಿಕೆ ನೀಡಿದ್ದಾರೆ. ನಮ್ಮ ರಾಷ್ಟ್ರ, ರಾಜ್ಯ ನೆಮ್ಮದಿಯಿಂದ ಇರಬೇಕಂದ್ರೆ ಬಿಜೆಪಿ ಪಕ್ಷ ಆಡಳಿತ ನಡೆಸಬೇಕು. ಹೈಕಮಾಂಡ್ ಅವಕಾಶ ಕೊಟ್ಟರೆ ಸಚಿವರಾಗಿ ಕೆಲಸ ನಿರ್ವಹಿಸುತ್ತೇವೆ, ಕೊಡದಿದ್ದರೂ ಕೆಲಸ ಮಾಡ್ತೇವೆ. ಸಾಮೂಹಿಕವಾಗಿ ಕೋರ್ ಕಮಿಟಿ ತೀರ್ಮಾನದಂತೆ, ಪಕ್ಷದ ನಿರ್ಣಯದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನನಗೆ ಸಚಿವ ಸ್ಥಾನ ನೀಡುವುದು ಪಕ್ಷಕ್ಕೆ ಬಿಟ್ಟಿದ್ದು ಎಂದು ಸಿಎಂ ಭೇಟಿ ಬಳಿಕ ಮಾಜಿ ಸಚಿವ ಅಂಗಾರ ಹೇಳಿಕೆ ನೀಡಿದ್ದಾರೆ. ಸಿಎಂ ಮನೆಗೆ ಮಾಜಿ ಸಚಿವ ಉಮೇಶ್ ಕತ್ತಿ ಕೂಡ ಆಗಮಿಸಿದ್ದಾರೆ. ಇತ್ತ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಿಂದ ಅರವಿಂದ ಬೆಲ್ಲದ್ ತೆರಳಿದ ಬೆನ್ನಲ್ಲೇ ಸಿ.ಪಿ.ಯೋಗೇಶ್ವರ್ ಆಗಮಿಸಿದ್ದಾರೆ. ಹಾಗೂ ಅರವಿಂದ ಬೆಲ್ಲದ್ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಸಿಎಂ ಬೊಮ್ಮಾಯಿಗೆ ಸಿ.ಪಿ. ಯೋಗೇಶ್ವರ್ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಬೊಮ್ಮಾಯಿ ಜನಪರ ಯೋಜನೆ ಘೋಷಿಸಿದ್ದಾರೆ. ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಾರೆ. ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಾರೆ. ಬೊಮ್ಮಾಯಿ ಮೇಲೆ ನನಗೆ ವಿಶ್ವಾಸವಿದೆ ಎಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.

ಕೆಐಎಬಿಯಿಂದ ದೆಹಲಿಗೆ ತೆರಳಿದ ಕೇಂದ್ರ ನಾಯಕರು ಕೇಂದ್ರದ ವೀಕ್ಷಕರಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ನಾಯಕರು ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.

ಇದನ್ನೂ ಓದಿ: ನಾನು ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ: ದೆಹಲಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ

Karnataka Politics: ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಬೆನ್ನಲ್ಲೇ ಸಂಪುಟ ಸೇರಲು ಶಾಸಕರ ಪ್ರಯತ್ನ ಶುರು

(MP Renukacharya meets Karnataka CM Basavaraj Bommai demands Minister Post for Davanagere)

Published On - 5:01 pm, Wed, 28 July 21