ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಕೇಂದ್ರ ನಾಯಕರಿಂದ ಅಭಿನಂದನೆ; ಫೋಟೋ ಶೇರ್​ ಮಾಡಿದ ಶೋಭಾ ಕರಂದ್ಲಾಜೆ

TV9 Digital Desk

| Edited By: Lakshmi Hegde

Updated on: Jul 28, 2021 | 2:55 PM

ಎರಡು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಿ.ಎಸ್​. ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದಾಗಿದೆ. ಅವರ ಸ್ಥಾನಕ್ಕೀಗ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಬಂದಿದ್ದಾರೆ. ಈಗ ಕೇಂದ್ರದ ಹಲವು ನಾಯಕರು ಯಡಿಯೂರಪ್ಪನವರಿಗೆ ಟ್ವೀಟ್ ಮೂಲಕ ವಿದಾಯ ಹೇಳುತ್ತಿದ್ದರೆ, ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿ, ಬಿ.ಎಸ್​.ಯಡಿಯೂರಪ್ಪನವರು ಕರ್ನಾಟಕ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಹಲವು ಸಾಧನೆಗಳನ್ನು ಮಾಡಿದ್ದಾರೆ. ಅದರಲ್ಲೂ ಬಿಜೆಪಿ ಪಕ್ಷದ ಸಂಘಟನೆಗೆ ಅಪಾರ ಶ್ರಮವಹಿಸಿದ್ದರು ಎಂದು ಹೇಳಿದ್ದಾರೆ. Shri @BSYBJP […]

ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಕೇಂದ್ರ ನಾಯಕರಿಂದ ಅಭಿನಂದನೆ; ಫೋಟೋ ಶೇರ್​ ಮಾಡಿದ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ ಮತ್ತು ಜೆಪಿ ನಡ್ಡಾ
Follow us

ಎರಡು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಿ.ಎಸ್​. ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದಾಗಿದೆ. ಅವರ ಸ್ಥಾನಕ್ಕೀಗ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಬಂದಿದ್ದಾರೆ. ಈಗ ಕೇಂದ್ರದ ಹಲವು ನಾಯಕರು ಯಡಿಯೂರಪ್ಪನವರಿಗೆ ಟ್ವೀಟ್ ಮೂಲಕ ವಿದಾಯ ಹೇಳುತ್ತಿದ್ದರೆ, ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿ, ಬಿ.ಎಸ್​.ಯಡಿಯೂರಪ್ಪನವರು ಕರ್ನಾಟಕ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಹಲವು ಸಾಧನೆಗಳನ್ನು ಮಾಡಿದ್ದಾರೆ. ಅದರಲ್ಲೂ ಬಿಜೆಪಿ ಪಕ್ಷದ ಸಂಘಟನೆಗೆ ಅಪಾರ ಶ್ರಮವಹಿಸಿದ್ದರು ಎಂದು ಹೇಳಿದ್ದಾರೆ.

ಹಾಗೇ, ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ ನಡ್ಡಾ, ಬಸವರಾಜ ಬೊಮ್ಮಾಯಿಯವರ ಕುಶಾಗ್ರಮತಿ ಮತ್ತು ವಿಶಾಲವಾದ ಅನುಭವದಿಂದ ರಾಜ್ಯ ಇನ್ನಷ್ಟು ವೇಗವಾಗಿ ಅಭಿವೃದ್ಧಿಹೊಂದುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.

ರಾಜನಾಥ ಸಿಂಗ್​ ಅಭಿನಂದನೆ ರಕ್ಷಣಾ ಸಚಿವ ರಾಜನಾಥ ಸಿಂಗ್​ ಕೂಡ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬೊಮ್ಮಾಯಿಯವರು ಖಂಡಿತ ಕರ್ನಾಟಕವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕರೆದೊಯ್ಯುತ್ತಾರೆಂಬ ನಂಬಿಕೆಯಿದೆ ಎಂದಿದ್ದಾರೆ.

ಶೋಭಾ ಕರಂದ್ಲಾಜೆಯಿಂದ ಶುಭ ಹಾರೈಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಟ್ವೀಟ್ ಮಾಡುವ ಮೂಲಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶುಭ ಹಾರೈಸಿದ್ದಾರೆ. ನಿಮ್ಮಲ್ಲಿರುವ ಅಪಾರ ಆಡಳಿತಾತ್ಮಕ ಅನುಭವ ಮತ್ತು ಸಮರ್ಥ ನಾಯಕತ್ವದ ಗುಣದಿಂದ ಕರ್ನಾಟಕವನ್ನು ಇನ್ನಷ್ಟು ವೇಗವಾಗಿ ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತೀರಿ ಎಂಬ ಭರವಸೆ ಇದೆ ಎಂದಿದ್ದಾರೆ. ಹಾಗೇ, ಪ್ರಮಾಣವಚನದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

JP Nadda Rajnath Singh convey the Best Wishes to Basavaraj Bommai

ತಾಜಾ ಸುದ್ದಿ

Related Stories

Click on your DTH Provider to Add TV9 Kannada