Breaking ಪತ್ರಾ ಚಾವ್ಲ್ ಹಗರಣ: ಸಂಜಯ್ ರಾವತ್ ಇಡಿ ಕಸ್ಟಡಿ ಆಗಸ್ಟ್ 8ರವರೆಗೆ ವಿಸ್ತರಣೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 04, 2022 | 2:44 PM

ಮುಂಬೈನ ಪತ್ರಾ ಚಾವ್ಲ್ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾದ ಹಿರಿಯ ನಾಯಕ ಸಂಜಯ್ ರಾವತ್ ಅವರನ್ನು ಬಂಧಿಸಲಾಗಿದ್ದು, ಇಡಿ ಕಸ್ಟಡಿ ಆಗಸ್ಟ್ 8ರವರೆಗೆ ವಿಸ್ತರಣೆ ಮಾಡಲಾಗಿದೆ.

Breaking ಪತ್ರಾ ಚಾವ್ಲ್ ಹಗರಣ: ಸಂಜಯ್ ರಾವತ್ ಇಡಿ ಕಸ್ಟಡಿ ಆಗಸ್ಟ್ 8ರವರೆಗೆ ವಿಸ್ತರಣೆ
ಸಂಜಯ್ ರಾವತ್
Follow us on

ಪತ್ರಾ ಚಾವ್ಲ್ ಹಗರಣ ಪ್ರಕರಣದಲ್ಲಿ (Patra Chawl money-laundering case) ಮುಂಬೈ ವಿಶೇಷ ನ್ಯಾಯಾಲಯವು ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರ ಇಡಿ (Enforcement Directorate) ಕಸ್ಟಡಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿದೆ. ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ  ಸಂಜಯ್ ರಾವತ್  ಅವರನ್ನು  ಸೋಮವಾರ ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿತ್ತು.ಸಂಜಯ್ ರಾವತ್ ಅವರ ಇಡಿ ಕಸ್ಟಡಿ ಅವಧಿ ಇಂದು (ಗುರುವಾರ) ಮುಗಿದಿದ್ದು, ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯ ಪ್ರಸ್ತುತ ಪ್ರಕರಣದ ತನಿಖೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ನ್ಯಾಯಾಲಯ ಹೇಳಿದೆ. 1.17 ಕೋಟಿ ಮತ್ತು 1.08 ಕೋಟಿ ವಿಚಾರಣೆ ಈ ಹಿಂದೆ ನ್ಯಾಯಾಲಯದಲ್ಲಿ ಆಗಿಲ್ಲ. ಹೆಚ್ಚಿನ ಮೊತ್ತ ಪತ್ತೆಯಾಗಿದೆ. ಮುಂದಿನ ವಿಚಾರಣೆಗಾಗಿ ಇಡಿ ಬ್ಯಾಂಕ್ ಖಾತೆ ಮಾಹಿತಿ ನೀಡಿದೆ. ಮುಂದಿನ ವಿಚಾರಣೆಗಳಿಗೆ ಹೆಚ್ಚಿನ ಅಂಶಗಳ ಅಗತ್ಯವಿದೆ. ಆದಾಗ್ಯೂ, 2022 ಆಗಸ್ಟ್ 8ರವರೆಗೆ ಅದನ್ನು ಮಾಡಬಹುದು ಎಂಬುದು ನನ್ನ ಅಭಿಪ್ರಾಯ. ಇಲ್ಲಿ ಇಡಿ ಎಲ್ಲಾ ಆಯಾಮಗಳನ್ನು ನೋಡಬಹುದು ಎಂದು ನ್ಯಾಯಾಲಯ ಹೇಳಿದೆ

ಇದಕ್ಕಿಂತ ಮುಂಚೆ ನ್ಯಾಯವಾದಿ ರಂಜೀತ್ ಸಾಂಗ್ಲೆ ಅವರು ಸಾಕ್ಷ್ಯದಾರ ಸ್ವಪ್ನಾ ಪಟಾಕರ್ ಅವರಿಗೆ ರಾವತ್ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಹಸ್ತಕ್ಷೇಪ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಸಿಆರ್ ಪಿಸಿ 167 ಸೆಕ್ಷನ್ ಅಡಿಯಲ್ಲಿ ಇಂಥಾ ಅರ್ಜಿ ಹೇಗೆ ಸಮರ್ಥನೀಯವಾಗಿದೆ ಎಂದು ಹೇಳಿಲ್ಲ. ಆರೋಪಿ ಯಾವುದಾದರೂ ಬೆದರಿಕೆಯೊಡ್ಡಿದ್ದರೆ ಅಥವಾ ಬೇರೆಯವರ ಮೂಲಕ ಬೆದರಿಕೆಯೊಡ್ಡಿದ್ದರೆ ಆ ವ್ಯಕ್ತಿ ಅದಕ್ಕೆ ಸಂಬಂಧಿಸಿದ ಸಂಸ್ಥೆಯ ಮೊರೆ ಹೋಗಬೇಕಿತ್ತು. ಅಲ್ಲಿ ಅವರಿಗೆ ಪರಿಹಾರ ಸಿಗದೇ ಇದ್ದರೆ ಅದು ಬೇರೆ ಮಾತು ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?

ಮುಂಬೈನ ಪತ್ರಾ ಚಾವ್ಲ್ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರನ್ನು ಬಂಧಿಸಲಾಗಿತ್ತು. 1,034 ಕೋಟಿ ರೂ. ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಈ ಹಿಂದೆ 2 ಬಾರಿ ವಿಚಾರಣೆ ನಡೆಸಲಾಗಿತ್ತು.
ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 9 ಗಂಟೆಗಳ ಕಾಲ ವಿಚಾರಣೆಯ ನಂತರ 60 ವರ್ಷದ ಸಂಜಯ್ ರಾವತ್ ಅವರನ್ನು ಬಂಧಿಸಲಾಯಿತು. ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Published On - 2:06 pm, Thu, 4 August 22