AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರಿಗೌಡ, ನಂಜೇಗೌಡರ ಬಗ್ಗೆ ಸ್ವಪಕ್ಷದವರ ಹೇಳಿಕೆಯನ್ನೇ ಖಂಡಿಸಿರುವ ಮುರುಗೇಶ್‌ ನಿರಾಣಿ

ಉರಿಗೌಡ ಮತ್ತು ನಂಜೇಗೌಡ ವಿಷಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಇದರಲ್ಲಿ ರಾಜಕಾರಣ ಬೇಡ ಎಂದು ಬೃಹತ್​ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿದರು.

ಉರಿಗೌಡ, ನಂಜೇಗೌಡರ ಬಗ್ಗೆ ಸ್ವಪಕ್ಷದವರ ಹೇಳಿಕೆಯನ್ನೇ ಖಂಡಿಸಿರುವ ಮುರುಗೇಶ್‌ ನಿರಾಣಿ
ಮುರುಗೇಶ್‌ ನಿರಾಣಿImage Credit source: varthabharati.in
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 19, 2023 | 8:14 PM

ಕಾರವಾರ: ಉರಿಗೌಡ ಮತ್ತು ನಂಜೇಗೌಡ (Urigowda Nanjegowda) ವಿಷಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಇದರಲ್ಲಿ ರಾಜಕಾರಣ ಬೇಡ ಎಂದು ಬೃಹತ್​ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ (Murugesh Nirani) ಹೇಳಿದರು. ಉತ್ತರ ಕನ್ನಡ ಜಿಲ್ಲೆ ಅಂಕೋಲದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದವರನ್ನು ಸೇರಿ ಹೇಳುತ್ತಿದ್ದೇನೆ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಅದನ್ನ ಬಿಟ್ಟು ಇದರಲ್ಲಿ ರಾಜಕಾರಣ ಸರಿ ಅಲ್ಲ. ಯುವಕರಿಗೆ ಉದ್ಯೋಗ ನೀಡುವುದರ ಬಗ್ಗೆ, ಕೃಷಿಕರ ಅಭಿವೃದ್ಧಿ ಬಗ್ಗೆ ಚಿಂತನೆ ಇರಬೇಕು. ಸುಮ್ಮನೆ ಟೈಮ್ ಹಾಳು ಮಾಡುವುದರ ಬಗ್ಗೆ ಹೇಳಿಕೆ ನೀಡಬಾರದು ಎಂದು ಸ್ವಪಕ್ಷದವರ ಹೇಳಿಕೆಯನ್ನು ಮುರಗೇಶ್ ನಿರಾಣಿ ಖಂಡಿಸಿದ್ದಾರೆ.

ಬಸವನಗೌಡ ಯತ್ನಾಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮತ್ತು ಅವರ ನಡುವಿನ ಗೊಂದಲ ನೂರಕ್ಕೆ ನೂರರಷ್ಟು ಸರಿ ಹೋಗಿದೆ. ಯತ್ನಾಳ ಕಡೆಯಿಂದ ಈಗ ಏನು ಉತ್ತರ ಬರುತ್ತಿಲ್ಲ. ನಮ್ಮಿಬ್ಬರ ನಡುವೆ ಸರಿ ಹೋಗಿದೆ ಎಂಬುದಕ್ಕೆ ಇದ್ದ ಸಾಕ್ಷಿ ಎಂದು ನಗೆ ಬೀರಿದರು. ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಹತ್ತಿ ಆಜಾನ್ ಕೂಗಿದ ಬಗ್ಗೆ ಪ್ರತಿಕ್ರಿಯಿಸಿದ್ದು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ತಪ್ಪು ಮಾಡಿದ್ದರೆ ಖಂಡಿತ ಕಾನೂನು ಕ್ರಮ ಆಗುತ್ತೆ. ನಮ್ಮ ಪೊಲೀಸ್ ಇಲಾಖೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೆ ಎಂದರು.

ಇದನ್ನೂ ಓದಿ: ಸುಮರ್ಣ ಮಂಡ್ಯ ಪುಸ್ತಕವನ್ನು ದೇವೇಗೌಡ ಬಿಡುಗಡೆ ಮಾಡಿದ್ರು, ಉರಿಗೌಡ ನಂಜೇಗೌಡ ಬಗ್ಗೆ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ ಎಂದ ಶೋಭಾ ಕರಂದ್ಲಾಜೆ

ಉರಿಗೌಡ, ನಂಜೇಗೌಡ ಒಕ್ಕಲಿಗ ಸಮುದಾಯದವರು: ಸಿಟಿ ರವಿ

ಇನ್ನು ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಸಿಟಿ ರವಿ, ಉರಿಗೌಡ, ನಂಜೇಗೌಡ ಒಕ್ಕಲಿಗ ಸಮುದಾಯದವರು ಎಂದಿದ್ದಾರೆ. ಊರಿಗೌಡ, ನಂಜೇಗೌಡ ಟಿಪ್ಪು ಕೊಂದವರು. ಅರಸು ಸಮುದಾಯಕ್ಕೆ ನಿಷ್ಠರಾದವರು. ಇವರ ಬಗ್ಗೆ ಜಾನಪದ‌ ಲಾವಣಿ ಇವೆ. ಕಥೆಗಳಿವೆ. ಇವತ್ತು ಟಿಪ್ಪು ವೈಭವಿಕರಿಸುವ ಜನರಿಗೆ ನಾನು ಪ್ರಶ್ನೆ ಕೇಳುತ್ತೇನೆ.

ಟಿಪ್ಪು ಮತ್ತು ಹೈದರಾಲಿ ಯಾರು? ಹೈದರಾಲಿ ಸಾಮಾನ್ಯ ಸೈನಿಕನಾಗಿ ಮೈಸೂರು ಅರಸರ ಬಳಿ ಕೆಲಸಕ್ಕೆ ಸೇರಿದ್ದ. ನಂಬಿಕೆ ಇಟ್ಟು ಹೈದರಾಲಿಗೆ ಕೆಲಸ ಕೊಟ್ಟಿದ್ದರು. ಆದರೆ ಅವರು ಮೈಸೂರು ಅರಸರಿಗೆ ದ್ರೋಹ ಮಾಡಿದರು. ನಿಮ್ಮ ನಿಷ್ಠೆ ಯಾರಿಗೆ, ಟಿಪ್ಪು ಮಾಡಿದ ಘನಕಾರ್ಯ ಏನು ಎಂದು ಪ್ರಶ್ನಿಸಿದರು. ಟಿಪ್ಪು ಮಾಡಿದ ಕನ್ನಡ ಆಡಳಿತ ಭಾಷೆಗೆ ಪಾರ್ಷಿ ಭಾಷೆ ಹೇರಿದ. ಪಾರ್ಷಿ ಭಾಷೆ ಎಲ್ಲಿಂದ ಬಂತು ಅದಕ್ಕೆ ಕಾರಣ ಯಾರು ಎಂದು ಕೇಳಿದರು.

ವಿವಾದದ ಹಿನ್ನೆಲೆ

ನರೇಂದ್ರ ಮೋದಿ ಮಂಡ್ಯಕ್ಕೆ ಬಂದ ವೇಳೆ ಅವರ ಸ್ವಾಗತಕ್ಕಾಗಿ ಮಾಡಿದ ದ್ವಾರ ಬಾಗಿಲಿಗೆ ಉರಿಗೌಡ, ನಂಜೇಗೌಡ ಹೆಸರು ಇಡಲಾಗಿತ್ತು. ಆದರೆ ಅಂದು ರಾತ್ರೋ ರಾತ್ರಿ ಅದನ್ನ ತೆರೆವು ಗೊಳಿಸಿ, ಬಾಲಗಂಗಾಧರನಾಥ ಸ್ವಾಮೀಜಿ ದ್ವಾರ ಬಾಗಿಲು ಅಂತಾ ಬದಲಾಯಿಸಲಾಗಿತ್ತು. ಇದಾದ ನಂತರ ಸಿ.ಟಿ. ರವಿ ಕೂಡ ಟಿಪ್ಪು ಕೊಂದದ್ದು ಉರಿಗೌಡ, ನಂಜೇಗೌಡ ಎಂದು ಹೆಸರು ಬಳಸಿ ಒಕ್ಕಲಿಗ ಅಸ್ತ್ರ ಹೂಡಿಸಿದ್ದರು. ಇದನ್ನೇ ಪ್ರತ್ಯಾಸ್ತ್ರ ಮಾಡಿಕೊಂಡ ಜೆಡಿಎಸ್ ಮತ್ತು ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು.

ಇದನ್ನೂ ಓದಿ: ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ ಪ್ರೇರಣೆ: ಅಡ್ಡಂಡ ಕಾರ್ಯಪ್ಪ

ಮಾಜಿ ಸಿಎಂ ಕುಮಾರಸ್ವಾಮಿ ಇದನ್ನು ಒಕ್ಕಲಿಗರ ಮೇಲೆ ಬಿಜೆಪಿ ವಕ್ರದೃಷ್ಟಿ ಎಂದು ಹೇಳಿದ್ದರು. ಬಿಜೆಪಿಯವರು ಇತಿಹಾಸದಲ್ಲೇ ಇಲ್ಲದ ವ್ಯಕ್ತಿಗಳನ್ನ ಸೃಷ್ಟಿಸಿ, ಒಕ್ಕಲಿಗ ಸಮುದಾಯಕ್ಕೆ ಅಗೌರವ ತೋರಿಸ್ತಿದ್ದಾರೆ. ಒಕ್ಕಲಿಗರು ಇದನ್ನ ಪ್ರತಿಭಟಿಸಬೇಕು ಎಂದಿದ್ದರು. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗರನ್ನು ಓಲೈಸುವ ಕೆಲಸದ ಮಾಡಿರೋ ಬಿಜೆಪಿ, ಇನ್ನೊಂದೆಡೆ ಟಿಪ್ಪು ಕೊಲೆಯ ಕಳಂಕವನ್ನು ಮೆತ್ತಿ, ಒಕ್ಕಲಿಗ ಸಮುದಾಯಕ್ಕೆ ಕಪ್ಪುಚುಕ್ಕೆ ಮೆತ್ತಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಟ್ವೀಟ್​ನಲ್ಲೇ ಕಿಡಿ ಕಾರಿದ್ದರು.

ನಂತರ ಬಿಜೆಪಿ ವಕ್ತಾರ ಸಿಟಿ ಮಂಜುನಾಥ್ ಮಂಡ್ಯದಲ್ಲೇ ಸ್ಪೋಟಕ ಸಾಕ್ಷ್ಯವನ್ನ ಬಿಡುಗಡೆ ಮಾಡಿದ್ದರು. 70 ವರ್ಷಗಳ ಹಿಂದಿನ ಲಾವಣಿ ಹಾಡನ್ನ ರಿಲೀಸ್ ಮಾಡಿದ್ದರು. ಅದರಲ್ಲಿ ಪರಂಪರಾಗತ ವೈರಿ ಗೌಡರು ತರಿದರು ಖಡ್ಗದಲ್ಲಿ ಎಂಬ ಪದ ಬಳಕೆ ಮಾಡಲಾಗಿತ್ತು. ಈ ಲಾವಣಿ ಹಾಡಿನ ಸಿಡಿಯನ್ನ ಕೆಪಿಸಿಸಿ ಕಚೇರಿ ಹಾಗೂ ಜೆಡಿಎಸ್ ಕೇಂದ್ರ ಕಚೇರಿಗೆ ಕೊರಿಯರ್ ಮಾಡುವುದರ ಮೂಲಕ ಟಕ್ಕರ್ ಕೊಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:14 pm, Sun, 19 March 23

ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ