ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ: ಕೃಷ್ಣಭೈರೇಗೌಡ ವಿರುದ್ಧ ಕಟೀಲ್​​ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Mar 19, 2023 | 1:47 PM

ಬ್ಯಾಟರಾಯನಪುರದಲ್ಲಿ ವಿಜಯಸಂಕಲ್ಪಯಾತ್ರೆ ನಡೆದಿದ್ದು, ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​​ ಕಟೀಲ್​​ಮಾತನಾಡಿ ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ ಶಾಸಕ ಕೃಷ್ಣಭೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ: ಕೃಷ್ಣಭೈರೇಗೌಡ ವಿರುದ್ಧ ಕಟೀಲ್​​ ವಾಗ್ದಾಳಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​​ ಕಟೀಲ್​​
Follow us on

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election) ಹತ್ತಿರವಾಗುತ್ತಿದ್ದು, ಬಿಸಿಲಿನ ತಾಪ ಏರುತ್ತಿರುವ ಹಾಗೆ ಪ್ರಚಾರದ ಕಾವು ಕೂಡ ಏರುತ್ತಿದೆ. ಬಿಜೆಪಿ (BJP) ವಿಜಯ ಸಂಕಲ್ಪ ಯಾತ್ರೆ (Vijay Sankalp Yatra) ಮೂಲಕ ರಾಜ್ಯದ ಮೂಲೆ ಮೂಲೆ ಸುತ್ತುತ್ತಿದ್ದು,  ಕೇಸರಿಯ ಬಿಸಿ ಗಾಳಿ ಎಲ್ಲಡೆ ಜೋರಾಗಿಯೇ ಬೀಸುತ್ತಿದೆ. ಇಂದು (ಮಾ.19) ಬ್ಯಾಟರಾಯನಪುರದಲ್ಲಿ ವಿಜಯಸಂಕಲ್ಪಯಾತ್ರೆ ನಡೆದಿದ್ದು, ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​​ ಕಟೀಲ್​​ ಮಾತನಾಡಿ​​ ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ ಶಾಸಕ ಕೃಷ್ಣಭೈರೇಗೌಡ (Krishna Byregowda) ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ನಾಯಕತ್ವದಲ್ಲಿ 150 ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಉಗ್ರರು, ಭ್ರಷ್ಟಾಚಾರಿಗಳ ದೇಶ ಆಗಿತ್ತು. ಆಗ ಕುಟುಂಬವಾದಕ್ಕೆ ಮನ್ನಣೆ ಕೊಡುವ ಕೆಲಸ ಆಯಿತು. ಕಾಂಗ್ರೆಸ್​​ಗೆ ಇನ್ನೊಂದು ಹೆಸರೇ ಭಯೋತ್ಪಾದನೆ ಎಂದು ಕಾಂಗ್ರೆಸ್​ ವಿರುದ್ಧ ಆರೋಪ ಮಾಡಿದರು.

ಇದನ್ನೂ ಓದಿ: ಸ್ವಪಕ್ಷೀಯ ನಾಯಕರಿಗೆ ತಲೆನೋವಾದ ರಮೇಶ್ ಜಾರಕಿಹೊಳಿ; ಅಷ್ಟಕ್ಕೂ ಏನಿದು? ಯಾವುದು ಆ ಕ್ಷೇತ್ರಗಳು ಅಂತೀರಾ ಸ್ಟೋರಿ ನೋಡಿ

ಡಿಕೆ ಶಿವಕುಮಾರಗೆ ಎರಡು ಕುಕ್ಕರ್​ಗಳ​ ಮೇಲೆ ಪ್ರೀತಿ ಇದೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವಂತಿರಲಿಲ್ಲ. ಭಯೋತ್ಪಾದಕರ ಬೆಂಗಾವಲಾಗಿ ಕಾಂಗ್ರೆಸ್ ನಿಂತಿತ್ತು. ಕುಕ್ಕರ್ ಬಾಂಬ್ ಸ್ಫೋಟವಾದಾಗ ಡಿಕೆ ಶಿವಕುಮಾರ್​​ ಕಣ್ಣಲ್ಲಿ ನೀರು ಬಂತು. ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಕಣ್ಣಲ್ಲಿ ನೀರು ಬರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರಗೆ ಎರಡು ಕುಕ್ಕರ್​ಗಳ​ ಮೇಲೆ ಪ್ರೀತಿ ಇದೆ. ಒಂದು ಬೆಳಗಾವಿ ಕುಕ್ಕರ್​, ಮತ್ತೊಂದು ಮಂಗಳೂರು ಕುಕ್ಕರ್. ಪಾಕಿಸ್ತಾನದ ಜನರು ಮಸೀದಿಯ ಮುಂದೆ ನಿಂತು ಪಾಕಿಸ್ತಾನ ಉಳಿಯಲು ನರೇಂದ್ರ ಮೋದಿ ಬೇಕು ಅಂತ ಪ್ರಾರ್ಥನೆ ಮಾಡುತ್ತಾರೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Sun, 19 March 23