ಪ್ರಧಾನಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಅಂದ್ರೆ, ಸಿದ್ದರಾಮಯ್ಯದು ‘ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್’- ಕಟೀಲು ವಾಗ್ದಾಳಿ

ಒಬ್ಬರಿಗೊಬ್ಬರು ಕಾದಾಟ ಶುರುಮಾಡಿದ್ದಾರೆ. ಉಗ್ರಪ್ಪ ಜೀವಮಾನದಲ್ಲಿಯೇ ಪಿಸು ಮಾತು ಆಡಿದವರಲ್ಲ. ಅವರು ಉಗ್ರವಾಗೇ ಮಾತನಾಡುವರು.

ಪ್ರಧಾನಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರೆ, ಸಿದ್ದರಾಮಯ್ಯದು ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್- ಕಟೀಲು ವಾಗ್ದಾಳಿ
ಸಿದ್ದರಾಮಯ್ಯ, ನಳಿನ್ ಕುಮಾರ್ ಕಟೀಲು
Updated By: sandhya thejappa

Updated on: Oct 19, 2021 | 1:26 PM

ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು (Nalin Kumar Kateel) ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪ್ರಧಾನಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರೆ, ಸಿದ್ದರಾಮಯ್ಯದು ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್ ಅಂತ ಹುಬ್ಬಳ್ಳಿಯಲ್ಲಿ ನಳಿನ್ ಕಟೀಲು ಹೇಳಿದ್ದಾರೆ. ಅವರಿಗೆ ಸೋಲುವ ಭೀತಿ ಶುರುವಾಗಿದೆ. ಅದಕ್ಕಾಗಿ ಅಲ್ಪಸಂಖ್ಯಾತ ಓಲೈಕೆ ಮಾಡುತ್ತಿದ್ದಾರೆ. ಡಿಕೆಶಿ-ಸಿದ್ದು ಜೋಡೆತ್ತಲ್ಲ, ಅವರು ಕಾಡೆತ್ತು. ಒಬ್ಬರಿಗೊಬ್ಬರು ಕಾದಾಟ ಶುರುಮಾಡಿದ್ದಾರೆ. ಉಗ್ರಪ್ಪ ಜೀವಮಾನದಲ್ಲಿಯೇ ಪಿಸು ಮಾತು ಆಡಿದವರಲ್ಲ. ಅವರು ಉಗ್ರವಾಗೇ ಮಾತನಾಡುವರು. ಪಿಸುಮಾತಿನ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಅಂತ ಕಟೀಲು ತಿಳಿಸಿದ್ದಾರೆ.

ಕಾಂಗ್ರೆಸ್ ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗಲ್ಲ. ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ 2 ಹೋಳಾಗಿರುತ್ತದೆ ಎಂದು ಮಾತನಾಡಿದ ಕಟೀಲು, ಜೆಡಿಎಸ್ ಕುಟುಂಬ ರಾಜಕೀಯ ಮಾಡುತ್ತಿದೆ. ಹೀಗಾಗಿ ಮುಂದಿನ ಚುನಾವಣೆಗೆ ಎರಡು ಪಕ್ಷ ಹೋಗುತ್ತವೆ. ಕಾಂಗ್ರೆಸ್ ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಅಧ್ಯಕ್ಷಗಿರಿಗೆ ಪೈಪೋಟಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ ಅಂತ ಹೇಳಿದರು.

ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಇತ್ತ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೊಗಿದ್ರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಗವಹಿಸಿ ಜೈಲಿಗೆ ಹೋದ್ರಾ? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ರಾ? ಅವರಿಗೆ ಪಕ್ಷವೇ ಮುನ್ನಡೆಸಲು ಆಗುತ್ತಿಲ್ಲ, ದೇಶ ಮುನ್ನಡೆಸ್ತಾರಾ? ಅಂತ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

99 ಕೋಟಿ ಡೋಸ್ ಕೊವಿಡ್​ 19 ಲಸಿಕೆ ನೀಡಿಕೆ, 100 ಕೋಟಿ ಸಾಧನೆಗೆ ತುಂಬ ಸನಿಹ; ಫುಲ್​ ಖುಷಿಯಿಂದ ಟ್ವೀಟ್​ ಮಾಡಿದ ಆರೋಗ್ಯ ಸಚಿವ

Apple Event: ಭಾರತದಲ್ಲಿ ಆಪಲ್‌ ಮ್ಯಾಕ್‌ಬುಕ್‌ ಪ್ರೊ, ಏರ್​​ಪಾಡ್ಸ್ ಮಾಡೆಲ್‌ ಬಿಡುಗಡೆ: ಏನು ವಿಶೇಷತೆ?

Published On - 1:19 pm, Tue, 19 October 21