National Herald case ಎರಡನೇ ಸುತ್ತಿನ ವಿಚಾರಣೆ ಮುಕ್ತಾಯ; ಮೂರನೇ ಸುತ್ತಿನ ವಿಚಾರಣೆಗೆ ಇಡಿ ಮುಂದೆ ನಾಳೆ ಹಾಜರಾಗಲಿದ್ದಾರೆ ಸೋನಿಯಾ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Jul 26, 2022 | 8:50 PM

ಎರಡನೇ ಸುತ್ತಿನ ವಿಚಾರಣೆ ಇಂದು ನಡೆದಿದ್ದು ಮೂರನೇ ಸುತ್ತಿನ ವಿಚಾರಣೆಗಾಗಿ ಬುಧವಾರ ಮತ್ತೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಲಾಗಿದೆ.

National Herald case ಎರಡನೇ ಸುತ್ತಿನ ವಿಚಾರಣೆ ಮುಕ್ತಾಯ; ಮೂರನೇ ಸುತ್ತಿನ ವಿಚಾರಣೆಗೆ ಇಡಿ ಮುಂದೆ ನಾಳೆ ಹಾಜರಾಗಲಿದ್ದಾರೆ ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Follow us on

ದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ (National Herald case)  ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಮಂಗಳವಾರ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಎರಡನೇ ಸುತ್ತಿನ ವಿಚಾರಣೆ ಇಂದು ನಡೆದಿದ್ದು ಮೂರನೇ ಸುತ್ತಿನ ವಿಚಾರಣೆಗಾಗಿ ಬುಧವಾರ ಮತ್ತೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಸಂಜೆ 7 ಗಂಟೆಯ ಮೊದಲು ತನ್ನ ಹೇಳಿಕೆಯನ್ನು ದಾಖಲಿಸಿ ಇಡಿ ಕಚೇರಿಯಿಂದ ಹೊರಟಿದ್ದಾರೆ. ಕಾಂಗ್ರೆಸ್ ನಾಯಕಿ ತನ್ನ ಝೆಡ್ ಪ್ಲಸ್ ಶಸ್ತ್ರಸಜ್ಜಿತ ಭದ್ರತೆಯೊಂದಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಇಡಿ ಕಚೇರಿಯನ್ನು ತಲುಪಿದ್ದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಅವರೊಂದಿಗೆ ಇದ್ದರು.

ಕಾಂಗ್ರೆಸ್ ಅಧ್ಯಕ್ಷರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಡಿ ಕಚೇರಿಯಿಂದ ಹೊರಟು ಮಧ್ಯಾಹ್ನ 3:30ಕ್ಕೆ ಮತ್ತೆ ಹಾಜರಾಗಿದ್ದರು. ಇದು ಭೋಜನ ವಿರಾಮ ಆಗಿತ್ತು. 75ರ ಹರೆಯದ ಸೋನಿಯಾ ಅವರ ವಿಚಾರಣೆ ಮತ್ತು ಹೇಳಿಕೆಗಳ ದಾಖಲಾತಿಯು ಸಮನ್ಸ್ ಪರಿಶೀಲನೆ ಮತ್ತು ಹಾಜರಾತಿ ಶೀಟ್‌ಗೆ ಸಹಿ ಮಾಡುವುದು ಸೇರಿದಂತೆ ಆರಂಭಿಕ ಔಪಚಾರಿಕತೆಗಳ ನಂತರ ಬೆಳಿಗ್ಗೆ 11:15 ಕ್ಕೆ ಪ್ರಾರಂಭವಾಯಿತು. ಜುಲೈ 21 ರಂದು ಅವರನ್ನು ಎರಡು ಗಂಟೆಗಳ ಕಾಲ ಪ್ರಶ್ನಿಸಿದ್ದು 28 ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

Published On - 8:38 pm, Tue, 26 July 22