Parliament monsoon session ರಾಜ್ಯಸಭೆ ಕಲಾಪದಿಂದ ಆಪ್ ಸದಸ್ಯ ಸಂಜಯ್ ಸಿಂಗ್ ಅಮಾನತು

ಮಂಗಳವಾರ  7 ಟಿಎಂಸಿ,  ಡಿಎಂಕೆಯ ಆರು ಮತ್ತು ಸಿಪಿಐ, ಸಿಪಿಎಂ, ಟಿಆರ್​​ಎಸ್ ಪಕ್ಷದ  ಸದಸ್ಯರನ್ನು ಕಲಾಪದಿಂದ ಅಮಾನತು ಮಾಡಲಾಗಿತ್ತು. ಇಲ್ಲಿಯವರಿಗೆ 24 ಸಂಸದರನ್ನು ಕಲಾಪದಿಂದ ಅಮಾನತು  ಮಾಡಲಾಗಿದೆ.

Parliament monsoon session ರಾಜ್ಯಸಭೆ ಕಲಾಪದಿಂದ ಆಪ್ ಸದಸ್ಯ  ಸಂಜಯ್ ಸಿಂಗ್ ಅಮಾನತು
ಸಂಜಯ್ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 27, 2022 | 1:10 PM

ರಾಜ್ಯಸಭಾ ಕಲಾಪ ವೇಳೆ ಅಶಿಸ್ತಿನ ವರ್ತನೆಗಾಗಿ ಆಮ್ ಆದ್ಮಿ ಪಕ್ಷದ (AAP) ಸದಸ್ಯ ಸಂಜಯ್ ಸಿಂಗ್ (Sanjay Singh)  ಅವರನ್ನು ಒಂದು ವಾರಗಳ ಕಾಲ ರಾಜ್ಯಸಭೆಯ (Rajya sabha) ಕಲಾಪದಿಂದ ಅಮಾನತು ಮಾಡಲಾಗಿದೆ.  ವಿರೋಧ ಪಕ್ಷದ 19 ಸಂಸದರನ್ನು ಮಂಗಳವಾರ ಕಲಾಪದಿಂದ ಅಮಾನತು ಮಾಡಿದ ಬೆನ್ನಲ್ಲೇ ಇಂದು(ಬುಧವಾರ) ಸಂಜಯ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ. ನಿನ್ನೆ  7 ಟಿಎಂಸಿ,  ಡಿಎಂಕೆಯ ಆರು ಮತ್ತು ಸಿಪಿಐ, ಸಿಪಿಎಂ, ಟಿಆರ್​​ಎಸ್ ಪಕ್ಷದ  ಸದಸ್ಯರನ್ನು ಕಲಾಪದಿಂದ ಅಮಾನತು ಮಾಡಲಾಗಿತ್ತು. ಇಲ್ಲಿಯವರಿಗೆ 24 ಸಂಸದರನ್ನು ಕಲಾಪದಿಂದ ಅಮಾನತು  ಮಾಡಲಾಗಿದೆ.  12 ಗಂಟೆಗೆ ಪ್ರಶ್ನೋತ್ತರ ವೇಳೆಗಾಗಿ ಸದನ ಕಲಾಪ ಪುನಾರಂಭವಾದಾಗ ಉಪ ಸಭಾಪತಿ ಹರಿವಂಶ್ ಅವರು ಮಂಗಳವಾರ ಪೇಪರ್ ಹರಿದು ಅದನ್ನು ಸಭಾಪತಿಯವರತ್ತ ಎಸೆದಿದ್ದಕ್ಕಾಗಿ ಸಂಜಯ್ ಸಿಂಗ್ ಅವರನ್ನು ಅಮಾನತು ಮಾಡಿದ್ದಾರೆ. ಸಿಂಗ್ ಅವರ ವರ್ತನೆ ಅಶಿಸ್ತಿನಿಂದ ಕೂಡಿದ್ದು ಇದು ಸಭಾಪತಿಯವರಿಗೆ ಮಾಡಿದ ಅವಮಾನ ಎಂದು ಉಪ ಸಭಾಪತಿ ಹೇಳಿದ್ದಾರೆ. ಇದಾದ ಕೂಡಲೇ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಸಿಂಗ್ ಅವರನ್ನು ಒಂದು ವಾರ ರಾಜ್ಯಸಭಾ ಕಲಾಪದಿಂದ ಅಮಾನತು ಮಾಡುವ ನಿರ್ಣಯ ಅಂಗೀಕರಿಸಿದರು.

ಮಂಗಳವಾರ ರಾಜ್ಯಸಭೆಯಲ್ಲಿ ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಮಾಡಿದ್ದಕ್ಕೆ 19 ಸದಸ್ಯರನ್ನು  ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಸದಸ್ಯೆ ಸುಶ್ಮಿತಾ ದೇವ್, ಡಾ ಶಂತನು ಸೇನ್, ಡೋಲಾ ಸೇನ್, ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ 19 ಸದಸ್ಯರನ್ನು ಅಮಾನತು ಮಾಡಲಾಗಿದೆ. ಜಿಎಸ್ಟಿ (GST), ಬೆಲೆ ಏರಿಕೆ ವಿರುದ್ಧ ಇವರು ಪ್ಲೆಕಾರ್ಡ್ ಹಿಡಿದು ಸದನದ ಬಾವಿಗಿಳಿದು ಘೋಷಣೆ ಕೂಗಿದ್ದಾರೆ. ಈ ರೀತಿ ಸದನದ ಬಾವಿಗಿಳಿದಿರುವುದು ದುರ್ನಡತೆ ಎಂದು ಹೇಳಿ ಇವರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ . ಸೋಮವಾರ ಇದೇ ರೀತಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ ನಾಲ್ವರು ಸಂಸದರನ್ನು ಲೋಕಸಭೆಯ ಕಲಾಪದಿಂದ ಅಮಾನತು ಮಾಡಲಾಗಿತ್ತು.

ಜುಲೈ 21 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ . ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಮೊದಲಾದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಪ್ರತಿಪಕ್ಷಗಳ ಸಂಸದರು ಒತ್ತಾಯಿಸುತ್ತಿದ್ದು, ಸದನ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ.

Published On - 12:50 pm, Wed, 27 July 22

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ