ದೆಹಲಿ: ದ್ರೌಪದಿ ಮುರ್ಮು (Droupadi Murmu) ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕ (Rajya Sabha chairman) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಅವರ ಸ್ಥಾನಕ್ಕನುಗುಣವಾಗಿ ಆಸನ ವ್ಯವಸ್ಥೆ ಮಾಡಿರಲಿಲ್ಲ ಎಂದು ಹಲವಾರು ವಿಪಕ್ಷ ನಾಯಕರು ಸೋಮವಾರ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಮುರ್ಮು ಅವರು ಇಂದು ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಪ್ರಮಾಣವಚನ ಸಮಾರಂಭ ನಡೆದಿತ್ತು. ಕಾಂಗ್ರೆಸ್, ಎನ್ಸಿಪಿ, ಟಿಎಂಸಿ, ಶಿವಸೇನಾ, ಸಿಪಿಐ, ಸಿಪಿಎಂ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕರು ಖರ್ಗೆ ಅವರಿಗೆ ಆದ ಅವಮಾನ ಬಗ್ಗೆ ಆಘಾತ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವಿಟರ್ನಲ್ಲಿ ಪತ್ರವೊಂದನ್ನು ಶೇರ್ ಮಾಡಿದ್ದು, ಟಿಎಂಸಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ರಾಜ್ಯಸಭೆಯ ಗೌರವಾನ್ವಿತ ಅಧ್ಯಕ್ಷರಿಗೆ ಈಗ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಇಂದು, ಗೌರವಾನ್ವಿತ ರಾಷ್ಟ್ರಪತಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವರ ಸ್ಥಾನಕ್ಕನುಗುಣವಾಗಿ ಆಸನ ನೀಡಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
Letter submitted to Hon’ble Chairman, Rajya Sabha by all Opposition Parties (including TMC) just now. pic.twitter.com/tapyVKFS1s
— Jairam Ramesh (@Jairam_Ramesh) July 25, 2022
ಈ ಬಗ್ಗೆ ನಮ್ಮ ಆಘಾತ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಅತೀ ಹಿರಿಯ ನಾಯಕರಿಗೆ ಪ್ರಾಶಸ್ತ್ಯ ನೀಡಿಲ್ಲ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.
Published On - 7:36 pm, Mon, 25 July 22