ಹೆಚ್​ಡಿಕೆ ವಿರುದ್ಧ ಪೋಸ್ಟರ್ ಅಂಟಿಸಿರುವ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ​: ಜೆಡಿಎಸ್​ ಮಾಜಿ ಶಾಸಕ

ನಾವು ನಿಮ್ಮ (ಕಾಂಗ್ರೆಸ್​ ನಾಯಕರ) ಪೋಸ್ಟರ್​ಗಳನ್ನು ಅಂಟಿಸುವುದು ದೊಡ್ಡ ವಿಚಾರವಲ್ಲ. ನೀವು ಒಂದು ಮಾಡಿದರೇ, ನಮಗೆ ಹತ್ತು ಮಾಡುವ ಶಕ್ತಿ ಇದೆ. ಇದು ರಾಜಕಾರಣದಲ್ಲಿ ಶಾಶ್ವತ ಅಲ್ಲ. ಇದು ನಿಮ್ಮ ಮೂರ್ಖತನ ಗೃಹ ಇಲಾಖೆಗೆ ಎಚ್ಚರಿಕೆ ನೀಡುತ್ತಿದ್ದೇವೆ. ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡುತ್ತೇವೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಜೆಡಿಎಸ್​ ಮಾಜಿ ಶಾಸಕ ಮಂಜುನಾಥ್​ ಒತ್ತಾಯಿಸಿದರು.

ಹೆಚ್​ಡಿಕೆ ವಿರುದ್ಧ ಪೋಸ್ಟರ್ ಅಂಟಿಸಿರುವ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ​: ಜೆಡಿಎಸ್​ ಮಾಜಿ ಶಾಸಕ
ಜೆಡಿಎಸ್​ ಮಾಜಿ ಶಾಸಕ ಎ ಮಂಜುನಾಥ್​
Follow us
| Updated By: ವಿವೇಕ ಬಿರಾದಾರ

Updated on: Nov 21, 2023 | 1:44 PM

ಬೆಂಗಳೂರು ನ.21: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಪೋಸ್ಟರ್ ಅಂಟಿಸಿರುವ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಇದ್ದಾರೆ. ಡಿಕೆ ಶಿವಕುಮಾರ್ ಮತ್ತು ಅವರ ತಂಡ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್​ ಮಾಜಿ ಶಾಸಕ ಎ ಮಂಜುನಾಥ್ (Manjunath) ಆರೋಪ ಮಾಡಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್​ನವರು​​ ಪೋಸ್ಟರ್ ಅಂಟಿಸಿ ಅಪಪ್ರಚಾರ ಮಾಡಿ, ತೇಜೋವಧೆ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್​ನವರು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಮಯದಲ್ಲಿ ಪೇ ಸಿಎಂ ಪೊಸ್ಟರ್​ ಅನ್ನು ರಾತ್ರೊರಾತ್ರಿ ಅಂಟಿಸಿದರು. ಈಗ ಸರ್ಕಾರವನ್ನು ಟೀಕೆ ಮಾಡುವವರ ಬಗ್ಗೆ ವ್ಯಂಗ್ಯವಾದ ಪೋಸ್ಟರ್ ಅಂಟಿಸಿದರೇ ಮೇಲುಗೈ ಸಾಧಿಸುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ನಾವು ನಿಮ್ಮ ಪೋಸ್ಟರ್​ಗಳನ್ನು ಅಂಟಿಸುವುದು ದೊಡ್ಡ ವಿಚಾರವಲ್ಲ. ನೀವು ಒಂದು ಮಾಡಿದರೇ, ನಮಗೆ ಹತ್ತು ಮಾಡುವ ಶಕ್ತಿ ಇದೆ. ಇದು ರಾಜಕಾರಣದಲ್ಲಿ ಶಾಶ್ವತ ಅಲ್ಲ. ಇದು ನಿಮ್ಮ ಮೂರ್ಖತನ ಗೃಹ ಇಲಾಖೆಗೆ ಎಚ್ಚರಿಕೆ ನೀಡುತ್ತಿದ್ದೇವೆ. ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡುತ್ತೇವೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಸುತ್ತಮುತ್ತ ಪೊಲೀಸ್​ ರೌಂಡ್ಸ್

ವಿದ್ಯುತ ವಿಚಾರದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಪೋಸ್ಟರ್​ ಅಂಟಿಸಿದಾಗ ಏನ್ ಮಾಡುತ್ತಿದ್ರಿ..?ನಿನ್ನೆ ಕೂಡ ಅಂಟಿಸಿದ್ದಾರೆ. ಗೃಹ ಸಚಿವರೇ ಬೀದಿ ಬಿದಿಯಲ್ಲಿ ಮಾರಾಮಾರಿ ನಡೆಯುಂತದ್ದು ಸೃಷ್ಟಿ ಆಗುತ್ತೆ. ನಮ್ಮ ವರಿಷ್ಠರು ಇಂತಹದಕ್ಕೆ ಅವಕಾಶ ಕೊಟ್ಟಿಲ್ಲ. ದುಡ್ಡಿದೆ, ಏಜೆನ್ಸಿ ಫಿಕ್ಸ್ ಮಾಡಿಕೊಂಡಿದ್ದೀರಿ. ಇದರ ಸಂಪೂರ್ಣ ಮಾಹಿತಿ ನಮಗೆ ಇದೆ. ನಾವೆಲ್ಲಾ ಒಂದು ಸಭೆ ಮಾಡಿದ್ದೇವೆ. ಇದಕ್ಕೆಲ್ಲ ಕಡಿವಾಣ ಹಾಕದಿದ್ದರೇ ನಾಳೆಯಿಂದ ಶುರುವಾಗುತ್ತೆ ಎಂದು‌ ಎಚ್ಚರಿಕೆ ನೀಡಿದರು.

ಕಾಂಗ್ರೆಸ್​ನ ಎಲ್ಲ ನಾಯಕರು ಇದರಲ್ಲಿ ಭಾಗಿಯಾಗಿಲ್ಲ. ಡಿಕೆ ಶಿವಕುಮಾರ್ ಹಾಗೂ ಅವರ ಹಿಂಬಾಲಕರು ಇದನ್ನು ಮಾಡುತ್ತಿದ್ದಾರೆ. ಕಡಿವಾಣ ಹಾಕದಿದ್ದರೇ ಇದಕ್ಕಿಂತ ವಿಚಿತ್ರವಾಗಿ ನಡೆಯುತ್ತೆ. ನಾವು ಬಳೆ ತೊಟ್ಟುಕೊಂಡು ಬಂದಿಲ್ಲಾ, ರಾಜಕೀಯ ಮಾಡಲು ಬಂದಿದ್ದೇವೆ. ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಜನರಿಗೆ ತಿಳಿಸುತ್ತಿದ್ದಾರೆ. ಇವರು ಮಾಡಿದೆಲ್ಲಾ ಸರಿ ಅಂದಿದ್ದರೇ ಇದಾವುದು ಮಾಡುತ್ತಿರಲಿಲ್ಲ. ಅಧಿಕಾರ ಇದೆ ಅಂತ ಮಾಡಬೇಡಿ. ನಾವು ಹೊರಾಟಕ್ಕೆ ಇಳಿಯುತ್ತೇವೆ ಎಂಬ ವಿಚಾರ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವೆ. ರಾಜಕಾರಣದಲ್ಲಿ ಎಲ್ಲರು ಸಾಚಾ ಅಲ್ಲ. ನಿಮ್ಮದು ವಯ್ಯಕ್ತಿಕ ಜೀವನ ಇದೆ, ಮುಜುಗರಕ್ಕೀಡಾಗಬೇಡಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ