ಪ್ರಧಾನಿ ಮೋದಿಯನ್ನು ನೀಚ ಎಂದು ಕರೆಯಲು ಯತ್ನಿಸಿದ ಸಿಎಂ ಸಿದ್ದರಾಮಯ್ಯ; ಪ್ರಲ್ಹಾದ್ ಜೋಶಿ ಕಿಡಿ
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿಯನ್ನು ನೀಚ ಎಂದು ಕರೆಯಲು ಸಿದ್ದರಾಮಯ್ಯ ಯತ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯನ್ನು ನೀಚ ಎಂದು ಕರೆಯಲು ಪ್ರಯತ್ನಿಸಿದೆ. ಪ್ರಧಾನಿ ಮೋದಿ ಬಡ ಹಿನ್ನೆಲೆಯಿಂದ ಬಂದಿದ್ದರಿಂದ ಕಾಂಗ್ರೆಸ್ ಪಕ್ಷವು ಅವರ ಕುರ್ಚಿಯ ಬಗ್ಗೆ ಹೊಟ್ಟೆಕಿಚ್ಚು ಹೊಂದಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 7: ಕೇಂದ್ರದ ಬಿಜೆಪಿ ಸರ್ಕಾರ ನೀಚತನದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟೀಕಿಸಿದ ಬೆನ್ನಲ್ಲೇ ಆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ‘ಘಮಂಡಿ’ (ದುರಹಂಕಾರ) ಎಂದು ಕರೆದಿದ್ದಾರೆ. ಅಕ್ಕಿ ಕೊರತೆ ಇದೆ ಎಂದು ಹೇಳಿ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿಯನ್ನು ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಚಿವರು ಸಮರ್ಥಿಸಿಕೊಂಡರು.
ತುಮಕೂರಿನಲ್ಲಿ ಬುಧವಾರ ನಡೆದ ‘ಕ್ಷೀರ ಭಾಗ್ಯ’ (ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ವಾರದಲ್ಲಿ ಐದು ದಿನ ಹಾಲು ನೀಡುವ) ಯೋಜನೆಗೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ನೀಚ ಬಿಜೆಪಿ ಸರ್ಕಾರಕ್ಕೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದರು.
ನಾನು ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ 7 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದೆ. ಬಿಜೆಪಿ ಸರ್ಕಾರ ಅದನ್ನು 4 ಕೆಜಿಗೆ ಇಳಿಸಿತ್ತು. 5 ಕೆಜಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದು, ಕೇಂದ್ರದ ಕಾರಣದಿಂದ 5 ಕೆಜಿ ಅಕ್ಕಿ ಬದಲು ಹಣ ನೀಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಕೇಂದ್ರವು ಉದ್ದೇಶಪೂರ್ವಕವಾಗಿ ರಾಜ್ಯಕ್ಕೆ ಅಕ್ಕಿಯನ್ನು ನಿರಾಕರಿಸುತ್ತಿದೆ ಎಂದು ಆರೋಪಿಸಿದ್ದರು.
ನಾವು ಅಕ್ಕಿ ನೀಡಲು ಭಾರತೀಯ ಆಹಾರ ನಿಗಮಕ್ಕೆ (FCI) ಪತ್ರ ಬರೆದಿದ್ದೇವೆ ಮತ್ತು ಅವರು ಅದನ್ನು ಒಪ್ಪಿದ್ದರು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ಕೊಡಲು ಬಿಡಲಿಲ್ಲ. ನಾವು ಉಚಿತವಾಗಿ ಕೇಳುತ್ತಿಲ್ಲ, ಅದಕ್ಕೆ ಹಣ ಪಾವತಿಸಲು ನಾವು ಸಿದ್ಧರಿದ್ದೇವೆ. ಈಗ ಹೇಳಿ, ಬಿಜೆಪಿ ಬಡವರ ಪರವಾಗಿದೆಯೇ ? ಇಲ್ಲ. ಅವರು ಎಷ್ಟು ನೀಚರು ಎಂದು ನೀವು ನಿರ್ಧರಿಸಬೇಕು. ಅವರಿಗೆ ಮಾನವೀಯತೆ ಇಲ್ಲ. ಸಂಸತ್ ಚುನಾವಣೆಯಲ್ಲಿ ಯಾರೂ ಅವರಿಗೆ ಮತ ಹಾಕಬಾರದು ಎಂದು ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕವನ್ನು ದಿವಾಳಿ ಮಾಡಿಲ್ಲ; ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್
‘ಘಮಂಡಿ’ ಕಾಂಗ್ರೆಸ್; ಜೋಶಿ ಕಿಡಿ
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿಯನ್ನು ನೀಚ ಎಂದು ಕರೆಯಲು ಸಿದ್ದರಾಮಯ್ಯ ಯತ್ನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯನ್ನು ನೀಚ ಎಂದು ಕರೆಯಲು ಪ್ರಯತ್ನಿಸಿದೆ. ಪ್ರಧಾನಿ ಮೋದಿ ಬಡ ಹಿನ್ನೆಲೆಯಿಂದ ಬಂದಿದ್ದರಿಂದ ಕಾಂಗ್ರೆಸ್ ಪಕ್ಷವು ಅವರ ಕುರ್ಚಿಯ ಬಗ್ಗೆ ಹೊಟ್ಟೆಕಿಚ್ಚು ಹೊಂದಿದೆ. ಇದು ಗಾಂಧಿ ಕುಟುಂಬಕ್ಕೆ ಸೇರಿದ್ದು ಎಂದು ಅವರು ಭಾವಿಸುತ್ತಾರೆ. ಇಡೀ ದೇಶ ಬರ ಪರಿಸ್ಥಿತಿ ಎದುರಿಸುತ್ತಿದೆ. ನಮ್ಮಲ್ಲಿ ಅಕ್ಕಿ ದಾಸ್ತಾನು ಕಡಿಮೆ ಇದೆ. ಅದಕ್ಕಾಗಿಯೇ ನಾವು ಅಕ್ಕಿ ರಫ್ತು ನಿಷೇಧಿಸಿದ್ದೇವೆ. ಅಕ್ಕಿ ಬೆಲೆ ಹೆಚ್ಚುತ್ತಿದೆ. ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಕೂಡ ಅಕ್ಕಿಗೆ ಬೇಡಿಕೆ ಇಡುತ್ತಿವೆ. ಆದರೆ ನಮ್ಮ ಬಳಿ ಈಗಿಲ್ಲ ಎಂದು ಮಾಹಿತಿ ನೀಡಿದ ಜೋಶಿ, ಕಾಂಗ್ರೆಸ್ ನವರು ಬಳಸುತ್ತಿರುವ ನೀಚ ಪದವೇ ಅವರ ‘ಘಮಂಡ್’ಗೆ ನಿದರ್ಶನ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಲ್ಹಾದ್ ಜೋಶಿ ಹೇಳಿಕೆಯ ವಿಡಿಯೋ
#WATCH | Hubli, Karnataka: Union Minister Pralhad Joshi on CM Siddaramaiah’s comments says, “Siddaramaiah and Congress party have tried to call PM Modi ‘Neech’…Since PM Modi comes from a poor background, the Congress party is jealous of the chair of PM Modi. They think this… https://t.co/AqS8qDNtTi pic.twitter.com/3pA8yKUNFz
— ANI (@ANI) September 7, 2023
ಸದ್ಯ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲು ಹಣ ನೀಡುತ್ತಿದೆ. ಅಕ್ಕಿ ಖರೀದಿಗೆ ಮೂರು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ