ಬೆಂಗಳೂರು: ನಮ್ಮಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಟ್ಯಾಲೆಂಟ್ ಇರಬೇಕು. ಪ್ರಲ್ಹಾದ ಜೋಶಿ ಸಿಎಂ ಆಗುವ ಬಗ್ಗೆ ಕೇಂದ್ರ ನಾಯಕರು ನಿರ್ಧರಿಸುತ್ತಾರೆ. ಈಗಲೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಎಂದು ಕಂದಾಯ ಸಚಿವ ಆರ್.ಅಶೋಕ್ (R. Ashok) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಅವರೇ ಹೇಳಿದ್ದಾರೆ. ಸಿಎಂ ಯಾರು ಅನ್ನೋದನ್ನ ತಿರ್ಮಾನ ಮಾಡೋಕೆ ಕೇಂದ್ರದ ನಾಯಕರಿದ್ದಾರೆ ಎಂದು ಟಾಂಗ್ ನೀಡಿದರು.
ಬಿಜೆಪಿಯಲ್ಲಿ ಯಾರು ಬೇಕಾದ್ರೂ ಸಿಎಂ ಆಗಬಹುದು. ನಮ್ಮದು ಕುಟುಂಬದ ಪಕ್ಷ ಅಲ್ಲ, ನಮ್ಮದು ರಾಷ್ಟ್ರೀಯ ಪಕ್ಷ. ದೇಶದಲ್ಲಿರುವ ಯಾರು ಬೇಕಾದ್ರೂ ಸಿಎಂ, ಪಿಎಂ ಆಗಬಹುದು. ಜೆಡಿಎಸ್ನಲ್ಲಿ ಸಿಎಂ ಬಗ್ಗೆ ಅವರ ಮನೆಯಲ್ಲೇ ತೀರ್ಮಾನ ಆಗಬೇಕು. ಕುಮಾರಸ್ವಾಮಿ ವೋಟಿಗಾಗಿ ಬ್ರಾಹ್ಮಣರ ಬಗ್ಗೆ ಮಾತನಾಡುತ್ತಿದ್ದಾರೆ. ಇದುವರೆಗೂ ಯಾವುದೇ ಮುಖ್ಯಮಂತ್ರಿ ಜಾತಿ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರ ದೇವಾಲಯದ ಅರ್ಚಕರ ಪ್ರಶ್ನೆ: ‘ಬ್ರಾಹ್ಮಣ’ ಹೇಳಿಕೆಗೆ HDK ಸ್ಪಷ್ಟನೆ
ತಲ್ಲಣ ಉಂಟಾಗಿರೋದು ಜೆಡಿಎಸ್ನಲ್ಲಿ. ಈ ತರ ಹುಚ್ಚುಚ್ಚು ಹೇಳಿಕೆ ಕೊಡಬಾದ್ರು. ಅಮಿತ್ ಶಾ ಅವರು ಮೋದಿ ಬಂದಾಗ ಹೇಳಿದ್ದಾರೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಅನ್ನೋದು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅವರು ತಮ್ಮ ವರ್ಚಸ್ಸಿನಿಂದ ಕೆಳಗೆ ಬರ್ತಿದ್ದಾರೆ. ರಾಮನಗರ ವಿಚಾರದಲ್ಲೂ ಒಳ್ಳೆ ಅಭ್ಯರ್ಥಿಯನ್ನ ಹಾಕುತ್ತೇವೆ ಎಂದು ತಿಳಿಸಿದರು.
ಈ ಕುರಿತಾಗಿ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದು, ಜೆಡಿಎಸ್ ಪಕ್ಷ ಸಂಪೂರ್ಣವಾಗಿ ಗೊಂದಲದಲ್ಲಿದೆ. ಹೀಗಾಗಿ ಜೆಡಿಎಸ್ ನಾಯಕರು ಗೊಂದಲಕಾರಿ ಹೇಳಿಕೆ ನೀಡ್ತಿದ್ದಾರೆ. ಏನೇ ಹೇಳಿದರೂ ಜನರು ಮತ್ತೆ ಬಿಜೆಪಿಗೆ ಆಶೀರ್ವಾದ ಮಾಡ್ತಾರೆ. ಅನುಕಂಪದ ಮಾತುಗಳನ್ನಾಡಿ ಬಿಜೆಪಿ ನಾಯಕರ ನಡುವೆ ಬೆಂಕಿ ಹಚ್ಚಬಹುದು ಅನ್ಕೊಂಡಿದ್ದಾರೆ. ಇದು ಯಾವತ್ತಿಗೂ ಸಾಧ್ಯವಾಗಲ್ಲ ಅಂತಾ ಹೆಚ್. ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಅಧಿಕಾರ ಸಿಕ್ಕಾಗ ಕಾಂಗ್ರೆಸ್, JDS ಯಾವ ರೀತಿ ನಡೆಸಿಕೊಂಡಿದ್ದಾರೆ, ವೀರಶೈವ ಲಿಂಗಾಯತ ಸಮುದಾಯ ಎಲ್ಲವೂ ಸೂಕ್ಷ್ಮವಾಗಿ ನೋಡಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಸಂಪೂರ್ಣ ದಿವಾಳಿ ಆಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದಾ? ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು
ಆ್ಯಕ್ಷನ್ಗೆ ರಿಯಾಕ್ಷನ್ ಇರುತ್ತೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು. ನಾಥುರಾಮ್ ಗೋಡ್ಸೆ ಗಾಂಧಿ ಕೊಂದವರು ಅಂತಾ ಹೇಳಿದ್ದಾರೆ. ನಮ್ಮ ದೇಶ ಮಹಾತ್ಮ ಗಾಂಧೀಜಿಯವರ ಮೇಲೆ ನಂಬಿಕೆ ಇಟ್ಟಿತ್ತು. ಆದರೂ ನಮ್ಮ ಭಾರತ ವಿಭಜನೆಯಾಯ್ತು. ಇವರೆಲ್ಲಾ ಟಿಪ್ಪು ಸುಲ್ತಾನ್ ಜಾತಿ ಉಲ್ಲೇಖ ಮಾಡಿ ಹೇಳ್ತಾರಾ? ದೇಶ ವಿಭಜನೆ ಮಾಡಿದವರ ಬಗ್ಗೆ ಇವರೆಲ್ಲಾ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಹೇಳೋದಕ್ಕೆ ಧೈರ್ಯ ಇಲ್ಲದವರನ್ನು ರಾಜಕೀಯ ನಪುಂಸಕರು ಎನ್ನಬೇಕಾಗುತ್ತೆ ಎಂದು ಹೆಚ್ಡಿಕೆ ವಿರುದ್ಧ ಪರೋಕ್ಷವಾಗಿ ಸಿ.ಟಿ.ರವಿ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.