AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಿಗೆ ಜೈ ಅಂದ್ರೆ ಜೈಲಿಗೆ ಕಳಸ್ತಾರೆ ಅಂದ್ರೆ ನಾಚಿಕೇಗೇಡು-ಆರ್​ ಅಶೋಕ

ಕರ್ನಾಟಕದಲ್ಲಿ ಹಿಂದೂ ವಿರೋಧಿ ಸಿದ್ದರಾಮಯ್ಯ(Siddaramaiah) ಸರ್ಕಾರದ ವಿರುದ್ದ ನಮ್ಮ ಪ್ರತಿಭಟನೆ‌ ಎಂದು ವಿರೋಧ ಪಕ್ಷದ ನಾಯಕ ಅಶೋಕ್(R Ashoka) ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ(Hubballi)ಯಲ್ಲಿ ಮಾತನಾಡಿದ ಅವರು ‘ ರಾಮನಿಗೆ ಜೈ ಅಂದ್ರೆ ಜೈಲಿಗೆ ಕಳಿಹಿಸುತ್ತಾರೆ ಅಂದರೆ ಇದು ನಾಚಿಕೇಗೇಡು. ನಾವೇನು ಪಾಕಿಸ್ಯಾನದಲ್ಲಿ ರಾಮನಿಗೆ ಜೈ ಅಂದಿದೇವಾ ಎಂದು ಪ್ರಶ್ನಿಸಿದ್ದಾರೆ.

ರಾಮನಿಗೆ ಜೈ ಅಂದ್ರೆ ಜೈಲಿಗೆ ಕಳಸ್ತಾರೆ ಅಂದ್ರೆ ನಾಚಿಕೇಗೇಡು-ಆರ್​ ಅಶೋಕ
ಆರ್​ ಅಶೋಕ
ಶಿವಕುಮಾರ್ ಪತ್ತಾರ್
| Edited By: |

Updated on: Jan 03, 2024 | 3:46 PM

Share

ಹುಬ್ಬಳ್ಳಿ, ಜ.03: ಕರ್ನಾಟಕದಲ್ಲಿ ಹಿಂದೂ ವಿರೋಧಿ ಸಿದ್ದರಾಮಯ್ಯ(Siddaramaiah) ಸರ್ಕಾರದ ವಿರುದ್ದ ನಮ್ಮ ಪ್ರತಿಭಟನೆ‌ ಎಂದು ವಿರೋಧ ಪಕ್ಷದ ನಾಯಕ ಅಶೋಕ್(R Ashoka) ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ(Hubballi)ಯಲ್ಲಿ ಮಾತನಾಡಿದ ಅವರು ‘ ರಾಮನಿಗೆ ಜೈ ಅಂದ್ರೆ ಜೈಲಿಗೆ ಕಳಿಹಿಸುತ್ತಾರೆ ಅಂದರೆ ಇದು ನಾಚಿಕೇಗೇಡು. ನಾವೇನು ಪಾಕಿಸ್ಯಾನದಲ್ಲಿ ರಾಮನಿಗೆ ಜೈ ಅಂದಿದೇವಾ, ಹುಬ್ಬಳ್ಳಿ ಅಂದ್ರೆ ಗಂಡು ಮೆಟ್ಟಿದ ನಾಡು. 30 ವರ್ಷದ ಕಳಗೆ ನಾನು ಹೋರಾಟದಲ್ಲಿ ಭಾಗಿಯಾಗಿದ್ದೆ. ಅವತ್ತು ಯಾಕೋ ಪೊಲೀಸರು‌ ಜಾಸ್ತಿ ಇದ್ದರು. ಇವತ್ತು ಯಾಕೋ ಪೊಲಿಸರು ಕಡಿಮೆ ಇದ್ದಾರೆ. ನಾನು ಅವಾಗಲೇ ಯಾರಿಗೂ ಗೊತ್ತಾಗದೆ ಕಾರ್ ತಗೆದುಕೊಂಡು ಬಂದಿದ್ದೆ, ಅವಾಗಲೇ ಪೊಲೀಸರಿಗೆ ನಾನ ಬಂದಿರೋದು ಗೊತ್ತಿಲ್ಲ. ನಿಮ್ಮ ಗೊಡ್ಡು ಬೆದರಿಕೆ ಹೆದರಲ್ಲ ಎಂದು ಅಶೋಕ ಕಿಡಿಕಾರಿದ್ದಾರೆ.

ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ಡಿಎನ್‌ಎನಲ್ಲಿದೆ

‘ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ಡಿಎನ್‌ಎನಲ್ಲಿದೆ. ಸಿಎಂ ಸಿದ್ದರಾಮಯ್ಯ ಮಸೀದಿಗೆ ಹೇಳದೆ ಕೇಳದೆ ಹೋಗ್ತಾರೆ, ಆದರೆ, ರಾಮ ಮಂದಿರಕ್ಕೆ ಕರೆದರೂ ಯೋಚನೆ ಮಾಡಬೇಕು ಎನ್ನುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್​ನವರು ರಾಮ ಒಂದು ಕಾಲ್ಪನಿಕ ಎಂದು ಹೇಳಿದ್ದರು. ಇನ್ನು ಶ್ರೀಕಾಂತ್ ಪೂಜಾರಿ ವಿರುದ್ಧ 10 ಕೇಸ್​​ಗಳು ಇವೆ ಅಂತಿದ್ದಾರೆ. ಆಗ ಯಾಕೆ ನೀವು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿರಲಿಲ್ಲ. ಆದರೆ, ಈಗ ಕೋರ್ಟ್​ ರಜೆ ಇದ್ದಾಗ ಬೇಲ್​ ಸಿಗದಂತೆ ಅರೆಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ ನಿರ್ದೇಶನದಂತೆ ಶ್ರೀಕಾಂತ್ ಪೂಜಾರಿ ಬಂಧಿಸಿದ್ದಾರೆ. ಇವತ್ತು ಸಂಭ್ರಮದಿಂದ ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ಮನೆ ಮನೆಗೆ ಮಂತ್ರಾಕ್ಷತೆ ತಲುಪುತ್ತಿದೆ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯ ಸಮಬಲದಲ್ಲಿ ಕುಸ್ತಿ ಆಡಲು ದೈಹಿಕ, ಮಾನಸಿಕ ಸಾಮರ್ಥ್ಯ ಅಶೋಕ್​ಗೆ ಇದೆ- ಸದಾನಂದ ಗೌಡ

ಬೆಂಕಿ ಹಚ್ಚೋ ಅಂಬಾಸಿಡರ್ ಸಿದ್ದರಾಮಯ್ಯ

ರಾಮ ಮಂದಿರ ನಿರ್ಮಾಣ ಆಗಬಾರದು ಎನ್ನುವುದು ಕಾಂಗ್ರೆಸ್ ವಾದವಾಗಿತ್ತು. ಅಂದು ಕಪಿಲ್ ಸಿಬಲ್ ಅಪಡವಿಟ್ ಹಾಕಿದ್ದರು. ರಾಮ ಎನ್ನುವುದು ಕಾಲ್ಪನಿಕ ಅಂದಿದ್ದರು. ಜೊತೆಗೆ ರಾಮನ ಬರ್ಥ ಸರ್ಟಿಫಿಕೇಟ್ ಕೇಳಿದ್ದರು. ನಾವೇನು ಅಲ್ಲ, ಕ್ರಿಶ್ಚಿಯನ್ ಬರ್ಥ ಸರ್ಟಿಪಿಕೇಟ್ ಕೇಳಿದ್ದೀವಾ ಎಂದಿದ್ದಾರೆ. ಸಿದ್ದರಾಮಯ್ಯ ಅಂದರೆ ಬೆಂಕಿ ಹಚ್ಚುವ ಕೆಲಸ. ಗಂಡ ಹೆಂಡತಿಯನ್ನು ಬೇರೆ ಮಾಡುತ್ತಾರೆ. ಅದರಂತೆ ವೀರಶೈವ ಲಿಂಗಾಯತ ಸಮುದಾಯದ ನಡುವೆ ಬೆಂಕಿ ಹಚ್ಚಿದ್ರು. ಬೆಂಕಿ ಹಚ್ಚುವ ಅಂಬಾಸಿಡರ್ ಸಿದ್ದರಾಮಯ್ಯ ಎಂದು ಕಿಡಿಕಾರಿದ್ದಾರೆ.

‘ನಾನು ಕಾನೂನು ಪ್ರಕಾರ ಕೇಳತೀವಿ, ಸಿದ್ದರಾಮಯ್ಯಗೆ ಕಾನೂನು ಜ್ಞಾನ ಇದೆ ಅಂತಾರೆ?, ಆದರೆ ಸಿದ್ದರಾಮಯ್ಯನವರೇ ನಿಮಗೆ ಕಾನೂನು ಜ್ಞಾನ ಇದೆಯಾ, ಯಾರನ್ನಾದರೂ ಬಂಧಿಸುವ ಮೊದಲು ನೋಟಿಸ್ ಕೊಡಬೇಕು. ನೋಟಿಸ್ ಸರ್ವೆ ಮಾಡಿದ ಮೇಲೆ ಲಾಯರ್ ಅನುಮತಿ ಮೇಲೆ ಬಂಧಿಸಬೇಕು. ಇದನ್ಬು ನೀವ ಮಾಡಿದ್ದೀರಾ?, FIR ಇಲ್ಲ, ಕಂಪ್ಲೇಟ್ ಪೊಲೀಸರ ಬಳಿ ಇಲ್ಲ, ನಾನು ಕೂಡ ಹೋಮ್ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದೇನೆ. ಈ ಕುರಿತು ಅಧಿಕಾರಿಗಳನ್ಬ ಕೇಳಿದ್ರೆ ಮೇಲಿಂದ ಆದೇಶ ಬಂದಿದೆ ಎನ್ನುತ್ತಾರೆ. ಪೊಲೀಸ್ ಇನ್ಸಪೆಕ್ಟರ್, ಕೋರ್ಟ್ ರಜೆ ಇರುವಾಗ ಅರೆಸ್ಟ್ ಮಾಡಿದ್ದಾರೆ. ಕರ್ನಾಟಕದಲ್ಲಿ 69 ಸಾವಿರ ಲಾಂಗ್ ಪೆಂಡಿಂಗ್ ಕೇಸ್ ಇದೆ‌. ಬೆಂಗಳೂರಲ್ಲಿ 10 ಸಾವಿರ ಕೇಸ್ ಇದೆ. ಮರ್ಡರ್ , ಕಳ್ಳತನ ಮಾಡಿದವರನ್ನು ಅರೆಸ್ಟ್ ಮಾಡಿದ್ದಾರೆ. ಆದ್ರೆ, ಅದರ ಜೊತೆ ಹಿಂದೂ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ