
2018ರ ವಿಧಾನ ಸಭೆ ಚುನಾವಣೆಯಲ್ಲಿ ಮುನಿರತ್ನ ಕಾಂಗ್ರೆಸ್ ಪಕ್ಷದ ಟಿಕೆಟ್ನಿಂದ ಸ್ಫರ್ಧಿಸಿ, ಗೆದ್ದು ಆಮೇಲೆ ಬಿಜೆಪಿಗೆ ಪಕ್ಷಾಂತರ ಮಾಡಿ ಶಾಸಕತ್ವದಿಂದ ಅನರ್ಹಗೊಂಡಿದ್ದರಿಂದ ರಾಜರಾಜೇಶ್ವರಿ ನಗರ ಕ್ಷೇತ್ರ ಉಪ ಚುನಾವಣೆ ಎದುರಿಸಬೇಕಾಯಿತು.
ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದಾಗಿನಿಂದಲೇ ರಾಜಕೀಯ ಕಸರತ್ತುಗಳು ನಡೆಯಲಾರಂಭಿಸಿದ್ದವು. ಮುನಿರತ್ನ ವಿರುದ್ಧ ವಿರುದ್ಧ ಕತ್ತಿ ಮಸೆಯುತ್ತಿದ್ದ ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ, ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಆದರೆ, ಅಂತಿಮವಾಗಿ ಮುನಿರತ್ನ ಅಖಾಡಕ್ಕಿಳಿಯಲು ಬಿಜೆಿಪಿ ಹೈಕಮಾಂಡ್‌ನಿಂದ ಅಪ್ಪಣೆ ಸಿಗುತ್ತಲೇ, ಸ್ಥಳೀಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿತಾದರೂ ಪಕ್ಷದ ವರಿಷ್ಠರನ್ನು ಎದುರು ಹಾಕಿಕೊಳ್ಳಲು ಇಚ್ಛಿಸದ ಮುನಿರಾಜು ಮತ್ತವರ ಬೆಂಬಲಿಗರು ಮೌನಕ್ಕೆ ಶರಣಾದರು. ಆದಾದ ನಂತರ, ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಉಳಿಸಿಕೊಳ್ಳಲು ಮುನಿರತ್ನ ಉರುಳಿಸಿದ ದಾಳಗಳು, ನಡೆಸಿದ ಕಸರತ್ತುಗಳು ಒಂದೆರಡಲ್ಲ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ಪ್ರತಿದಾಳಗಳನ್ನು ನಡೆಸಿ, ಪ್ರಚಾರದ ಸಮಯದಲ್ಲಿ ಮುನಿರತ್ನ ಅವರ ಕೈಮೇಲಾಗದಂತೆ ನೋಡಿಕೊಂಡರು.
ಮುನಿರತ್ನ ಉರುಳಿಸಿದ ದಾಳಗಳಲ್ಲಿ ಕಣ್ಣೀರು ಸುರಿಸಿದ್ದೂ
ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದ ಮುನಿರತ್ನ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಸಮ್ಮಿಶ್ರ ಸರ್ಕಾರ ಉರುಳಲು ಮುನಿರತ್ನ ಕಾರಣ. ಮುನಿರತ್ನ ತಮ್ಮನ್ನು ತಾವು ಬಿಜೆಪಿಗೆ ಮಾರಿಕೊಂಡಿದ್ದಾರೆ. ತಾಯಿಯಂದ್ದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಪ್ರಚಾರ ಭಾಷಣಗಳಲ್ಲಿ ಆರೋಪಿಸಿದ್ದರು.
ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ, ಮುನಿರತ್ನಂ ನಾಯ್ಡು ಸಮುದಾಯಕ್ಕೆ ಸೇರಿದವರು ಅಂತ ಜಾತಿ ಪ್ಲೇಟ್ ಸಹ ಕಾಂಗ್ರೆಸ್ ನಾಯಕರು ಪ್ಲೇ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಒಕ್ಕಲಿಗ ಸಮುದಾಯದವರು ಅಂತ ಒತ್ತಿ ಹೇಳಿದ್ದರು.
ಅತ್ತ ಮುನಿರತ್ನ ಕಣ್ಣೀರ ಕೋಡಿ ಹರಿಸಿ ಮತದಾರರನ್ನು ಭಾವ
ಹಣ, ಹೆಂಡ ವಿಚಾರವಾಗಿ ಬಿಜೆಪಿ–ಕಾಂಗ್ರೆಸ್ ಪರಸ್ಪರ ಆರೋಪಗಳನ್ನು ಮಾಡಿದರು. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಭಗೀರಥ ಪ್ರಯತ್ನ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊನೆಯದಾಗಿ ಹಿಂದೂತ್ವದ ಪರ ನಮ್ಮದೂ ಒಂದಿರಲಿ ಅಂದುಕೊಂಡು ‘ನಾನು ಹಿಂದೂ, ರಾಮನ ಭಕ್ತ’ ಎಂಬ ಮಂತ್ರ ಜಪಿಸಿದ್ದರು.
ಜೆಡಿ(ಎಸ್) ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಅವರ ಪ್ರಚಾರದ ಹೊಣೆಯನ್ನು ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಒಕ್ಕಲಿಗ ಮತ್ತು ಅಲ್ಪಸಂಖ್ಯಾತರ ಮತಗಳ ಮೇಲೆ ಪ್ರಭಾವ ಬೀರಿದ್ದರು.
ಇವರೆಲ್ಲರ ಮಾತು, ಅರೋಪ–ಪ್ರತ್ಯಾರೋಪಗಳನ್ನು ಕೇಳಿಸಿಕೊಂಡಿರುವ ಮತದಾರ ಇಂದು ಅವರ ಹಣೆಬರಹವನ್ನು ಬರೆದಿದ್ದಾನೆ. ವಿಜಯಲಕ್ಷ್ಮಿಯಾರಿಗೆ ಒಲಿಯಲಿದ್ದಾಳೆ ಅನ್ನುವುದು 10ನೇ ತಾರೀಖು ಗೊತ್ತಾಗುತ್ತದೆ.