AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡದಲ್ಲಿ ಹಿಂದೂ ಫೈರ್​​ ಬ್ರ್ಯಾಂಡ್​ಗೆ ಹಿನ್ನಡೆ: ಅನಂತ್​ಕುಮಾರ್ ಹೆಗಡೆಗೆ ತಲೆನೋವಾದ ಸ್ವಪಕ್ಷದ ನಾಯಕರ ನಡೆ

ಈ ಬಾರಿ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿರುವ ಅನಂತ್ ಕುಮಾರ್ ಹೆಗಡೆಗೆ ತೀವ್ರ ಹಿನ್ನಡೆಯಾಗಿದೆ. ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಮಾತಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಡೋಂಡ್​ ಕೇರ್ ಎಂದಿದ್ದಾರೆ. ಮತ್ತೊಂದೆಡೆ ಲೋಕಸಭಾ ಟಿಕೆಟ್​​ ಸಂಬಂಧ ಸ್ವಪಕ್ಷದ ಇಬ್ಬರು ನಾಯಕರ ನಡೆಯಿಂದ ಹಾಲಿ ಸಂಸದ, ಹಿಂದೂ ಫೈರ್ ಬ್ರ್ಯಾಂಡ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಉತ್ತರ ಕನ್ನಡದಲ್ಲಿ ಹಿಂದೂ ಫೈರ್​​ ಬ್ರ್ಯಾಂಡ್​ಗೆ ಹಿನ್ನಡೆ: ಅನಂತ್​ಕುಮಾರ್ ಹೆಗಡೆಗೆ ತಲೆನೋವಾದ ಸ್ವಪಕ್ಷದ ನಾಯಕರ ನಡೆ
ಅನಂತ್ ಕುಮಾರ್ ಹೆಗಡೆ
TV9 Web
| Edited By: |

Updated on:Feb 10, 2024 | 11:18 AM

Share

ಕಾರವಾರ, (ಫೆಬ್ರವರಿ 10): ಲೋಕಸಭಾ ಚುನಾವಣೆ (Loksabha Elections 2024) ಸಮೀಪಿಸುತ್ತಿದ್ದಂತೆಯೇ ಈಗಾಗಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​ನಲ್ಲಿ ಟಿಕೆಟ್​ಗಾಗಿ ಲಾಭಿ ಶುರುವಾಗಿವೆ. ಅದರಲ್ಲೂ ಉತ್ತರ ಕನ್ನಡ (Uttara Kannada) ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಇಬ್ಬರು ಹಿರಿಯ ನಾಯಕ ನಡುವೆ ಪೈಪೋಟಿ ಏರ್ಪಟ್ಟಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿರುವ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು, ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ (anant kumar hegde ) ಮತ್ತೊಮ್ಮೆ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಟಿಕೆಟ್​ ಗುದ್ದಾಟ ನಡೆದಿದೆ. ಇದರ ಮಧ್ಯೆ ಉತ್ತರ ಕನ್ನಡ ಜಿಲ್ಲಾ ಪದಾಧಿಕಾರಗಳ ನೇಮಕವಾಗಿದ್ದು, ಸಂಸದ ಅನಂತ್ ಕುಮಾರ್ ಹೆಗಡೆಗೆ ಭಾರಿ ಹಿನ್ನಡೆಯಾಗಿದೆ.

ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ್​ (Roopali Naik)ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಬಣದವರಿಗೆಹೆಚ್ಚಿನ ಅವಕಾಶ ನೀಡಲಾಗಿದೆ. ಆದ್ರೆ, ಸಂಸದ ಅನಂತ್​ ಕುಮಾರ್​ ಹೆಗಡೆ ಸೂಚಿಸಿದವರ ಪೈಕಿ ಕೇವಲ ಇಬ್ಬರು ಮಾತ್ರ ಜಿಲ್ಲಾ ಬಿಜೆಪಿ ಪದಾಧಿಕಾರಿ ಆಗಿ ನೇಮಕ ಮಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸಂಸದರಿಗೆ ಮುಖಭಂಗವಾಗಿದೆ. ಇದರೊಂದಿಗೆ ಕಾಗೇರಿ ಮತ್ತು ರೂಪಾಲಿ ನಾಯ್ಕ್ ನಡೆಗೆ ಅನಂತಕುಮಾರ್​ ಹೆಗಡೆಗೆ ಭಾರಿ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದರೆ ರಾಮನಿಗೆ ನೀಡಿದಂತೆ: ಲೋಕಸಭಾ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಜಿ ಸ್ಪೀಕರ್​ ಕಾಗೇರಿ ಹೇಳಿಕೆ

ಪದಾಧಿಕಾರಿಗಳ ನೇಮಕ ಕಳೆದ 15 ದಿನಗಳ ಹಿಂದೆ ಕಾಗೇರಿ ಮತ್ತು ಅನಂತ್ ಕುಮಾರ್ ನಡುವೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿತ್ತು. ನಾನು ಹೇಳಿದನ್ನು ಫೈನಲ್ ಮಾಡುವಂತೆ ಜಿಲ್ಲಾದ್ಯಕ್ಷ ಎನ್ ಎಸ್ ಹೆಗಡೆ ಅವರಿಗೆ ಅನಂತ್ ಕುಮಾರ್ ಹೆಗಡೆ ಕ್ಲಾಸ್ ತೆಗೆದುಕೊಂಡಿದ್ದರು. ಆದ್ರೆ, ರೂಪಾಲಿ ನಾಯ್ಕ್ ಬಣದ ಜಿಲ್ಲಾದ್ಯಕ್ಷ ಎನ್ ಎಸ್ ಹೆಗಡೆ ಅನಂತ್​ ಕುಮಾರ್ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಪದಾಧಿಕಾರಿಗಳ ನೇಮಕ ಪಟ್ಟಿಯನ್ನು ರಾಜ್ಯ ನಾಯಕರಿಗೆ ಕಳುಹಿಸುತ್ತೇನೆ. ಅವರೇ ಫೈನಲ್ ಮಾಡುತ್ತಾರೆ ಎಂದಿದ್ದರು. ಸದ್ಯ ಕಾಗೇರಿ ಹಾಗೂ ರೂಪಾಲಿ ನಾಯ್ಕ್​ ಹೇಳಿದವರಿಗೆ ರಾಜ್ಯ ಕಮಿಟಿಯಿಂದ ಅವಕಾಶ ಸಿಕ್ಕಿದೆ.

ರೂಪಾಲಿ ನಾಯ್ಕ್ ರಾಜ್ಯ ಉಪಾಧ್ಯಕ್ಷೆ ಆದ ಬಳಿಕ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಕಸರತ್ತು ನಡೆಸಿದ್ದು, ಲೋಕಸಭಾ ಚುನಾವಣೆ ಬರುತ್ತಿರುವ ಹಿನ್ನೆಲೆ ತಮ್ಮ ಆಪ್ತರನ್ನೇ ಆಯಕಟ್ಟಿನ ಹುದ್ದೆಗೆ ನೇಮಿಸಲು ಮುಂದಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ರೂಪಾಲಿ ನಾಯ್ಕ್​ ಮತ್ತು ಅನಂತ್ ಕುಮಾರ್​ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ರೂಪಾಲಿಯನ್ನ ನಾಯ್ಕ್​ ಸೋಲಿ್ಎ ಅನಂರ್​ ಕುಮರ್ ಹೆಗಡೆ ಪಾತ್ರವೂ ಇದೆ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟು ತಾರಕಕ್ಕೇರಿದೆ.

ಅನಂತ್ ಕುಮಾರ್​ ಟಿಕೆಟ್ ತಪ್ಪಿಸಲು ಈಗಾಗಲೇ ಮಾಜಿ ವಿಧಾನಸಭಾಧ್ಯಕ್ಷ ಕಾಗೇರಿ ಟವೆಲ್ ಹಾಕಿದ್ದಾರೆ. ಅಲ್ಲದೇ ಈ ಬಾರಿ ತಮಗೆ ಟಿಕೆಟ್​​ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ಕ್ಷೇತ್ರದಾದ್ಯಂತ ಸುತ್ತಾಟ ನಡೆಸಿದ್ದಾರೆ. ಇನ್ನೊಂದು ಕಡೆ ಜಿಲ್ಲೆಯಲ್ಲಿ ಅನಂತ್ ಕುಮಾರ್​​ ಪ್ರಾಬಲ್ಯ ಕಡಿಮೆ ಮಾಡಲು ರೂಪಾಲಿ ನಾಯ್ಕ್​ ಬೇರೆ ಬೇರೆ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಹೀಗಾಗಿ ಕೈ ನಾಯಕರಕ್ಕಿಂತ ಕಾಗೇರಿ ಹಾಗೂ ರೂಪಾಲಿ ನಾಯ್ಕ್​ ನಡೆ ಅನಂತ್ ಕುಮಾರ್​ ಹೆಗಡೆಗೆ ದೊಡ್ಡ ತಲೆನೋವಾಗಿದೆ.

Published On - 11:18 am, Sat, 10 February 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ