ಬಿಜೆಪಿಯ ಸಾಕಷ್ಟು ಅತೃಪ್ತ ನಾಯಕರು ಸಂಪರ್ಕದಲ್ಲಿ, ಜ.26ರ ನಂತರ ಮುಂದಿನ ಪ್ರಕ್ರಿಯೆ: ಸವದಿ ಹೊಸ ಬಾಂಬ್

ಕರ್ನಾಟಕದಲ್ಲಿ ಕಾಂಗ್ರೆಸ್​ ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳ ಪ್ರಬಲ ನಾಯಕರಿಗೆ ಗಾಳ ಹಾಕಿದೆ. ಇದರ ಪೂರಕವೆಂಬಂತೆ ಖುದ್ದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತನಾಡಿದ್ದು, ಬಿಜೆಪಿಯ ಹಲವು ಅತೃಪ್ತ ನಾಯಕರು ಸಂಪರ್ಕದಲ್ಲಿ ಇದ್ದು, ಜನವರಿ 26 ನಂತರ ಪ್ರತಿಕ್ರಿಯೆ ಶುರುವಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಯ ಸಾಕಷ್ಟು ಅತೃಪ್ತ ನಾಯಕರು ಸಂಪರ್ಕದಲ್ಲಿ, ಜ.26ರ ನಂತರ ಮುಂದಿನ ಪ್ರಕ್ರಿಯೆ: ಸವದಿ ಹೊಸ ಬಾಂಬ್
ಶಾಸಕ ಲಕ್ಷ್ಮಣ ಸವದಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ

Updated on: Nov 20, 2023 | 9:13 AM

ಬಾಗಲಕೋಟೆ, (ನವೆಂಬರ್ 20): ಲೋಕಸಭೆ ಚುನಾವಣೆಗೆ (Loksabha Elections 2024)ಕಾಂಗ್ರೆಸ್ (Congress) ಸಕಲ ಸಿದ್ಧತೆ ನಡೆಸಿದ್ದು, ಈ ಬಾರಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಕಸರತ್ತು ನಡೆಸಿದೆ, ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್​ನ ಕೆಲ ಪ್ರಭಾವಿ ನಾಯಕರುಗಳಿಗೆ ಗಾಳ ಹಾಕಿದೆ. ಇದರ ಮಧ್ಯೆ ಇದೀಗ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ(laxman savadi) ಆಪರೇಷನ್ ಹಸ್ತದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಬಾಗಲಕೋಟೆಯಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿರುವ ಸವದಿ, ಬಿಜೆಪಿಯ ಸಾಕಷ್ಟು ಅತೃಪ್ತ ನಾಯಕರು ಸಂಪರ್ಕದಲ್ಲಿದ್ದಾರೆ. ಜನವರಿ 26ರ ನಂತರ ಮುಂದಿನ ಪ್ರಕ್ರಿಯೆ ಆರಂಭಿಸುತ್ತೇವೆ. ಆಗ ಎಷ್ಟು ನಾಯಕರು ಬರುತ್ತಾರೆಂದು ನೀವೇ ಎಣಿಕೆ ಮಾಡುವಿರಂತೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಬಿಜೆಪಿಯ ಹಲವು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಪಕ್ಷಕ್ಕೆ ಬಂದಮೇಲೆ ಸ್ಥಾನಮಾನ ಬಗ್ಗೆ ಚಿಂತನೆ ಮಾಡಬೇಕು. ಬಿಜೆಪಿಯಿಂದ ಬಂದವರಿಗೆ ಗೊಂದಲ ಹಾಗೂ ಅನ್ಯಾಯ ಆಗಬಾರದು. ಹೀಗಾಗಿ ಸ್ವಇಚ್ಛೆಯಿಂದ ಬರುವವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಈಗಾಗಲೇ ನಾವು ಬ್ಲೂ ಪ್ರಿಂಟ್ ರೆಡಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಯತ್ನಾಳ್ ಅಸಮಾಧಾನದ ಬಗ್ಗೆ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಖಡಕ್ ಮಾತು

ಲಿಂಗಾಯತರನ್ನ ಸೆಳೆಯುವ ಟಾಸ್ಕ್ ಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೇವಲ ಲಿಂಗಾಯತರನ್ನು ಅಷ್ಟೇ ಅಂತ ಅಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಿದ್ದಾಂತ ಇದೆ. ಆದ್ರೆ ಬಿಜೆಪಿಯಲ್ಲಿ ಹಿಂದುತ್ವ ಹಿಂದುತ್ವ ವಿರೋಧ ಎನ್ನುವುದು ಇದೆ. ನಮ್ಮಲ್ಲಿ ಆ ತರ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಟ್ಟಿಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಇದೆ ಎಂದರು.

ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರು ಬಗ್ಗೆ ಮಾತನಾಡಿದ ಲಕ್ಷ್ಮಣ ಸವದಿ, ಬಾಗಲಕೋಟೆ, (ನವೆಂಬರ್ 20): ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಉತ್ತರ ಕರ್ನಾಟಕದಲ್ಲಿ. ವಿಜಯೇಂದ್ರ ಬೆಂಗಳೂರು, ಮೈಸೂರು, ಶಿವಮೊಗ್ಗಕ್ಕೆ ಸೀಮಿತವಾಗಿರುವವರು. ಪಕ್ಷದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಾಕಷ್ಟು ನಾಯಕರ ಸಹಮತವಿಲ್ಲ. ವಿಜಯೇಂದ್ರ ಕೆಳಗೆ ಹೇಗೆ ಕೆಲಸ ಮಾಡುವುದು ಎಂದು ಹಿರಿಯರ ಪ್ರಶ್ನೆ ಇದೆ. ನಾನು ಹೆಸರು ಹೇಳಲ್ಲ, ಆ ಪಕ್ಷದ ಬಗ್ಗೆ ಚರ್ಚೆ ಮಾಡುವುದು ಅಸಂಬದ್ಧ. ವಿಜಯೇಂದ್ರ ಆಯ್ಕೆಯಿಂದ ಬಿಜೆಪಿಗೆ ಲಾಭ ಸಿಗಲ್ಲ. ಈಗ ಯಾರೇ ಅಧ್ಯಕ್ಷ ಆದರೂ ರಾಜ್ಯ ಬಿಜೆಪಿಯಲ್ಲಿ ಚೇತರಿಕೆ ಕಷ್ಟ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹಲವು ನಾಯಕರಿಗೆ ಅಸಮಾಧಾನ ಇದ್ದು, ಪಕ್ಷದಲ್ಲಿ ಜ್ವಾಲಾಮುಖಿ ಯಾವಾಗ ಸ್ಫೋಟವಾಗುತ್ತೋ ಗೊತ್ತಿಲ್ಲ ಎಂದು ಭವಿಷ್ಯ ನುಡಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ