AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಬೀದರ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುಲು ಸ್ವಾಮೀಜಿ ಪ್ಲ್ಯಾನ್, ಟಿಕೆಟ್​ಗಾಗಿ ಯೋಗಿ ಆದಿತ್ಯನಾಥ್ ಮೊರೆ​

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈಗಾಗಲೇ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿವೆ. ಮೂರು ಪಕ್ಷದಲ್ಲಿ ಡಜನ್ ಗಟ್ಟಲೇ ಟಿಕೆಟ್​ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಇದರ ನಡುವೆ ಸ್ವಾಮೀಜಿಯೊಬ್ಬರು ಬಿಜೆಪಿಯಿಂದ ಎಂಪಿ ಟಿಕೇಟ್ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಾಗಾದ್ರೆ, ಯಾರು ಆ ಸ್ವಾಮೀಜಿ?

ಈ ಬಾರಿ ಬೀದರ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುಲು ಸ್ವಾಮೀಜಿ ಪ್ಲ್ಯಾನ್, ಟಿಕೆಟ್​ಗಾಗಿ ಯೋಗಿ ಆದಿತ್ಯನಾಥ್ ಮೊರೆ​
ಸುರೇಶ ನಾಯಕ
| Edited By: |

Updated on: Oct 01, 2023 | 6:49 PM

Share

ಬೀದರ್, (ಅಕ್ಟೋಬರ್ 01): ಬೀದರ್, (Bidar) ಭಗವಂತ ಖೂಬಾ (bhagwanth khuba) ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾಗಿದೆ. ಈ ಬಾರಿಯೂ ಸಹ ಕಣಕ್ಕಿಳಿಯಲು ಭಗವಂತ ಖೂಬಾ ಉತ್ಸುಕರಾಗಿದ್ದಾರೆ. ಆದ್ರೆ, ಬೀದರ್​ ಜಿಲ್ಲಾ ಬಿಜೆಪಿಯಲ್ಲೇ ವಿರೋಧಗಳು ವ್ಯಕ್ತವಾಗಿವೆ. ಮಾಜಿ ಸಚಿವ ಪ್ರಭು ಚೌಹಾಣ್, ಶಾಸಕ ಶರಣು ಸಲಗರ್ ಸೇರಿದಂತೆ ಹಲವು ಬಿಜೆಪಿ(BJP) ನಾಯಕರು ಈ ಬಾರಿ ಯಾವುದೇ ಕಾರಣಕ್ಕೂ ಭಗವಂತ ಖೂಬಾ ಅವರಿಗೆ ಬೀದರ್ ಲೋಕಸಭಾ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಇದರ ಮಧ್ಯೆ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಸ್ವಾಮೀಜಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ. ಹೌದು.. ಟಿಕೆಟ್​ ಕೊಡುವಂತೆ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ (shambhulinga shivacharya swamij) ಮನವಿ ಮಾಡಿದ್ದಾರೆ.

ಸಂಸದ ಭಗವಂತ್ ಖೂಬಾರಿಗೆ ಈ ಸಲ ಟಿಕೆಟ್ ಕೊಡಬಾರದು ಅನ್ನುವ ಕೂಗು ಎದ್ದಿರುವ ಬೆನ್ನಲ್ಲೇ ಕೆಲ ಮಾಠಾಧೀಶರು ಬಿಜೆಪಿ ಟಿಕೆಟ್​ಗಾಗಿ ಬೇಡಿಕೆಯಿಟ್ಟಿದ್ದಾರೆ. ಬೀದರ್​ ಟಿಕೆಟ್​ಗಾಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ನಿಯೋಗವು ಆರ್ ಎಸ್ ಎಸ್ ಮುಂಖಡರು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದು, ಈ ಬಾರಿ ಬೀದರ್​ ಟಿಕೆಟ್​ ಶಿವಾಚಾರ್ಯ ಸ್ವಾಮೀಜಿಗೆ ನೀಡುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ಜೆಡಿಎಸ್​ ಬಿಟ್ಟು ಹೋಗದಂತೆ ಶಾಸಕರು, ನಾಯಕರುಗಳಿಗೆ ಪ್ರತಿಜ್ಞಾವಿಧಿ ಬೋಧನೆ

ಔರಾದ್ ತಾಲೂಕಿನ ಢೋಣಗಾಂವ ಮಠದ ಪೂಜ್ಯ ಶಂಭುಲಿಂಗ ಶಿವಾಚಾರ್ಯರು ಈ ಸಲು ಬಿಜೆಪಿಯ ಟಿಕೆಟ್​ ನನಗೆ ಕೊಡಬೇಕು ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದಿಂದ ಬಿಜೆಪಿಯ ಕೆಲಸ ನಾಯಕರು ಸಂಘ ಪರಿವಾರದ ಕೆಲವು ನಾಯಕರನ್ನ ಭೇಟಿಯಾಗಿದ್ದಾರೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶೀ ಜಿ.ವಿ. ರಾಜೇಶ್ ಅವರನ್ನೂ ಕೂಡಾ ಭೇಟಿಯಾಗಿ ಮನವಿ ಮಾಡಿದ್ದು, ಬೀದರ್ ಜಿಲ್ಲೆಯಲ್ಲಿ ಮಠಾಧೀಶರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಆಗುವ ಲಾಭದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶರಣರ ನಾಡಿನ ಪ್ರತಿನಿಧಿಯಾಗಿ ಮಠಾಧಿಶರಿಬ್ಬರು ಲೋಕಸಭೆ ಪ್ರವೇಶ ಮಾಡುವುದನ್ನ ಎದುರುನೋಡುತ್ತಿದ್ದೆವೆಂದು ಸ್ವಾಮೀಜಿ ಹೇಳುತ್ತಿದ್ದಾರೆ. ಇನ್ನೂ ಬೀದರ್ ಎಂಪಿ ಭಗವಂತ್ ಖೂಬಾ ಜಿಲ್ಲೆಯ ಅಭಿವೃದ್ದಿಯನ್ನ ಮಾಡಿಲ್ಲ ಹೆಸರಿಗಷ್ಟೇ ಅವರು ಸಂಸದರಾಗಿದ್ದಾರೆ. ಹೀಗಾಗಿ ಅವರನ್ನ ಬದಲಾಯಿಸಿ ಸ್ವಾಮೀಜಿಗಳಿಗೆ ಟಿಕೆಟ್ ಕೊಡಬೇಕು ಎಂದು ಹುಡುಗಿ ಗ್ರಾಮದ ವಿರಕ್ತ ಮಠದ ಚನ್ನಮಲ್ಲ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇನ್ನೂ ಬೀದರ್ ಸಂಸದ ಭಗವಂತ್ ಖೂಬಾಗೆ ಸ್ವಪಕ್ಷದ ಶಾಸಕರೇ ತಿರುಗಿ ಬಿದ್ದಿದ್ದು ಭಗವಂತ್ ಖೂಬಾ ಹಾಟಾವೋ ಬಿಜೆಪಿ ಬಚಾವೋ ಎಂದು ಭಹಿರಂಗವಾಗಿಯೇ ಔರಾದ್ ಶಾಸಕ ಪ್ರಭು ಚೌಹಾನ್ ಹೇಳುತ್ತಿದ್ದಾರೆ. ಇನ್ನು ಬಸವಕಲ್ಯಾಣ ಶಾಸಕ ಶರಣು ಸಲಗರ್ ಸಹ ಈ ಸಲ ಮರಾಠಾ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಎಂಪಿ ಟಿಕೇಕೆಟ್ ಗೆ ಮರಾಠಾ ಸಮುದಾಯವರ ಕಣ್ಣು ಮಠಾಧೀಶರ ಕಣ್ಣು ಬಿದ್ದಿದ್ದು ಹೈಕಮಾಂಡ್ ಗೆ ಹತ್ತಿರವಿರುವವರನ್ನ ಭೆಟಿಯಾಗಿ ಟಿಕೆಟ್ ಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಬೀದರ್ ಜಿಲ್ಲೆಯೂ ಶರಣರ ಭೂಮಿ, ಜೊತೆಗೆ ಎಲ್ಲಾ ಪಕ್ಷಗಳಲ್ಲಿ ಮಠದ ಭಕ್ತರಿದ್ದಾರೆ. ಮಠಾಧಿಶರು ಕಣಕ್ಕಿಳಿದರೆ ಪಕ್ಷ ಸೇರಿದಂತೆ ಯಾವುದೇ ಭೇದಭಾವ ವಿಲ್ಲದೆ ಜನರು ಬೆಂಬಲ ಕೊಡುತ್ತಾರೆ. ಹೀಗಾಗಿ ಈ ಸಲ ಎಂಪಿ ಟಿಕೇಕೆಟ್ ಮಠಾಧಿಶರಿಗೆ ಕೊಡಬೇಕು ಎಂದು ದೆಹಲಿ ನಾಯಕರನ್ನ ಭೆಟಿಯಾಗಿ ಒತ್ತಡಹಾಕುತ್ತಿದ್ದಾರೆ. ಬಿಜೆಪಿಯಿಂದ ಮಠಾಧೀಶರಿಗೆ ಟಿಕೆಟ್ ಕೊಟ್ಟರೇ ಇತರೆ ಕ್ಷೇತ್ರಗಳ ಮೇಲೂ ಪ್ರಭಾವ ಬೀರಲಿದ್ದು, ಅತಿ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನವನ್ನ ಗೆಲ್ಲಲ್ಲು ಸಾಧ್ಯವಾಗುತ್ತದೆ. ಹೀಗಾಗಿ ಮಠಾಧೀಶರಿಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ.

ಮಠಾಧೀಶರ ಒಕ್ಕೂಟದ ಪ್ರಮುಖರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿಥ್ಯನಾಂಥ್ ಅವರನ್ನ ಭೇಟಿಯಾಗುವುದಕ್ಕಾಗಿಯೇ ಶಿಘ್ರದಲ್ಲಿ ಅಯೋಧ್ಯಗೆ ಸ್ವಾಮೀಜಿಗಳ ನಿಯೋಗ ತೆರಳಲಿದೆ. ಯೋಗಿ ಅವರ ಮೂಲಕ ಬಿಜೆಪಿ ನಾಯಕರ ಮೇಲೆ ಟಿಕೆಟ್ ಗಾಗಿ ಒತ್ತಡ ಹೇರುವುದು ಭೇಟಿಯ ಉದ್ದೇಶವಾಗಿದೆ. ಅಲ್ಲದೇ ಯೋಗಿ ಆದಿತ್ಯನಾಥ್ ಅವರಿಗೆ ಆಪ್ತರಾಗಿರುವ ಜಗದ್ಗುರುಗಳ ಸಹಾಯ ಮೂಲಕ ಟಿಕೆಟ್ ಪಡೆಯುವ ಎಲ್ಲಾ ಪ್ರಯತ್ನವನ್ನ ಸ್ವಾಮೀಜಿಗಳು ಮಾಡುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ.

ಒಟ್ಟಿನಲ್ಲಿ ಈ ಬಾರಿ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರ ಪಾಲಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Suresh Naik
Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ