Maharashtra Political Crisis: ಬಾಹುಬಲಿಯಾಗಿ ಶರದ್​​ ಪವಾರ್​​, ಕಟ್ಟಪ್ಪನಾಗಿ ಅಜಿತ್​ ಪವಾರ್​, ವೈರಲ್​​ ಆಗುತ್ತಿದೆ ಈ ಪೋಸ್ಟರ್​​

ಅಜಿತ್​​ ಪವಾರ್​​ ಅವರು ಶರದ್​​ ಪವಾರ್​​ ಅವರಿಗೆ ಮೋಸ ಮಾಡಿದ್ದಾರೆ ಎಂದು ಕಾರ್ಯಕರ್ತರು ಅಜಿತ್​​ ಪವಾರ್​​ ವಿರುದ್ಧ ಪೋಸ್ಟರ್​​ ಹಾಕುವ ಮೂಲಕ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Maharashtra Political Crisis: ಬಾಹುಬಲಿಯಾಗಿ ಶರದ್​​ ಪವಾರ್​​, ಕಟ್ಟಪ್ಪನಾಗಿ ಅಜಿತ್​ ಪವಾರ್​, ವೈರಲ್​​ ಆಗುತ್ತಿದೆ ಈ ಪೋಸ್ಟರ್​​
ವೈರಲ್​​ ಫೋಟೋ
Follow us
|

Updated on: Jul 06, 2023 | 1:24 PM

ದೆಹಲಿ: ರಾಜಕೀಯದಲ್ಲಿ ಎಲ್ಲವೂ ಸಹಜವಲ್ಲ, ರಾಜಕೀಯ ಆಟಗಳನ್ನು ನಾಯಕರು ಒಪ್ಪಿಕೊಂಡರು, ಕಾರ್ಯಕರ್ತರು ಒಪ್ಪಿಕೊಳ್ಳುವುದಿಲ್ಲ, ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ, ಎನ್​ಸಿಪಿ ಪಕ್ಷದ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್​​ ಪವಾರ್​​ ಅವರು ಬಿಜೆಪಿ- ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಬಿಜೆಪಿ- ಶಿವಸೇನೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೆನ್ನೆ (ಜುಲೈ.5) ಎನ್​ಸಿಪಿ ಪಕ್ಷದ ಎರಡು ಬಣಗಳು (ಅಜಿತ್​ ಬಣ ಮತ್ತು ಶರದ್​ ಬಣ) ತಮ್ಮ ಶಾಸಕ ಬಲದ ಪ್ರದರ್ಶನಕ್ಕೆ ಸಭೆ ನಡೆಸಿದೆ. ಆದರೆ ಸಭೆಯ ಹೊರಗಡೆ ಕಾರ್ಯಕರ್ತರ ಅಕ್ರೋಶ ಮುಗಿಲುಮುಟ್ಟಿದೆ. ಈ ಬಗ್ಗೆ ಮಹಾರಾಷ್ಟ್ರದ ಬೀದಿಗಳಲ್ಲಿ ಒಂದು ಪೋಸ್ಟ್​​​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಹೌದು ಅಜಿತ್​​ ಪವಾರ್​​ ಅವರು ಶರದ್​​ ಪವಾರ್​​ ಅವರಿಗೆ ಮೋಸ ಮಾಡಿದ್ದಾರೆ ಎಂದು ಬಾಹುಬಲಿ ಸಿನಿಮಾದ ಕಟ್ಟಪ್ಪ, ಬಾಹುಬಲಿಯನ್ನು ಕೊಲ್ಲುವ ಸೀನ್​​ನ ಫೋಟೋವನ್ನು ಎಡಿಟ್​​ ಮಾಡಿ ಬಾಹುಬಲಿಯಾಗಿ ಶರದ್​​ ಪವಾರ್​, ಕಟ್ಟಪ್ಪನಾಗಿ ಅಜಿತ್​​ ಪವಾರ್​ ಅವರನ್ನು ಪೋಸ್ಟರ್​​ನಲ್ಲಿ ಚಿತ್ರಿಸಿದ್ದಾರೆ. ಇದೀಗ ಎಲ್ಲ ಕಡೆ ವೈರಲ್​​ ಆಗುತ್ತಿದೆ.

ಇದನ್ನೂ ಓದಿ:Supriya Sule: ಶರದ್ ಪವಾರ್ ಕರೆದಿರುವ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸುಪ್ರಿಯಾ ಸುಳೆ ಮನವಿ

ದೆಹಲಿಯಲ್ಲಿರುವ ಶರದ್​​ ಪವಾರ್​​ ನಿವಾಸದ ಮುಂದೆ ಈ ಪೋಸ್ಟರ್​​ನ್ನು ಹಾಕಿಕೊಂಡಿದ್ದಾರೆ. ಈ ಪೋಸ್ಟರ್​​ನ ಕೆಳಗಡೆ ಇಡೀ ”ದೇಶವು ಒಬ್ಬರ ನಡುವೆ ಅಡಗಿರುವ ದೇಶದ್ರೋಹಿಗಳನ್ನು ಗಮನಿಸುತ್ತಿದೆ. ಸಾರ್ವಜನಿಕರು ಅಂತಹ ವಂಚಕರನ್ನು ಕ್ಷಮಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರನ್ನು ಹೋಲುವ ಬಾಹುಬಲಿ ಪೋಸ್ಟರ್‌ ಹಾಕಿರುವುದು ರಾಜಕೀಯ ವಿವಾದಕ್ಕೆ ಮತ್ತಷ್ಟು ಬಲ ನೀಡಿದೆ.

ನಿನ್ನೆ ಮುಂಬೈನಲ್ಲಿ ನಡೆದ ಎರಡು ಮೆಗಾ ಸಭೆಗಳ ನಂತರ, ಶರದ್ ಪವಾರ್ ಅವರು ತಮ್ಮ ಮುಂದಿನ ನಡೆಯನ್ನು ಯೋಜಿಸಲು ಇಂದು ದೆಹಲಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯನ್ನು ನಡೆಸಲಿದ್ದಾರೆ. ನೆನ್ನೆ ನಡೆದ ಅಜಿತ್​​ ಪವಾರ್​​ ಬೆಂಬಲಿತ ಸಭೆಯಲ್ಲಿ 53 ಶಾಸಕರಲ್ಲಿ 32 ಮಂದಿ ಭಾಗವಹಿಸಿದ್ದಾರೆ, ಉಳಿದವರು ಶರದ್​​ ಪವಾರ್​​ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ್ದಾರೆ.

ಇನ್ನಷ್ಟು  ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್