ಬಸವರಾಜ ಬೊಮ್ಮಾಯಿ ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ: ಚೇತನ್ ಅಹಿಂಸಾ
ಪ್ರಧಾನಿ ನರೇಂದ್ರ ಮೋದಿಯವರು ಫೆ. 27ರಂದು ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮೋದಿ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಸಿಎಂ ಬೊಮ್ಮಾಯಿ ಅವರನ್ನು ನಟ ಚೇತನ್ ಅಹಿಂಸಾ ಅವರು ಟೀಕಿಸಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi)ಯವರು ಫೆ. 27ರಂದು ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರನ್ನು ಮೋದಿ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ನಟ ಚೇತನ್ ಅಹಿಂಸಾ (Chetan Ahimsa) ಅವರು ಟೀಕಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರನ್ನು ಒಮ್ಮೆಯೂ ಪ್ರಸ್ತಾಪಿಸದೇ ಯಡಿಯೂರಪ್ಪವನ್ನು ಮಾತ್ರ ಉಲ್ಲೇಖಿಸಿದ್ದಾರೆ. ಬೊಮ್ಮಾಯಿ ಅವರು ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ ಎಂದು ಜರಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಚೇತನ್ ಅಹಿಂಸಾ, “ಶಿವಮೊಗ್ಗದಲ್ಲಿ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಒಮ್ಮೆಯೂ ಕೂಡ ಪ್ರಸ್ಥಾಪಿಸದೆ ಬಿಎಸ್ ಯಡಿಯೂರಪ್ಪರವರನ್ನು ಮತ್ತೆ-ಮತ್ತೆ ಉಲ್ಲೇಖಿಸಿದ್ದಾರೆ. ಬಿಜೆಪಿಯ ಮುಖ್ಯ ವರಿಷ್ಠರಿಗೆ ಗೊತ್ತು: 1) ಅಧಿಕಾರವನ್ನು ಉಳಿಕೊಳ್ಳಲು ಬಿಎಸ್ವೈ ಅವರ ಲಿಂಗಾಯತ ಲಾಬಿಗಳನ್ನು ಓಲಾಯಿಸುವುದೊಂದೇ ದಾರಿ; 2) ಬೊಮ್ಮಾಯಿ ಸರ್ಕಾರವು 20 ತಿಂಗಳಲ್ಲಿ ಯಾವುದೇ ಮೌಲ್ಯಯುತವಾದ ಕೊಡುಗೆ ನೀಡಿಲ್ಲ. ಬೊಮ್ಮಾಯಿ ಅವರು ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬನವಾಸಿಯ ಕದಂಬರು ಇಲ್ಲದೆ ಕರ್ನಾಟಕದ ಇತಿಹಾಸ ಪೂರ್ಣ ಆಗುವುದಿಲ್ಲ; ಸಿಎಂ ಬೊಮ್ಮಾಯಿ
In Shimogga, PM Modi alluded to BSY often w/out mentioning CM Bommai even once
BJP’s top brass knows: 1. appeasing BSY’s Lingayat lobbies is only bet to retain power; 2. Bommai govt has not contributed anything worthwhile in 20 months
Bommai is an inconsequential placeholder CM
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) February 28, 2023
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕನಸಾಗಿರುವ ಶಿವಮೊಗ್ಗದ ಸೋಗಾನೆಯ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ. ಆ ಮೂಲಕ ಯಡಿಯೂರಪ್ಪ ಅವರ ಜನ್ಮದಿನದಂದೇ ಗಿಫ್ಟ್ ನೀಡಿದರು. ಬಳಿಕ ಮೋದಿಯವರು ಬಹಿರಂಗ ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ ನೇಗಿಲಿನ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ವೇಳೆಯಡಿಯೂರಪ್ಪ ಕೊಂಚ ಭಾವುಕರಾದರು.
ಭಾಷಣದ ವೇಳೆ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ವಿಚಾರ ಪ್ರಸ್ತಾಪಿಸಿದ ಮೋದಿ, ಶ್ರೀ ಅನ್ನ ಯೋಜನೆಯ ಬಗ್ಗೆ ಉಲ್ಲೇಖಿಸಿದರು. ಶ್ರೀ ಅನ್ನ ಯೋಜನೆಗಾಗಿ ಯಡಿಯೂರಪ್ಪ ಅಭಿಯಾನ ಮಾಡಿದ್ದರು. ಸಿರಿಧಾನ್ಯ ಯೋಜನೆಯಲ್ಲಿ ಬಿಎಸ್ವೈ ಅವರ ಸಹಕಾರ ಬಹಳಷ್ಟಿದೆ ಎಂದ ಮೋದಿ, ಯಡಿಯೂರಪ್ಪ ಅವರನ್ನು ರೈತ ಬಂಧು ಎಂದು ಬಣ್ಣಿಸಿದರು. ಈ ವೇಳೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:59 pm, Tue, 28 February 23