ಬಿಜೆಪಿಯವರು ದೊಡ್ಡ ಮನುಷ್ಯರ ರೀತಿ ಮಾತನಾಡುತ್ತಾರೆ; ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಮೇಕೆದಾಟು ಯೋಜನೆ ಹೊಸ ಯೋಜನೆ ಅಲ್ಲ. 1968ರಲ್ಲಿ ಪ್ರಸ್ತಾಪವಾಗಿದ್ದ ಯೋಜನೆ. ಮೇಕೆದಾಟು ಕಾಂಗ್ರೆಸ್ ಚಿಂತನೆಯ ಯೋಜನೆ. ನಿಜಲಿಂಗಪ್ಪ ಸಿಎಂ ಆಗಿದ್ದಾಗ ಆಗಿದ್ದು. 2018ರಲ್ಲಿ ಕಾವೇರಿ ವಿವಾದ ಬಗೆಹರಿಯಿತು -ಸಿದ್ದರಾಮಯ್ಯ.

ಬಿಜೆಪಿಯವರು ದೊಡ್ಡ ಮನುಷ್ಯರ ರೀತಿ ಮಾತನಾಡುತ್ತಾರೆ; ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: sandhya thejappa

Updated on: Jan 03, 2022 | 12:01 PM

ಮೈಸೂರು: ಇಂದು (ಜ.3) ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಕಷ್ಟದ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದ ಒಂದು ದಿನವೂ ಸಮಯ ವ್ಯರ್ಥ ಮಾಡದೆ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾನೆ. ಇದು ಎಮ್ಮೆ ಚರ್ಮದ ಸರ್ಕಾರ. ಇವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಆಡಳಿತ ಪಕ್ಷ ಇದ್ದರು ಕೂಡ ಜನ ವಿರೋಧ ಪಕ್ಷವನ್ನು ವಿವಿಧ ಚುನಾವಣೆಗಳಲ್ಲಿ ಗೆಲ್ಲಿಸುತ್ತಿದ್ದಾರೆ. ಭವಿಷ್ಯದಲ್ಲಿ ನಮಗೆ ಜನ ಸಂಪೂರ್ಣ ಬೆಂಬಲ ಕೊಡುತ್ತಾರೆ ಎಂಬ ಸೂಚನೆ ಸಿಕ್ಕಿದೆ ಅಂತ ಹೇಳಿದರು.

ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಯೋಜನೆ ಹೊಸ ಯೋಜನೆ ಅಲ್ಲ. 1968ರಲ್ಲಿ ಪ್ರಸ್ತಾಪವಾಗಿದ್ದ ಯೋಜನೆ. ಮೇಕೆದಾಟು ಕಾಂಗ್ರೆಸ್ ಚಿಂತನೆಯ ಯೋಜನೆ. ನಿಜಲಿಂಗಪ್ಪ ಸಿಎಂ ಆಗಿದ್ದಾಗ ಆಗಿದ್ದು. 2018ರಲ್ಲಿ ಕಾವೇರಿ ವಿವಾದ ಬಗೆಹರಿಯಿತು. ಹಲವು ಕಾರಣಗಳಿಂದ ಅದು ಕಾರ್ಯಗತವಾಗಿರಲಿಲ್ಲ. ಸರ್ಕಾರದ ಮೇಲೆ ಒತ್ತಡ ತರಲು ಪಾದಯಾತ್ರೆ ಮಾಡಲಾಗುತ್ತಿದೆ. ಬಿಜೆಪಿ, ಜೆಡಿಎಸ್ ವ್ಯಂಗ್ಯವಾದ ಮಾತುಗಳನ್ನಾಡುತ್ತಿದ್ದಾರೆ. ರಾಜಕೀಯ ಗಿಮಿಕ್ ಅಂತಿದ್ದಾರೆ. ಕುಮಾರಸ್ವಾಮಿ ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಅಂತ ಅಭಿಪ್ರಾಯಪಟ್ಟರು.

ಅನಗತ್ಯ ಕಾಲಹರಣ ಆರೋಪ ಸತ್ಯಕ್ಕೆ ದೂರವಾದ ಹೇಳಿಕೆ ಎಂದು ತಿಳಿಸಿದ ಸಿದ್ದರಾಮಯ್ಯ, ಕಾನೂನು ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು. ಸುಪ್ರೀಂಕೋರ್ಟ್ ಅಥವಾ ಟ್ರಿಬ್ಯೂನಲ್ನಲ್ಲೂ ತಡೆ ಇಲ್ಲ. ತಮಿಳುನಾಡಿಗೆ ಇದನ್ನು ವಿರೋಧಿಸಲು ಯಾವ ಹಕ್ಕು ಇಲ್ಲ. ಕಾನೂನಾತ್ಮಕವಾಗಿ ಸಾಂವಿಧಾನಿಕವಾಗಿ ಯಾವ ಹಕ್ಕು ಇಲ್ಲ. ಕರ್ನಾಟಕ ತಮಿಳುನಾಡು ನಡುವೆ ಯಾವುದೇ ವಿವಾದ ಇಲ್ಲ. ಮಳೆಗಾಲದಲ್ಲಿ ಹೆಚ್ಚು ನೀರು ಹರಿದರೆ ತಡೆಯೋಕೆ ಆಗುತ್ತಾ? ಅಂತ ಪ್ರಶ್ನಿಸಿದ್ದಾರೆ.

ನಮ್ಮ ಪಾದಯಾತ್ರೆ ರಾಜಕೀಯ ಎಂದು ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಪಾದಯಾತ್ರೆಯಲ್ಲಿ ರಾಜಕಾರಣ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವಧಿಯಲ್ಲಿ ಡಿಪಿಆರ್ ಪ್ರಕ್ರಿಯೆ ಆರಂಭವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಅದನ್ನ ಬದಲಾಯಿಸಿ ಕಳಿಸಿದ್ದೆವು ಎಂದರು. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಭೂಮಿ, ನಮ್ಮ ಹಣದಲ್ಲಿ ಮಾಡುತ್ತಿರುವ ಯೋಜನೆ. ಕೇಂದ್ರ ಪರಿಸರ ಇಲಾಖೆ ಅನುಮತಿ ಅಷ್ಟೇ ಬಾಕಿ ಇದೆ ಅಂತ ತಿಳಿಸಿದರು.

ಪಾದಯಾತ್ರೆ ಬಗ್ಗೆ ಎಷ್ಟೇ ಟೀಕೆ ಬಂದ್ರೂ ಅರಗಿಸಿಕೊಳ್ಳುತ್ತೇವೆ. ಅಸೂಯೆಗೆ ಯಾವುದೇ ಔಷಧ ಇಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಪಕ್ಷಗಳಿಗೂ ಆಹ್ವಾನ. ಇದು ರಾಜಕಾರಣವಾದ್ರೆ ಅಡ್ವಾಣಿ ಮಾಡಿದ್ದ ರಥಯಾತ್ರೆ ಏನು? ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದರು.

ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು ಬಿಜೆಪಿಯವರು ದೊಡ್ಡ ಮನುಷ್ಯರ ರೀತಿ ಮಾತನಾಡುತ್ತಾರೆ ಅಂತ ಸಚಿವ ಗೋವಿಂದ ಕಾರಜೋಳಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದ್ದರೆ ಈಗಲೇ ಮಾಡಿಬಿಡು ಆಮೇಲೆ ಏಕೆ? ಇವರು ರಾಜ್ಯದ ಹಿತದೃಷ್ಟಿಯಿಂದ ಇರಬೇಕು. ಏಕೆ ವಿಳಂಬ ಅನ್ನೋ ಬಗ್ಗೆ ಕಾರಣ ಹೇಳಬೇಕು. ಅಣ್ಣಾಮಲೈ ಯಾವ ಪಕ್ಷದ ಅಧ್ಯಕ್ಷ? ಸಿಟಿ ರವಿ ಯಾವ ಪಕ್ಷದವರು? ಉಸ್ತುವಾರಿ ಎಲ್ಲಿಗೆ? ರಾಜಕಾರಣಕ್ಕಾಗಿ ತಮಿಳುನಾಡಿನವರನ್ನು ಎತ್ತಿಕಟ್ಟಿದ್ದಾರೆ. ಅಲ್ಲಿ ರಾಜಕೀಯ ಶಕ್ತಿ ಬೆಳೆಸಿಕೊಳ್ಳಲು ಎತ್ತಿಕಟ್ಟಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಏಕೆ ಯೋಜನೆ ಮಾಡಿಸಿಲ್ಲ. ತಮಿಳುನಾಡಿನವರಿಗೆ ಬಿಜೆಪಿಯವರು ಬೆಂಬಲ ನೀಡುತ್ತಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮೇಕೆದಾಟು ಯೋಜನೆ ಬಿಜೆಪಿಯಿಂದ ವಿಳಂಬವಾಗಿದೆ. ಸಿಟಿ ರವಿ ರಾಜ್ಯದವರಾದ್ರೂ ತಮಿಳುನಾಡು ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ. ಎರಡೂವರೆ ವರ್ಷದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಪರೋಕ್ಷವಾಗಿ ತಮಿಳುನಾಡು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಅಂತ ಹೇಳಿದರು.