ಕಾಂಗ್ರೆಸ್ ಪಕ್ಷ ಮತಾಂತರದ ಪರವಾಗಿ ಇದೆಯೇ, ತಾಕತ್ತಿದ್ದರೆ ಬಹಿರಂಗವಾಗಿ ಸ್ಪಷ್ಟಪಡಿಸಲಿ; ಸಿಟಿ ರವಿ ಸವಾಲ್
ತಾಲಿಬಾನಿಗಳಿಗೆ ಮತಾಂಧತೆ, ಕಾಂಗ್ರೆಸ್ಗೆ ಮತದ ಅಂಧತೆ. ವೋಟ್ ಬ್ಯಾಂಕ್ ಗಿಟ್ಟಿಸಿಕೊಳ್ಳಬೇಕೆಂಬ ಮತದ ಅಂಧತೆ ಇದೆ. ತಾಲಿಬಾನಿಗಳನ್ನೂ ಮೀರಿಸುವ ಮತದ ಅಂಧತೆ ಇದೆ ಅಂತ ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆ ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷ ಮತಾಂತರದ ಪರವಾಗಿ ಇದೆಯೇ? ಎಂದು ಪ್ರಶ್ನಿಸಿದ ಬಿಜೆಪಿ ನಾಯಕ ಸಿಟಿ ರವಿ, ಕಾಂಗ್ರೆಸ್ಗೆ ತಾಕತ್ತಿದ್ದರೆ ಬಹಿರಂಗವಾಗಿ ಸ್ಪಷ್ಟಪಡಿಸಲಿ ಅಂತ ಸವಾಲ್ ಹಾಕಿದ್ದಾರೆ. ಸೆಕ್ಯುಲರ್ ಹೆಸರಿನಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡುವುದನ್ನ ಸಹಿಸಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು. ಮತಾಂತರ, ರಾಷ್ಟ್ರಾಂತರಕ್ಕೆ ಸಮ ಎಂದು ಗಾಂಧಿ ಹೇಳಿದ್ದರು ಅಂತ ಸಿಟಿ ರವಿ ಹೇಳಿದರು.
ತಾಲಿಬಾನಿಗಳಿಗೆ ಮತಾಂಧತೆ, ಕಾಂಗ್ರೆಸ್ಗೆ ಮತದ ಅಂಧತೆ. ವೋಟ್ ಬ್ಯಾಂಕ್ ಗಿಟ್ಟಿಸಿಕೊಳ್ಳಬೇಕೆಂಬ ಮತದ ಅಂಧತೆ ಇದೆ. ತಾಲಿಬಾನಿಗಳನ್ನೂ ಮೀರಿಸುವ ಮತದ ಅಂಧತೆ ಇದೆ ಅಂತ ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆ ಹೇಳಿದ್ದಾರೆ. ಬ್ರಿಟಿಷರು ದೇಗುಲದ ಮೇಲಿನ ಪ್ರೀತಿಯಿಂದ ನಿಯಂತ್ರಕ್ಕೆ ತರಲಿಲ್ಲ. ದೇಗುಲದ ಆದಾಯದ ಮೇಲೆ ಕಟ್ಟಿಟ್ಟು ಹಿಡಿತಕ್ಕೆ ತೆಗೆದುಕೊಂಡರು. ದೇವಸ್ಥಾನಗಳ ಹಿಡಿತ ಸ್ವಾತಂತ್ರ್ಯ ನೈಜ ಅರ್ಥಕ್ಕೆ ಸೂಕ್ತವಲ್ಲ. ಕೆಪಿಸಿಸಿ ಅಧ್ಯಕ್ಷರು ಭಸ್ಮ ಆಗ್ತೀರಿ ಎಂದು ಟೀಕೆ ಮಾಡಿದರು. ಅವರೇನಾದರೂ ಭಸ್ಮಾಸುರ ಅಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದ ಸಿಟಿ ರವಿ, ಆ ರೀತಿ ತಿಳಿದಿದ್ರೆ ಅವರ ಕೈ ಅವರ ತಲೆ ಮೇಲೆ ಇಡೋದು ಗೊತ್ತಿದೆ. ಡಿಕೆ ಶಿವಕುಮಾರ್ ಶಾಪಗ್ರಸ್ತ, ಬೇಲ್ ಮೇಲೆ ಹೊರಗಿದ್ದಾರೆ. ಇಡಿ, ಸಿಬಿಐ ಸ್ವಲ್ಪ ಗಟ್ಟಿಯಾದ್ರೆ ಅವರು ಒಳಗೋಗಬೇಕಾಗುತ್ತದೆ ಅಂತ ಟಾಂಗ್ ಕೊಟ್ಟಿದ್ದಾರೆ.
ಸುಳ್ಳು ಹೇಳಿಕೊಂಡು ಪಾದಯಾತ್ರೆ ಮಾಡಬೇಡಿ. ಆರೋಗ್ಯ ಸುಧಾರಣೆಗೆ ಬೇಕಾದ್ರೆ ಪಾದಯಾತ್ರೆ ಮಾಡಿ. ಮೇಕೆದಾಟು ಯೋಜನೆಗೆ ಕೇಂದ್ರ ತಾತ್ವಿಕ ಒಪ್ಪಿಗೆ ಕೊಟ್ಟಿದೆ. ಈಗ ಕಾಂಗ್ರೆಸ್ ಪಕ್ಷ ಯಾರ ವಿರುದ್ಧ ಪಾದಯಾತ್ರೆ ಮಾಡ್ತಿದೆ? ಯಾವ ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ? ಅಂತ ಕಾಂಗ್ರೆಸ್ ನಾಯಕರಿಗೆ ಸಿಟಿ ರವಿ ಪ್ರಶ್ನಿಸಿದ್ದಾರೆ.
ಬಿಜೆಪಿ ತಂದ ಪರಿವರ್ತನೆ ವಿರೋಧಿಸುವ ಕೆಟ್ಟ ಛಾಳಿ ಅನುಭವಿ ರಾಜಕೀಯ ಪಕ್ಷ ಕಾಂಗ್ರೆಸ್ಗೆ ಕೆಟ್ಟ ಛಾಳಿ ಇದೆ. ಎಲ್ಲವನ್ನೂ ವಿರೋಧಿಸಬೇಕೆಂಬ ಮನೋಭಾವನೆಯಿದೆ. ದೇಶದ ಹಿತದೃಷ್ಟಿಗೆ ಕಾಂಗ್ರೆಸ್ ನಕಾರಾತ್ಮಕ ನಿಲುವು ಅಪಾಯ. ಸಿಎಎ ತಂದಾಗಲೂ ಇದೇ ರೀತಿ ಕಾಂಗ್ರೆಸ್ ವಿರೋಧಿಸಿತ್ತು. ಹೊಸ ಶಿಕ್ಷ ನೀತಿ ಬಗ್ಗೆಯೂ ತಿಳಿಯದೇ ವಿರೋಧ ಮಾಡಿತ್ತು. ಕಾಲಕಾಲಕ್ಕೆ ಬದಲಾವಣೆ ಬೇಕೆಂಬ ಮನಸ್ಥಿತಿ ಕಾಂಗ್ರೆಸ್ಗಿಲ್ಲ. ಅದಕ್ಕಾಗಿಯೇ ಒಂದು ಕುಟುಂಬಕ್ಕೆ ಅದು ಜೋತು ಬಿದ್ದಿದೆ ಅಂತ ಕಾಂಗ್ರೆಸ್ ವಿರುದ್ಧ ರವಿ ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್, ಹೆಚ್‌ಡಿಕೆ ಜೋಡೆತ್ತುಗಳು ಎನ್ನುತ್ತಿದ್ದರು. ಜೋಡೆತ್ತುಗಳು ಇಷ್ಟುಬೇಗ ಕಣಿ ಹರಿದುಕೊಂಡುಬಿಟ್ಟಿದೆಯಾ? ಉಪ್ಪು ತಿಂದವನು ನೀರು ಕುಡಿಯಲೇಬೇಕೆನ್ನುತ್ತಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಬಹಳಷ್ಟು ಸಾರಿ ಹೇಳಿದ್ದಾರೆ. ಕೆಲವರು ಉಪ್ಪು ತಿಂದಿದ್ದಾರೆ, ನೀರು ಕುಡಿಯುತ್ತಾರೆ ಅಂತ ಸುದ್ದಿಗೋಷ್ಟಿಯಲ್ಲಿ ರವಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ
Published On - 12:38 pm, Sun, 2 January 22