AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಜೋಡೋ ಯಾತ್ರೆ ವೇಳೆ ವಿವೇಕಾನಂದರನ್ನು ರಾಹುಲ್ ಕಡೆಗಣಿಸಿದ್ದಾರೆ; ಸ್ಮೃತಿ ಇರಾನಿ ಆರೋಪಕ್ಕೆ ಕಾಂಗ್ರೆಸ್ ಖಡಕ್ ಉತ್ತರ

ಇರಾನಿಯವರ ಆರೋಪಗಳಿಗೆ  ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಬಿಜೆಪಿಯು ಸುಳ್ಳುಗಳನ್ನು ಪ್ರಚಾರ ಮಾಡುವುದನ್ನು ನಂಬುತ್ತದೆ. ಸ್ಮೃತಿ ಇರಾನಿ ಅವರಿಗೆ...

ಭಾರತ್ ಜೋಡೋ ಯಾತ್ರೆ  ವೇಳೆ ವಿವೇಕಾನಂದರನ್ನು ರಾಹುಲ್ ಕಡೆಗಣಿಸಿದ್ದಾರೆ; ಸ್ಮೃತಿ ಇರಾನಿ ಆರೋಪಕ್ಕೆ ಕಾಂಗ್ರೆಸ್ ಖಡಕ್ ಉತ್ತರ
ಸ್ಮೃತಿ ಇರಾನಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 12, 2022 | 8:31 PM

Share

ದೆಹಲಿ: ಕಳೆದ ವಾರ ಕನ್ಯಾಕುಮಾರಿಯಿಂದ (Smriti Irani) ತಮ್ಮ ಪಕ್ಷದ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ಆರಂಭಿಸುವ ವೇಳೆ ರಾಹುಲ್ ಗಾಂಧಿ (Rahul Gandhi) ಅವರು ಸ್ವಾಮಿ ವಿವೇಕಾನಂದರನ್ನು ಕಡೆಗಣಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಫ್ಯಾಕ್ಟ್ ಚೆಕ್ ಮಾಡಿ ವಿಡಿಯೊ ಟ್ವೀಟ್ ಮಾಡಿದೆ. ಸ್ಮೃತಿ ಇರಾನಿ ಅವರ ಆರೋಪದ ವಿಡಿಯೊ ಮತ್ತು ವಿವೇಕಾನಂದರ ಪ್ರತಿಮೆಯ ಮುಂದೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಗೌರವ ಸಲ್ಲಿಸುವ ವಿಡಿಯೊ ತುಣುಕುಗಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿರುವ ಸ್ಮೃತಿ ಇರಾನಿ ಅವರನ್ನು ಟೀಕಿಸಿ ಹಲವಾರು ಕಾಂಗ್ರೆಸ್ ನಾಯಕರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಈ ವಿಡಿಯೊ ಟ್ವೀಟ್ ಮಾಡಿ, ದಡ್ಡತನದ ಕೆಲಸ , ದೇವರು ಮೂರ್ಖ ಆತ್ಮಗಳನ್ನು ಆಶೀರ್ವದಿಸಲಿ ಎಂದಿದ್ದಾರೆ.

ಇರಾನಿಯವರ ಆರೋಪಗಳಿಗೆ  ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಬಿಜೆಪಿಯು ಸುಳ್ಳುಗಳನ್ನು ಪ್ರಚಾರ ಮಾಡುವುದನ್ನು ನಂಬುತ್ತದೆ. ಸ್ಮೃತಿ ಇರಾನಿ ಅವರಿಗೆ ವಿಷಯಗಳನ್ನು ಹೆಚ್ಚು ಸ್ಪಷ್ಟತೆಯಿಂದ ನೋಡಲು ಸಹಾಯ ಮಾಡಲು ಅವರಿಗೆ ಹೊಸ ಕನ್ನಡಕದ ಅಗತ್ಯವಿದ್ದರೆ, ನಾವು ಆಕೆಗೆ ಒಂದನ್ನು ಒದಗಿಸುತ್ತೇವೆ ಎಂದಿದ್ದಾರೆ.

ಇಂದು ನಾನು ಕಾಂಗ್ರೆಸ್ ಪಕ್ಷವನ್ನು ಕೇಳಲು ಬಯಸುತ್ತೇನೆ, ನೀವು ಕನ್ಯಾಕುಮಾರಿಯಿಂದ ಭಾರತವನ್ನು ಏಕೀಕರಣಗೊಳಿಸಲು ‘ಯಾತ್ರೆ’ ಆರಂಭಿಸುತ್ತಿದ್ದರೆ, ಕನಿಷ್ಠ ಪಕ್ಷ ಸ್ವಾಮಿ ವಿವೇಕಾನಂದರನ್ನು ಕಡೆಗಣಿಸುವಷ್ಟು ನಾಚಿಕೆಗೇಡಿನವರಾಗಬೇಡಿ. ಆದರೆ ವಿವೇಕಾನಂದರನ್ನು ಗೌರವಿಸುವುದು ರಾಹುಲ್ ಗಾಂಧಿಗೆ ಸ್ವೀಕಾರಾರ್ಹವಲ್ಲ ಎಂದು ತೋರುತ್ತದೆ ಎಂದು ಸ್ಮತಿ ಇರಾನಿ ಹೇಳಿದ್ದರು.

ಆಕೆಯ ವಿಡಿಯೊ ಪಕ್ಕದಲ್ಲೇ ಪ್ಲೇ ಆಗುತ್ತಿರುವ ವಿಡಿಯೊ ಕ್ಲಿಪ್‌ನಲ್ಲಿ ಕಾಂಗ್ರೆಸ್ ನಾಯಕಿ ವಿವೇಕಾನಂದರ ಪ್ರತಿಮೆಯ ಮುಂದೆ ಕೈಮುಗಿದು ನಿಂತು ಗೌರವ ಸೂಚಕವಾಗಿ ಪ್ರದಕ್ಷಿಣೆ ಮಾಡುವುದನ್ನು ತೋರಿಸುತ್ತದೆ.