ಸೌಮ್ಯ ರೆಡ್ಡಿ ಚುನಾವಣಾ ತಕರಾರು: ಬಿಜೆಪಿ ಶಾಸಕ ರಾಮಮೂರ್ತಿಗೆ ಶಾಕ್ ಕೊಟ್ಟ ಸುಪ್ರೀಂಕೋರ್ಟ್

ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಅಸಿಂಧು ಕೋರಿ ಜಯನಗರ ಶಾಸಕರ ವಿರುದ್ಧ ಸೌಮ್ಯ ರೆಡ್ಡಿ ಸಲ್ಲಿಸಿದ ಚುನಾವಣಾ ಅರ್ಜಿಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿ.ಕೆ. ರಾಮಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ರಾಮಮೂರ್ತಿ ಅವರಿಗೆ ಲಿಖಿತ ಹೇಳಿಕೆ ಸಲ್ಲಿಸಲು ಮೂರು ವಾರಗಳ ಅವಕಾಶ ನೀಡಲಾಗಿದೆ.

ಸೌಮ್ಯ ರೆಡ್ಡಿ ಚುನಾವಣಾ ತಕರಾರು: ಬಿಜೆಪಿ ಶಾಸಕ ರಾಮಮೂರ್ತಿಗೆ ಶಾಕ್ ಕೊಟ್ಟ ಸುಪ್ರೀಂಕೋರ್ಟ್
ಸೌಮ್ಯ ರೆಡ್ಡಿ ಚುನಾವಣಾ ತಕರಾರು: ಬಿಜೆಪಿ ಶಾಸಕ ರಾಮಮೂರ್ತಿಗೆ ಶಾಕ್ ಕೊಟ್ಟ ಸುಪ್ರೀಂಕೋರ್ಟ್
Edited By:

Updated on: Mar 03, 2025 | 9:21 PM

ಬೆಂಗಳೂರು, ಮಾರ್ಚ್​ 03: ಜಯನಗರ ಶಾಸಕರ ವಿರುದ್ಧ ಸೌಮ್ಯ ರೆಡ್ಡಿ (Sowmya Reddy) ಸಲ್ಲಿಸಿದ್ದ ಚುನಾವಣಾ ಅರ್ಜಿಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿ.ಕೆ. ರಾಮಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಆ ಮೂಲಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ ಎತ್ತಿದೆ.

ಜಯನಗರ ಶಾಸಕರ ವಿರುದ್ಧ ಸೌಮ್ಯ ರೆಡ್ಡಿ ಚುನಾವಣಾ ತಕರಾರು ವಿಚಾರವಾಗಿ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಡಿವಿಡಿ ಸೇರಿ 10 ದಾಖಲೆ ಹಾಜರುಪಡಿಸಲು ಪರಾಜಿತ ಅಭ್ಯರ್ಥಿ ಸೌಮ್ಯಾರೆಡ್ಡಿಗೆ ಫೆ.14ರಂದು ಹೈಕೋರ್ಟ್ ಅನುಮತಿ ನೀಡಿತ್ತು.

ಇದನ್ನೂ ಓದಿ: ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರ ಆಯ್ಕೆ ಅಸಿಂಧು ಕೋರಿ ಸೌಮ್ಯ ರೆಡ್ಡಿ ಅರ್ಜಿ: ಶಾಸಕ ಸಿಕೆ ರಾಮಮೂರ್ತಿಗೆ ಹೈಕೋರ್ಟ್ ಸಮನ್ಸ್

ಇದನ್ನೂ ಓದಿ
ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ
ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರ ಆಯ್ಕೆ ಅಸಿಂಧು ಕೋರಿ ಸೌಮ್ಯ ರೆಡ್ಡಿ ಅರ್ಜಿ: ಶಾಸಕ ಸಿಕೆ ರಾಮಮೂರ್ತಿಗೆ ಹೈಕೋರ್ಟ್ ಸಮನ್ಸ್
ಮರು ಎಣಿಕೆಯಲ್ಲಿ ಸೌಮ್ಯ ರೆಡ್ಡಿಗೆ ಸೋಲು: ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ
‘ಕೈ’ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಕೊನೆಗೂ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟ, ಬಿಜೆಪಿಗೆ ಗೆಲುವು – ನಡುರಾತ್ರಿ ಕಣ್ಣೀರು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ

ಇತ್ತ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿ.ಕೆ.ರಾಮಮೂರ್ತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇಂದು ವಿಚಾರಣೆ ನಡೆದು ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಸಿ.ಕೆ.ರಾಮಮೂರ್ತಿ ಅರ್ಜಿವನ್ನು ವಜಾ ಮಾಡಿರುವ ಸುಪ್ರೀಂಕೋರ್ಟ್, ಸೌಮ್ಯಾ ರೆಡ್ಡಿ ಸಲ್ಲಿಸಿರುವ ದಾಖಲೆಗೆ 3 ವಾರಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಅವಕಾಶ ನೀಡಿದೆ.

ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 16 ಮತಗಳಿಂದ ಪರಾಜಿತಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಚುನಾವಣೆಯಲ್ಲಿ ಜಯಿಸಿದ್ದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಮರು ಎಣಿಕೆಯಲ್ಲಿ ಸೌಮ್ಯ ರೆಡ್ಡಿಗೆ ಸೋಲು: ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ

ಮತಯಂತ್ರದ ಮತಗಳ‌ ಎಣಿಕೆಯಲ್ಲಿ ತಾನು ಮುನ್ನಡೆ ಸಾಧಿಸಿದ್ದೆ, ಆದರೆ ಅಂಚೆ ಮತಪತ್ರಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ. 827 ಮತಗಳನ್ನು ಪ್ರತಿಬಾರಿ ಮರುಎಣಿಕೆ ಮಾಡಿದಾಗಲೂ ಪ್ರತ್ಯೇಕ ಅಂಕಿಅಂಶ ಬಂದಿದೆ. ಮತ ಎಣಿಕೆ ಆರಂಭವಾದ ನಂತರವೂ ಪೋಸ್ಟ್ ಮೂಲಕ ಬಂದಿದ್ದ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ ಎಂದೆಲ್ಲಾ ಆರೋಪಿಸಿದ್ದರು. ವಿಜೇತ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಆಯ್ಕೆ ಅಸಿಂಧುಗೊಳಿಸಬೇಕೆಂದು ಚುನಾವಣಾ ತಕರಾರು ಅರ್ಜಿಯಲ್ಲಿ ಸೌಮ್ಯ ರೆಡ್ಡಿ ಮನವಿ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.