ಮೈಸೂರು, ದಾಬಸ್ ಪೇಟೆ ಸೇರಿದಂತೆ ಹಲವೆಡೆಗೆ ಸಬ್​ಅರ್ಬನ್​ ರೈಲು ಮಾರ್ಗ ವಿಸ್ತರಣೆ: ಸಚಿವ ಎಂಬಿ ಪಾಟೀಲ್​

|

Updated on: Jun 13, 2023 | 5:36 PM

ಸಬ್​ಅರ್ಬನ್​ ರೈಲಿನ ಮಾರ್ಗ ವಿಸ್ತರಣೆ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ಮೈಸೂರು, ದಾಬಸ್ ಪೇಟೆ ಸೇರಿದಂತೆ ಹಲವು ಕಡೆ ವಿಸ್ತರಣೆಗೆ ನಿರ್ಧಾರ ಮಾಡಿದ್ದೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್​ ಹೇಳಿದರು.

ಮೈಸೂರು, ದಾಬಸ್ ಪೇಟೆ ಸೇರಿದಂತೆ ಹಲವೆಡೆಗೆ ಸಬ್​ಅರ್ಬನ್​ ರೈಲು ಮಾರ್ಗ ವಿಸ್ತರಣೆ: ಸಚಿವ ಎಂಬಿ ಪಾಟೀಲ್​
ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್
Follow us on

ಬೆಂಗಳೂರು: ಸಬ್​ಅರ್ಬನ್​ ರೈಲಿನ ಮಾರ್ಗ ವಿಸ್ತರಣೆ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ಮೈಸೂರು, ದಾಬಸ್ ಪೇಟೆ ಸೇರಿದಂತೆ ಹಲವು ಕಡೆ ವಿಸ್ತರಣೆಗೆ ನಿರ್ಧಾರ ಮಾಡಿದ್ದೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ (M B Patil) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಏರ್​ಪೋರ್ಟ್​​ಗಳನ್ನು ನಾವೇ ನಿರ್ವಹಣೆ ಮಾಡಲು ಚಿಂತನೆ ಮಾಡಿದ್ದು, 2-3 ಕಡೆ ರಾಜ್ಯ ಸರ್ಕಾರವೇ ಏರ್​ಪೋರ್ಟ್​​ ನಿರ್ವಹಣೆ ಮಾಡುತ್ತಿದೆ ಎಂದು ಹೇಳಿದರು.

ಕೈಗಾರಿಕೆ ವಲಯದಲ್ಲಿ 7 ಸೆಕ್ಟರ್ ಗುರುತಿಸಿದ್ದೇವೆ‌‌.​ ವಿಷನ್ ಗ್ರೂಪ್ ಮಾಡಿ ಅಭಿವೃದ್ಧಿ ಮಾಡುವ ಚಿಂತನೆ ನಡೆಸಿದ್ದೇವೆ. ಅಗತ್ಯ ಬಿದ್ದರೆ 7 ಸೆಕ್ಟರ್ ಜೊತೆ ಇನ್ನು 2 ಸೆಕ್ಟರ್ ಪ್ರಾರಂಭ ಮಾಡುವುದಕ್ಕೆ ಸಿದ್ದವಾಗಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಯಾರ್ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ಅವರೇ ಹೇಳಲಿ: ಪ್ರತಾಪ್​ ಸಿಂಹ ವಿರುದ್ಧ ಸಚಿವ ಹೆಚ್​ಸಿ ಮಹದೇವಪ್ಪ ಕಿಡಿ

ಪ್ರತಾಪ್ ಸಿಂಹ, ಸಿ.ಟಿ.ರವಿ ಸುಮ್ಮನೆ ಹೀಗೆ ಹೇಳೋದು ಬೇಡ

ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿಗೆ ಸೋಲು ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಪ್ರತಾಪ್ ಸಿಂಹ, ಸಿ.ಟಿ.ರವಿ ಸುಮ್ಮನೆ ಹೀಗೆ ಹೇಳೋದು ಬೇಡ. ಹೊಂದಾಣಿಕೆ ಮಾಡಿಕೊಂಡವರ ಹೆಸರನ್ನು ಬಹಿರಂಗಪಡಿಸಬೇಕು. ನಾನು ಅವರನ್ನ ಒತ್ತಾಯ ಮಾಡುತ್ತೇನೆ ಅವರು ಹೆಸರು ಹೇಳಲಿ. ಅವರು ಹೆಸರು ಬಹಿರಂಗ ಪಡೆಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಇದನ್ನೂ ಓದಿ: ಹುಸಿ ಗ್ಯಾರಂಟಿಗಳ ಭಾರದಿಂದಲೇ ಕಾಂಗ್ರೆಸ್ ಸರ್ಕಾರ ಕುಸಿದು ಬೀಳುವುದು ನಿಶ್ಚಿತ: ಸುನಿಲ್ ಕುಮಾರ್

ಯಾವುದೇ ಸಂಸ್ಥೆಗೆ ನೀಡಿದ ಭೂಮಿ ಹಿಂದಕ್ಕೆ ಪಡೆಯುವ ಪ್ರಸ್ತಾಪವಿಲ್ಲ

ಆರ್​ಎಸ್​ಎಸ್​ ಅಂಗಸಂಸ್ಥೆಗೆ ನೀಡಿದ್ದ ಭೂಮಿ ಹಿಂಪಡೆಯುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಸಂಸ್ಥೆಗೆ ನೀಡಿದ ಭೂಮಿ ಹಿಂದಕ್ಕೆ ಪಡೆಯುವ ಪ್ರಸ್ತಾಪವಿಲ್ಲ. ಭೂಮಿ ನೀಡಿರುವ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಯಾವ ರೀತಿ ಉಪಯೋಗ ಆಗುತ್ತಿದೆ ಅನ್ನೋದು ಮುಖ್ಯವಾಗುತ್ತದೆ. ಎಲ್ಲೆಲ್ಲಿ ಭೂಮಿ ನೀಡಲಾಗಿದೆ ಅನ್ನೋ ಮಾಹಿತಿ ಪಡೆದುಕೊಳ್ಳುತ್ತೇವೆ. ಸದ್ಯಕ್ಕೆ ಭೂಮಿ ಹಿಂಪಡೆಯುವ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.