ಮೈಸೂರು: ನಾನು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ. ಮುಂದಿನ ಚುನಾವಣೆ ಪಕ್ಷದ ಚಿನ್ನೆ ಅಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಚುನಾವಣೆ ಇನ್ನು ಎರಡೂವರೆ ವರ್ಷ ಇದೆ. ಆಗ ಅದರ ಬಗ್ಗೆ ಯೋಚನೆ ಮಾಡುವೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಅಂಬರೀಶ್ ರಾಜಕೀಯ ಎಂಟ್ರಿ ವಿಚಾರವಾಗಿ ಅದು ಅಭಿಷೇಕ್ ಅವರನ್ನೇ ಕೇಳಬೇಕು. ಅಭಿಷೇಕ್ ನನಗೆ ಏನೂ ಹೇಳುವುದಿಲ್ಲ. ಸಿನಿಮಾ ಬಗ್ಗೆ ಕೂಡ ಆತ ನನ್ನ ಜೊತೆ ಚರ್ಚೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಒತ್ತಡದಲ್ಲಿ ಸಿನಿಮಾರಂಗವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ
ರಾಜಕೀಯ ಒತ್ತಡದಲ್ಲಿ ಸಿನಿಮಾರಂಗವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೂ ಒತ್ತಡದ ನಡುವೆಯೂ ಈ ವರ್ಷ ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಚಿತ್ರರಂಗ ನನ್ನ ಕುಟುಂಬ ಇದ್ದಂತೆ. ಚಿತ್ರರಂಗ ನನಗೆ ಎಲ್ಲವನ್ನೂ ನೀಡಿದೆ. ಅಲ್ಲಿ ಉತ್ತಮ ನೆನಪುಗಳಿವೆ ಯಾವತ್ತು ನಾನು ಚಿತ್ರರಂಗದ ಜೊತೆ ಇರುತ್ತೇನೆ ಎಂದು ಸುಮಲತಾ ತಿಳಿಸಿದ್ದಾರೆ.
ಜನ ನಾಲ್ಕು ಒಳ್ಳೆ ಮಾತಾಡುತ್ತಾರೆ. ಅದನ್ನೇ ಕ್ರೆಡಿಟ್ ಅಂದರೆ ಏನು; ಪ್ರತಾಪ್ ಸಿಂಹ ಪ್ರಶ್ನೆ
ಇತ್ತ ಮೈಸೂರಿನ ಕೆ.ಆರ್ ಆಸ್ಪತ್ರೆ ಹಾಗು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಶತಮಾನೋತ್ಸವ ಹಿನ್ನೆಲೆ ಮೈಸೂರಿನ ಕೆಆರ್.ಆಸ್ಪತ್ರೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದಾರೆ. ಸಂಸ್ಥೆ ಶತಮಾನೋತ್ಸವ ಆಚರಣೆ ಸಂಬಂಧಿಸಿದ ಸಭೆಯಲ್ಲಿ ಭಾಗಿ ಆಗಿದ್ದಾರೆ. ನಿರ್ದೇಶಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಶತಮಾನೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಮಾತುಕತೆ ನಡೆಸಲಾಗಿದೆ. ಸಭೆಯಲ್ಲಿ ಡೀನ್ ದಿನೇಶ್ ಸೇರಿದಂತೆ ಅಧಿಕಾರಿಗಳು ಭಾಗಿ ಆಗಿದ್ದಾರೆ.
ಬೆಂಗಳೂರು ಮೈಸೂರು ಹೈವೆ ನಿರ್ಮಾಣದ ವೇಳೆ ಹಲವು ಸಬ್ ವೇ, ಸೇತುವೆಯನ್ನು ಜನರ ಮನವಿಗೆ ಅನುಗುಣವಾಗಿ ಮಾಡಿಸಿದ್ದೇನೆ. ಮೈಸೂರಿಗೆ ಹೈವೆ ತರುತ್ತಿದ್ದೇನೆ ಮಧ್ಯ ಏನಾದರೂ ಸಮಸ್ಯೆಯಾದರೆ ಆದನ್ನು ಪರಿಹರಿಸುವ ಜವಾಬ್ದಾರಿ ನನ್ನದು. ಅದೇ ಕೆಲಸ ನಾನು ಮಾಡುತ್ತಿದ್ದೇನೆ. ಜನ ಕೆಲಸ ಮಾಡಿ ಕೊಡಿ ಅಂತಾ ಕೇಳಿದರೆ ಯಾರಿಗೂ ಇಲ್ಲ ಅನ್ನಲ್ಲ. ಕೆಲಸ ಮಾಡಿಕೊಟ್ಟರೆ ಜನ ನಾಲ್ಕು ಒಳ್ಳೆ ಮಾತಾಡುತ್ತಾರೆ. ಅದನ್ನೇ ಕ್ರೆಡಿಟ್ ಅಂದರೆ ಏನು? ನನ್ನ ಕ್ಷೇತ್ರಕ್ಕೆ ಸಂಬಂಧ ಇರದ ಕ್ಷೇತ್ರದವರು ಏನಾದರೂ ಕೆಲಸ ಮಾಡಿ ಕೊಡಿ ಅಂತಾ ಕೇಳುತ್ತಾರೆ ನಾನು ನನ್ನ ಕೈಯಲ್ಲಿ ಸಾಧ್ಯವಾದರೆ ಮಾಡಿ ಕೊಡುತ್ತೇನೆ. ಇದರಲ್ಲಿ ತಪ್ಪೇನಿದೆ? ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ನಾನು ಮಾಡಿದ ಕೆಲಸ ಮಾಡಿಲ್ಲ ಅಂದರೆ ನಾನು ಸುಮ್ಮನಿರಲ್ಲ: ಸುಮಲತಾ ಅಂಬರೀಶ್ ವಾಗ್ದಾಳಿ
ಇದನ್ನೂ ಓದಿ: ಶಾಸಕರು ಮಾಡಬೇಕಾದ ಕೆಲಸಗಳನ್ನ ನಾನು ಮಾಡ್ತಿದ್ದೇನೆ: ಜೆಡಿಎಸ್ ಶಾಸಕರತ್ತ ಚಾಟಿ ಬೀಸಿದ ಸಂಸದೆ ಸುಮಲತಾ
Published On - 12:43 pm, Wed, 9 March 22