ಮಹಾರಾಷ್ಟ್ರದ (Maharashtra) ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ (Eknath Shinde) ಮತ್ತು ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ (Devendra Fadnavis) ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.ಗುರುವಾರ ಮಧ್ಯಾಹ್ನ ಶಿಂಧೆ ಮತ್ತು ಫಡ್ನವಿಸ್ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫಡ್ನವಿಸ್, ಬಿಜೆಪಿಯನ್ನು ಉರುಳಿಸಲು 2019 ರಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸುವ ಮೂಲಕ ಶಿವಸೇನಾ ಸಾರ್ವಜನಿಕ ಜನಾದೇಶವನ್ನು ಅವಮಾನಿಸಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರದ ಆಳ್ವಿಕೆಯಲ್ಲಿ ಅವರು ಭ್ರಷ್ಟಾಚಾರದ ನಡೆದಿದೆ. ಅದರ ಪರಿಣಾಮ ಇಬ್ಬರು ನಾಯಕರು ಜೈಲಿನಲ್ಲಿದ್ದಾರೆ. ಶಿಂಧೆ ನೇತೃತ್ವದ ಸರ್ಕಾರದ ಭಾಗವಾಗುವುದಿಲ್ಲ, ಆದರೆ ಹೊರಗಿನಿಂದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಫಡ್ನವಿಸ್ ಈ ಹಿಂದೆ ಹೇಳಿದ್ದರು. ಫಡ್ನವಿಸ್ ಅವರು ಹೀಗೆ ಹೇಳಿದ ನಂತರ ಜೆಪಿ ನಡ್ಡಾ ಅವರು ಫಡ್ನವಿಸ್ ಮಹಾ ಸರ್ಕಾರದ ಭಾಗವಾಗಬೇಕೆಂದು ಬಿಜೆಪಿ ನೇತೃತ್ವ ಬಯಸಿದೆ. ನಾವು ಅವರಲ್ಲಿ ವೈಯಕ್ತಿಕ ಮನವಿ ಮಾಡಿದ್ದೇವೆ ಎಂದು ಹೇಳಿದ್ದರು. ನಡ್ಡಾ ಅವರ ಹೇಳಿಕೆಯ ಬೆನ್ನಲ್ಲೇ ಅಮಿತ್ ಶಾ ನಡ್ಡಾ ಮನವಿಗೆ ಫಡ್ನವಿಸ್ ಒಪ್ಪಿದ್ದಾರೆ.ಅವರು ಸರ್ಕಾರದ ಭಾಗವಾಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Mumbai: Eknath Shinde takes oath as the Chief Minister of Maharashtra pic.twitter.com/F7GpqxGozq
ಇದನ್ನೂ ಓದಿ— ANI (@ANI) June 30, 2022
#WATCH | Mumbai: BJP leader Devendra Fadnavis takes oath as the Deputy Chief Minister of #Maharashtra pic.twitter.com/RWfbzApeqC
— ANI (@ANI) June 30, 2022
“ಇದು ಬಾಳಾಸಾಹೇಬ್ ಠಾಕ್ರೆ ಮತ್ತು ‘ಧರ್ಮವೀರ’ ಆನಂದ್ ದಿಘೆ ಅವರ ಸಿದ್ಧಾಂತದ ವಿಜಯವಾಗಿದೆ. ನಮ್ಮ ಸರ್ಕಾರ ಸಾಮಾನ್ಯ ಜನರ ಹಿತಾಸಕ್ತಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದು ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಹೇಳಿದರು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಮತ್ತು ಫಡ್ನವಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
Congratulations to Shri @Dev_Fadnavis Ji on taking oath as Maharashtra Deputy CM. He is an inspiration for every BJP Karyakarta. His experience and expertise will be an asset for the Government. I am certain he will further strengthen Maharashtra’s growth trajectory.
— Narendra Modi (@narendramodi) June 30, 2022
“ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ್ ಶಿಂಧೆಜೀ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ತಳಮಟ್ಟದ ನಾಯಕ, ಅವರ ಶ್ರೀಮಂತ ರಾಜಕೀಯ, ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ತಮ್ಮೊಂದಿಗೆ ತರುತ್ತಾರೆ. ಮಹಾರಾಷ್ಟ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Published On - 7:44 pm, Thu, 30 June 22