ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ರನ್ನು ಅಭಿನಂದಿಸಿದ ಉದ್ಧವ್ ಠಾಕ್ರೆ
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಅಭಿನಂದನೆಗಳು. ನೀವು ಮಹಾರಾಷ್ಟ್ರದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಉದ್ಧವ್ ಠಾಕ್ರೆ ಟ್ವೀಟ್.
ಏಕನಾಥ್ ಶಿಂಧೆ (Eknath Shinde) ಮತ್ತು ದೇವೇಂದ್ರ ಫಡ್ನವಿಸ್ (Devendra Fadnavis) ಅವರನ್ನು ಉದ್ಧವ್ ಠಾಕ್ರೆ (Uddhav Thackeray) ಅಭಿನಂದಿಸಿದ್ದಾರೆ. ಮರಾಠಿಯಲ್ಲಿ ಟ್ವೀಟ್ ಮಾಡಿದ ಉದ್ಧವ್, “ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಅಭಿನಂದನೆಗಳು. ನೀವು ಮಹಾರಾಷ್ಟ್ರದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ. ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ 20 ನೇ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇಂದು ಸಂಜೆ ಅಚ್ಚರಿಯ ನಡೆಯಲ್ಲಿ, ಶಿವಸೇನೆಯಲ್ಲಿ ಬಂಡಾಯದ ನೇತೃತ್ವ ವಹಿಸಿದ್ದ ಶಿಂಧೆ ಅವರು ಹೊಸ ಸಿಎಂ ಆಗಲಿದ್ದಾರೆ ಎಂದು ಫಡ್ನವಿಸ್ ಘೋಷಿಸಿದರು. ಶಿಂಧೆ ಅವರನ್ನು ಸಿಎಂ ಆಗಿ ಘೋಷಿಸಿದ್ದ ಫಡ್ನವಿಸ್ ತಾನು ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಹೇಳಿದ್ದರು. ನಂತರ ಬಿಜೆಪಿ ನೇತೃತ್ವ ಅವರ ಮನವೊಲಿಸಿದ್ದು ಉಪಮುಖ್ಯಮಂತ್ರಿಯಾಗಿ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
महाराष्ट्र राज्याचे नवनियुक्त मुख्यमंत्री @mieknathshinde जी व उपमुख्यमंत्री @Dev_Fadnavis जी यांना भावी वाटचालीस शुभेच्छा. आपल्या हातून महाराष्ट्रामध्ये चांगले काम होवो, ही सदिच्छा!
ಇದನ್ನೂ ಓದಿ— Office of Uddhav Thackeray (@OfficeofUT) June 30, 2022
ರಾಜ್ಯಪಾಲ ಕೊಶ್ಯಾರಿ ಅವರು ಶಿಂಧೆ ಮತ್ತು ಫಡ್ನವಿಸ್ ಅವರಿಗೆ ರಾಜಭವನದಲ್ಲಿ ಸಂಜೆ 7.30ಕ್ಕೆ ಪ್ರಮಾಣ ವಚನ ಬೋಧಿಸಿದರು. ನಾಲ್ಕು ಬಾರಿ ಶಾಸಕರಾಗಿರುವ ಶಿಂಧೆ ಅವರು ಶಿವಸೇನೆಯ ದಿವಂಗತ ನಾಯಕರಾದ ಬಾಳ್ ಠಾಕ್ರೆ ಮತ್ತು ಅವರ ಆಪ್ತ ಆನಂದ್ ದಿಘೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Published On - 9:59 pm, Thu, 30 June 22