ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ! ಯಾರು ಈ ಏಕನಾಥ್ ಶಿಂಧೆ? ಇಲ್ಲಿದೆ ಮಾಹಿತಿ

ಏಕನಾಥ್ ಶಿಂಧೆ ಅವರು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ.  ಈ ಏಕನಾಥ್ ಶಿಂಧೆ ಯಾರು?, ರಾಜಕೀಯ ರಾಜಕೀಯಾ ಪ್ರವೇಶ ಹೇಗಿತ್ತು?  ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 

ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ! ಯಾರು ಈ ಏಕನಾಥ್ ಶಿಂಧೆ? ಇಲ್ಲಿದೆ ಮಾಹಿತಿ
Eknath Shinde
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 30, 2022 | 8:23 PM

ಮಹಾರಾಷ್ಟ್ರ ರಾಜಕಾರಣದ ಎಲ್ಲ ಗೊಂದಲಗಳಿಗೆ  ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಆಗುವ ಮೂಲಕ ಮುಕ್ತಿ ಸಿಕ್ಕಿದೆ.  ಇಂದು ಏಕನಾಥ್  ಶಿಂಧೆ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ  ದೇವೇಂದ್ರ ಫಡ್ನವಿಸ್ ಜಂಟಿ  ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಶಿಂಧೆ  ಜತೆ  ಜಂಟಿ  ಸುದ್ದಿಗೋಷ್ಠಿ  ಉದ್ದೇಶಿಸಿ ಮಾತನಾಡಿದ ಫಡ್ನವಿಸ್ ಇಂದು ಪ್ರಮಾಣವಚನ  ಸಮಾರಂಭದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು ಶಿವಸೇನಾ ಮತ್ತು ಬಿಜೆಪಿ ನಾಯಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾನು ಸರ್ಕಾರದ ಅಂಗವಾಗಿರುವುದಿಲ್ಲ ಎಂದಿದ್ದಾರೆ  ಫಡ್ನವಿಸ್. ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ  ರಾಜಕೀಯ ಹೈಡ್ರಾಮ ನಡೆಯುತ್ತಿತ್ತು. ಆದರೆ ಇಂದು ಇದಕ್ಕೆಲ್ಲ ಒಂದು ಅಂತ್ಯವನ್ನು ಹಾಡಿದ್ದಾರೆ. 50 ಶಾಸಕರೊಂದಿಗೆ  ವನವಾಸ ನಡೆಸಿದ ಏಕನಾಥ್ ಶಿಂಧೆ ಅವರು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ.  ಈ ಏಕನಾಥ್ ಶಿಂಧೆ ಯಾರು?, ರಾಜಕೀಯ ರಾಜಕೀಯಾ ಪ್ರವೇಶ ಹೇಗಿತ್ತು?  ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಏಕನಾಥ್ ಶಿಂಧೆ ಯಾರು? 

ಶಿಂಧೆ ಅವರು ಫೆಬ್ರವರಿ 9, 1964 ರಂದು ಸತಾರಾದಲ್ಲಿ ಜನಿಸಿದರು. ತಮ್ಮ  ಶಿಕ್ಷಣವನ್ನು ಮಂಗಳಾ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ 11ನೇ ತರಗತಿವರೆಗೆ ಶಿಕ್ಷಣ ಮುಗಿಸಿದರು. ಇದರ ನಂತರ ಶಿಕ್ಷಣವನ್ನು ತ್ಯಜಿಸಬೇಕಾದ ಸ್ಥಿತಿ ಬಂದಿತ್ತು, ಏಕೆಂದರೆ ಬಾಲ್ಯದಲ್ಲೇ ಅವರಿಗೆ ಕುಟುಂಬ ಜವಾಬ್ದಾರಿ ತಲೆ ಮೇಲೆ ಇತ್ತು.  1980 ರಲ್ಲಿ ಶಿಂಧೆ  ಅವರು ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯಿಂದ ಪ್ರಭಾವಿತರಾದರು ಮತ್ತು  ಪಕ್ಷಕ್ಕೆ ಸೇರಿದರು. ಆ ಸಮಯದಲ್ಲಿ, ಅವರು ಬೆಳಗಾವಿಯ ಸ್ಥಾನಮಾನದ ಕುರಿತು ಮಹಾರಾಷ್ಟ್ರ-ಕರ್ನಾಟಕ ಆಂದೋಲನದಂತಹ ಅನೇಕ ಆಂದೋಲನಗಳಲ್ಲಿ ಭಾಗವಹಿಸಿದರು, ನಂತರ ಅವರು 40 ದಿನಗಳ ಕಾಲ ಜೈಲುವಾಸ ಅನುಭವಿಸಿದರು.

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಮುಂಬೈಗೆ ಹೊಂದಿಕೊಂಡಿರುವ ಥಾಣೆ ನಗರದಲ್ಲಿ ಆಟೋ-ರಿಕ್ಷಾ ಚಾಲಕರಾಗಿದ್ದ ಶಿಂಧೆ  ಅವರು ರಾಜಕೀಯಕ್ಕೆ ಸೇರಿದ ನಂತರ ಥಾಣೆ-ಪಾಲ್ಘರ್ ಪ್ರದೇಶದಲ್ಲಿ ಬಹುಬೇಗ ಶಿವ ಸೇನಾ ಕಾರ್ಯಕರ್ತರಾಗಿ  ಹೊರಹೊಮ್ಮಿದರು ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಆಸಕ್ತಿಯಿಂದ  ಹೆಸರುವಾಸಿಯಾಗಿದ್ದರು. ಶಿಂಧೆ ಅವರ ಕಾರ್ಯಕ್ಷಮತೆಯನ್ನು ಕಂಡು ಬಾಳಾಸಾಹೇಬ್ ಠಾಕ್ರೆ ಅವರು  1997 ರಲ್ಲಿ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (TMC) ಚುನಾವಣೆಯಲ್ಲಿ ಕಾರ್ಪೊರೇಟರ್ ಆಗಿ ಸ್ಪರ್ಧಿಸಲು ಅವಕಾಶವನ್ನು ನೀಡಿದರು ಮತ್ತು ಅವರು  ಬಹುಮತದೊಂದಿಗೆ ಗೆದ್ದರು.

ಮಕ್ಕಳನ್ನು ಕಳೆದುಕೊಂಡ ಶಿಂಧೆ

ಜೂನ್ 2, 2000rರಂದು ಏಕನಾಥ ಶಿಂಧೆ  ಜೀವನದಲ್ಲಿ ಒಂದು ಕಹಿ ಘಟನೆ  ನಡೆಯುತ್ತದೆ.  ದೀಪೇಶ್ ( 11) ಮತ್ತು ಶುಭದಾ (ವಯಸ್ಸು 7)  ಬೋಟಿಂಗ್ ಮಾಡುವ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು. ಇದು ಶಿಂಧೆ ಅವರ ಜೀವನದಲ್ಲಿ ಕರಾಳ ದಿನ.  ಅಲ್ಲಿಂದ ಕುಸಿದ ಶಿಂಧೆ. ಇದನ್ನು ನೋಡಿದ ಆನಂದ್ ದಿಘೆ ಸಾಹೇಬರು ದಿನವೂ ಶಿಂಧೆ ಮನೆಗೆ ಬರುತ್ತಿದ್ದರು. ಶಿಂಧೆ ಜೊತೆಗೆ  ದೃಢವಾಗಿ ನಿಂತರು.

2004 ರಲ್ಲಿ, ಬಾಳಾಸಾಹೇಬ್ ಠಾಕ್ರೆ ಅವರು ಥಾಣೆ ವಿಧಾನಸಭಾ ಕ್ಷೇತ್ರದಿಂದ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲು ಶಿಂಧೆ ಅವರಿಗೆ ಅವಕಾಶ ನೀಡಿದರು ಮತ್ತು ದೊಡ್ಡ ಬಹುಮತದಿಂದ ಗೆದ್ದರು. 2005 ರಲ್ಲಿ, ಅವರು ಶಿವಸೇನಾ ಥಾಣೆ ಜಿಲ್ಲಾ ಮುಖ್ಯಸ್ಥರ  ಹುದ್ದೆಗೆ ನೇಮಕಗೊಂಡರು. ನಂತರದ 2009, 2014 ಮತ್ತು 2019 ರ ವಿಧಾನಸಭಾ ಚುನಾವಣೆಗಳಲ್ಲಿ ಅವರು ವಿಜಯಶಾಲಿಯಾದರು. 2014 ರ ಚುನಾವಣೆಯ ನಂತರ, ಅವರು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ನಂತರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.ಲೋಕೋಪಯೋಗಿ ಇಲಾಖೆ (ಸಾರ್ವಜನಿಕ ಉದ್ಯಮಗಳು) ಸಚಿವರಾಗಿ ಕಾರ್ಯನಿರ್ವಹಿಸಿದರು ಮತ್ತು ಜನವರಿ 2019 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡರು.

ಆದರೆ ಇದೀಗ ಸಮ್ಮಿಶ್ರ ಸರ್ಕಾರದಿಂದ ದೂರ ಉಳಿಯಲು ಬಿಜೆಪಿಯ ಜೊತೆಗೆ ಸೇರಿ ಸರ್ಕಾರ ನಡೆಸಲು ಮುಂದಾಗಿದ್ದಾರೆ.  ಮಹಾರಾಷ್ಟ್ರ ರಾಜಕಾರಣದ ಬಿಕ್ಕಟ್ಟು ಬಹಿರಂಗಗೊಂಡ ನಂತರ ಏಕನಾಥ್ ಶಿಂಧೆ (Eknath Sinde) ಅವರ ಹೆಸರು ದೇಶಾದ್ಯಂತ ಕೇಳಿ ಬರುತ್ತಿದೆ.  ಶಿವಸೇನೆಯ (Shiv Sena) ಮುಂಚೂಣಿ ನಾಯಕರಾಗಿರುವ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (Maha Vikas Aghadi – MVA) ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಅವರ ಮಗ ಶ್ರೀಕಾಂತ್ ಶಿಂಧೆ ಲೋಕಸಭಾ ಸದಸ್ಯರಾಗಿದ್ದಾರೆ. ಸೋದರ ಪ್ರಕಾಶ್ ಶಿಂಧೆ ಕೌನ್ಸಿಲರ್ ಆಗಿದ್ದಾರೆ.

ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿಕೂಟದ ‘ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ’ ಸರ್ಕಾರಕ್ಕೆ ಇದೀಗ ಪತನಗೊಂಡಿದೆ.  ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರು ಬಂಡಾಯ ಎದಿದ್ದರು.ವಿವಿಧ ರಾಜಕೀಯ ಪಕ್ಷಗಳ ಮುಖ್ಯ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಶಿಂಧೆ ಇತ್ತೀಚೆಗೆ ಶಿವಸೇನೆಯ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ಹೊಂದಿದ್ದರು. ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಹಲವು ಆಪ್ತರ ಬಳಿ ನೋವು ತೋಡಿಕೊಂಡಿದ್ದರು. ಶಿವಸೇನೆಯ ಭದ್ರಕೋಟೆ ಎನಿಸಿರುವ ಥಾಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಿಂಧೆ ಅವರಿಗೆ ಶಿವಸೇನೆಯ ಶಾಸಕರು ನಿಷ್ಠೆ ತೋರಿದ್ದಾರೆ.  ಆ ಕಾರಣಕ್ಕೆ 15 ದಿನಗಳ ಕಾಲ ಶಿಂಧೆ ಗುಂಪು ಶಿವಸೇನೆಯ ಉದ್ಧವ್ ಠಾಕ್ರೆ  ಬೇರೆಗೊಂಡು ಬಿಜೆಪಿ ಜೊತೆಗೆ ಕೈಜೋಡಿಸಿದೆ. ಇದೀಗ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ.

Published On - 7:17 pm, Thu, 30 June 22