Devendra Fadnavis ಮಹಾರಾಷ್ಟ್ರ ಸರ್ಕಾರದ ಭಾಗವಾಗಲು ಒಪ್ಪಿದ ದೇವೇಂದ್ರ ಫಡ್ನವಿಸ್

ಈ ನಿರ್ಧಾರವು ಮಹಾರಾಷ್ಟ್ರದ ಬಗ್ಗೆ ಫಡ್ನವಿಸ್ ಅವರ ನಿಜವಾದ ನಿಷ್ಠೆ ಮತ್ತು ಸೇವೆಯ ಸಂಕೇತವಾಗಿದೆ. ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Devendra Fadnavis ಮಹಾರಾಷ್ಟ್ರ ಸರ್ಕಾರದ ಭಾಗವಾಗಲು ಒಪ್ಪಿದ ದೇವೇಂದ್ರ ಫಡ್ನವಿಸ್
ದೇವೇೆಂದ್ರ ಫಡ್ನವಿಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 30, 2022 | 7:37 PM

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರ ಒತ್ತಾಯದ ಮೇರೆಗೆ ದೇವೇಂದ್ರ ಫಡ್ನವಿಸ್ (Devendra Fadnavis)  ಮಹಾರಾಷ್ಟ್ರ ಮತ್ತು ಜನರ ಹಿತಾಸಕ್ತಿಯಿಂದ ಸರ್ಕಾರಕ್ಕೆ ಸೇರಲು ನಿರ್ಧರಿಸಿದ್ದಾರೆ. ಈ ನಿರ್ಧಾರವು ಮಹಾರಾಷ್ಟ್ರದ ಬಗ್ಗೆ ಅವರ ನಿಜವಾದ ನಿಷ್ಠೆ ಮತ್ತು ಸೇವೆಯ ಸಂಕೇತವಾಗಿದೆ. ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಅಮಿತ್ ಶಾ (Amit Shah) ಟ್ವೀಟ್ ಮಾಡಿದ್ದಾರೆ. ಇದಕ್ಕಿಂತ ಮುನ್ನ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.  ದೇವೇಂದ್ರ ಫಡ್ನವಿಸ್ ಸರ್ಕಾರದ ಭಾಗವಾಗಬೇಕೆಂದು ಕೇಂದ್ರ ನಾಯಕತ್ವ ನಿರ್ಧರಿಸಿದೆ ಎಂದು ನಡ್ಡಾ ಹೇಳಿದ್ದರು. ರಾಜಭವನದಲ್ಲಿ ಶಿಂಧೆ ಅವರೊಂದಿಗೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿದ ನಂತರ ಫಡ್ನವಿಸ್ ಅವರು ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂಎಂದು ಘೋಷಣೆ ಮಾಡಿದ ಒಂದು ಗಂಟೆಯ ನಂತರ ನಡ್ಡಾ ಮಾತನಾಡಿದ್ದಾರೆ.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅಧಿಕಾರ ವಹಿಸಿಕೊಳ್ಳಬೇಕು ಎಂದು ಕೇಂದ್ರ ನಾಯಕತ್ವ ಮತ್ತು ತಾನು  ವೈಯಕ್ತಿಕ ಮನವಿ ಮಾಡಿರುವುದಾಗಿ ನಡ್ಡಾ ಹೇಳಿದ್ದಾರೆ. ಇದೀಗ ನಡ್ಡಾ ಒತ್ತಾಯಕ್ಕೆ ಮಣಿದು ಫಡ್ನವಿಸ್ ಮಹಾರಾಷ್ಟ್ರ ಸರ್ಕಾರದ ಭಾಗವಾಗಲಿದ್ದಾರೆ ಎಂದು ಬಿಜೆಪಿ  ಹೇಳಿದೆ.

ಪ್ರಸ್ತುತ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ಶಿಂಧೆ ಮಾತ್ರ ಇಂದು ರಾತ್ರಿ 7.30 ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾನು  ಹೊಸ ಸರ್ಕಾರದ ಭಾಗವಾಗುವುದಿಲ್ಲ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ  ಹೇಳಿದ್ದರು.

Published On - 7:26 pm, Thu, 30 June 22