AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಬಾಳಾ ಠಾಕ್ರೆ ಅವರು ಹಣೆಗೆ ತಿಲಕವಿಟ್ಟು ಹರಸುತ್ತಿರುವ ಫೊಟೊದಲ್ಲಿರುವುದು ಏಕನಾಥ್ ಶಿಂಧೆಯಲ್ಲ

ಬ್ಲಾಕ್ ಆಂಡ್ ವೈಟ್ ಫೊಟೊದಲ್ಲಿ ಬಾಳಾ ಠಾಕ್ರೆ ವ್ಯಕ್ತಿಯೊಬ್ಬರ ಹಣೆಗೆ ತಿಲಕವನ್ನಿಡುತ್ತಿರುವುದನ್ನು ಕಾಣಬಹುದು.ಅವರ ಸುತ್ತಲೂ ಹಲವಾರು ಜನರೂ ಇದ್ದಾರೆ.

Fact Check ಬಾಳಾ ಠಾಕ್ರೆ ಅವರು ಹಣೆಗೆ ತಿಲಕವಿಟ್ಟು ಹರಸುತ್ತಿರುವ ಫೊಟೊದಲ್ಲಿರುವುದು ಏಕನಾಥ್ ಶಿಂಧೆಯಲ್ಲ
ವೈರಲ್ ಆಗಿರುವ ಫೊಟೊ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 30, 2022 | 9:18 PM

Share

ಉದ್ಧವ್ ಠಾಕ್ರೆ (Uddhav Thackeray) ಜೂನ್ 29 ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಈ ಹೊತ್ತಲ್ಲಿ ಏಕನಾಥ್ ಶಿಂಧೆ (Eknath Shinde) ನೇತೃತ್ವದಲ್ಲಿ ಬಂಡಾಯ ಶಾಸಕರು ಮುಂದಿನ ನಡೆಗೆ ಸಿದ್ಧವಾಗುತ್ತಿದಂತೆ ಫೋಟೊವೊಂದು ವೈರಲ್ ಆಗಿದೆ. ಬ್ಲಾಕ್ ಆಂಡ್ ವೈಟ್ ಫೊಟೊದಲ್ಲಿ ಬಾಳಾ ಠಾಕ್ರೆ ವ್ಯಕ್ತಿಯೊಬ್ಬರ ಹಣೆಗೆ ತಿಲಕವನ್ನಿಡುತ್ತಿರುವುದನ್ನು ಕಾಣಬಹುದು.ಅವರ ಸುತ್ತಲೂ ಹಲವಾರು ಜನರೂ ಇದ್ದಾರೆ. ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ (Bal Thackeray), ಶಿಂಧೆ ಅವರನ್ನು ಆಶೀರ್ವದಿಸಿರುವುದು ಎಂಬ ಶೀರ್ಷಿಕೆಯೊಂದಿಗೆ ಹಲವಾರು ಜನರು ಈ ಫೋಟೊವನ್ನು ಟ್ವಿಟರ್ ಮತ್ತು ಫೇಸ್​​ಬುಕ್​​ನಲ್ಲಿ ಶೇರ್ ಮಾಡುತ್ತಿದ್ದಾರೆ. ಉದ್ಧವ್ ನೇತೃತ್ವದ ಎಂವಿಎ ಸರ್ಕಾರ ಮತ್ತು ಉದ್ಧವ್ ಠಾಕ್ರೆ, ಬಾಳಾ ಠಾಕ್ರೆಯವರ ಆದರ್ಶಗಳಿಂದ ದೂರ ಸರಿಯುತ್ತಿದ್ದಾರೆ ಎಂದು ಶಿಂಧೆ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದರು.

ಅಂದಹಾಗೆ ವೈರಲ್ ಫೊಟೊದಲ್ಲಿರುವ ವ್ಯಕ್ತಿ ಏಕನಾಥ್ ಶಿಂಧೆ ಅಲ್ಲ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದೆ. ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರು ಹಣೆಗೆ ತಿಲಕವಿಟ್ಟು ಹರಸುತ್ತಿರುವ ವ್ಯಕ್ತಿ ಶಿವಸೇನಾದ ದಿವಂಗತ ನಾಯಕ ಆನಂದ್ ದಿಘೆ.

ಫ್ಯಾಕ್ಟ್ ಚೆಕ್ ಇದೇ ಫೊಟೊವನ್ನು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಫೋಟೊವಿರುವ ವರದಿ ಸಿಕ್ಕಿದೆ. 2001 ರಲ್ಲಿ ನಿಧನರಾದ ಶಿವಸೇನಾ ನಾಯಕ ಆನಂದ್ ದಿಘೆ ಅವರ ಕುರಿತಾದ ಏಪ್ರಿಲ್ ವರದಿಯಲ್ಲಿ BBC ಮರಾಠಿ ಈ ಚಿತ್ರವನ್ನು ಪ್ರಕಟಿಸಿದೆ. ಇದೇ ಫೋಟೋವನ್ನು ಈ ವರ್ಷದ ಮೇ ತಿಂಗಳಲ್ಲಿ ಮರಾಠಿ ದೈನಿಕ ಲೋಕಮತ್‌ನಲ್ಲಿ ಪ್ರಕಟಿಸಲಾಗಿದೆ. ಆಗಸ್ಟ್ 26, 2021 ರಿಂದ ದಿಘೆ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಿವಸೇನಾ ಟ್ವೀಟ್ ನಲ್ಲಿಯೂ ಈ ಫೋಟೊ ಇದೆ.

ಆನಂದ್ ದಿಘೆ ಯಾರು? ದಿಘೆ ಅವರು ಬಾಳಾ ಠಾಕ್ರೆ ಅವರ ಅನುಯಾಯಿ ಮತ್ತು ಬಂಡಾಯ ಸೇನಾ ನಾಯಕ ಏಕನಾಥ್ ಶಿಂಧೆ ಅವರ ಮಾರ್ಗದರ್ಶಕರಾಗಿದ್ದರು. ಈಗ ಮಹಾರಾಷ್ಟ್ರದಲ್ಲಿ ನಡೆದ ಬಂಡಾಯವು “ಧರ್ಮ ವೀರ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶಿಂಧೆಯ ಮಾರ್ಗದರ್ಶಕರ ಹೆಸರನ್ನು ಮುನ್ನೆಲೆಗೆ ತಂದಿದೆ. ಡಿಘೆ ಅವರು 50 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ದಿಘೆ ಅವರು ನಿಧನರಾದಾಗ ಫ್ರಂಟ್‌ಲೈನ್ ಮ್ಯಾಗಜೀನ್‌, ಥಾಣೆ ಪ್ರದೇಶದ ಮೇಲೆ ಹಿಡಿತ ಸಾಧಿಸಿದ್ದರಿಂದ ಅವರು “ಥಾಣೆಯ ವಾಸ್ತವಿಕ ಬಾಳ್ ಠಾಕ್ರೆ” ಎಂದು ಬರೆದಿತ್ತು. ವರದಿಯ ಪ್ರಕಾರ, 1989 ರಲ್ಲಿ ಥಾಣೆ ಮೇಯರ್ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಅಡ್ಡ ಮತ ಚಲಾಯಿಸಿದ ಶಿವಸೇನಾ ಕಾರ್ಪೊರೇಟರ್ ಶ್ರೀಧರ್ ಖೋಪ್ಕರ್ ಅವರ ಹತ್ಯೆಯ ನಂತರ ದಿಘೆ ಬೆಳಕಿಗೆ ಬಂದರು. ದಿಘೆ ಅವರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರು.

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ