ಬೆಂಗಳೂರು: ಮುಂಬರುವ ವಿಧಾನಸಭೆ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಬಸ್ ಯಾತ್ರೆಗೆ ಹೈಕಮಾಂಡ್ ಗ್ರೀನ್ಸಿಗ್ನಲ್ ನೀಡಿದೆ. ರಾಜ್ಯ ಕಾಂಗ್ರೆಸ್ ನಾಯಕರ ಪ್ರಸ್ತಾವನೆಗೆ ಹೈಕಮಾಂಡ್ ಸಮ್ಮತಿಸಿದೆ. ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಬಸ್ ಯಾತ್ರೆ ನಡೆಸಬಹುದು. ಬಸವಕಲ್ಯಾಣದಿಂದ ಸಿದ್ದರಾಮಯ್ಯ ಬಸ್ ಯಾತ್ರೆ ಆರಂಭಿಸುವ ಸಾಧ್ಯತೆ ಎಂದು ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಉತ್ತರ ಕರ್ನಾಟಕದಿಂದ ಪ್ರಾರಂಭ ಮಾಡಿದರೆ ಡಿ.ಕೆ.ಶಿವಕುಮಾರ್ ದಕ್ಷಿಣ ಕರ್ನಾಟಕ ಭಾಗದಿಂದ ಬಸ್ ಯಾತ್ರೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರತಿ ದಿನ 2 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಬಸ್ ಯಾತ್ರೆ ಮಾಡಲಾಗುವುದು. ಈ ಯಾತ್ರೆಯನ್ನು ನಡೆಸಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಬಗ್ಗೆ ಹೈಕಮಾಂಡ್ , ರಾಜ್ಯದಲ್ಲಿ ಸಭೆ ನಡೆಸಿ ದಿನಾಂಕ ನಿಗದಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ.
ಇದನ್ನು ಓದಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬಣ ಬಡಿದಾಟ: ದಿಲ್ಲಿಯಲ್ಲಿ ರಾಜೀ ಸಂಧಾನ, 50:50 ಫಾರ್ಮುಲಾ
ರಾಜ್ಯ ನಾಯಕರ ಪ್ರಸ್ತಾವನೆಗೆ ಒಪ್ಪಿದ ಹೈಕಮಾಂಡ್ ಇಂದು ನಡೆದ ಸಭೆಯಲ್ಲಿ ಬಸ್ ಯಾತ್ರೆಗೆ ಗ್ರೀನ್ ಸಿಗ್ನಲ್ ನೀಡಿದ ಕಾರಣ ಉತ್ತರಕೊಬ್ಬರು, ದಕ್ಷಿಣಕ್ಕೊಬ್ಬರು ಬಸ್ ಯಾತ್ರೆ ಮಾಡಬೇಕು ಎಂದು ಹೈಕಮಾಂಡ್ ಹೇಳಿದ್ದಾರೆ. ಇದೀಗ ಉತ್ತರಕ್ಕೆ ಯಾರು..? ದಕ್ಷಿಣಕ್ಕೆ ಯಾರು..? ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ನಿರ್ಧಾರ ಬಿಟ್ಟದ್ದು ಎಂದು ಹೈಕಮಾಂಡ್ ಹೇಳಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಎಲ್ಲಿಂದ ?ಯಾತ್ರೆ ಮಾಡಬೇಕು ಎಂಬುದನ್ನು ಡಿಕೆ ಶಿವಕುಮಾರ್ ನಿರ್ಧರ ಮಾಡಲಿದ್ದಾರೆ.
ಬಹುತೇಕ ಸಿದ್ದರಾಮಯ್ಯ ಉತ್ತರ ಕರ್ನಾಟಕದಲ್ಲಿ ಬಸ್ ಯಾತ್ರೆ ಮಾಡಬಹುದು ಎಂದು ಹೇಳಲಾಗಿದೆ. ಇನ್ನು ದಕ್ಷಿಣದಲ್ಲಿ ಡಿ.ಕೆ ಶಿವಕುಮಾರ್ ಯಾತ್ರೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ದಿನಕ್ಕೆ ಎರಡು ಕ್ಷೇತ್ರಗಳಲ್ಲಿ ಬಸ್ ಯಾತ್ರೆ ನಡೆಸಲು ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಸಿದ್ದರಾಮಯ್ಯ ಬಸವಕಲ್ಯಾಣದಿಂದ ಬಸ್ ಯಾತ್ರೆ ಆರಂಭಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಸ್ ಯಾತ್ರೆ ರೇಸ್ನಲ್ಲಿ ಹೈಕಮಾಂಡ್ ಎಂಟ್ರಿ ಕೊಟ್ಟಿದ್ದು, ಉಭಯ ನಾಯಕರ ಬಣಗಳ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.
Published On - 6:22 pm, Wed, 26 October 22