AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇಶದ ಕಾನೂನೇ ಸರಿಯಿಲ್ಲ, ನಿಂದಕರ ವಿರುದ್ಧ ದೂರು ನೀಡಿದರು ಪ್ರಯೋಜನವಿಲ್ಲ: ಸಚಿವ ಮಂಕಾಳ ವೈದ್ಯ

ಈ ದೇಶದ ಕಾನೂನೇ ಸರಿಯಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವವರ ವಿರುದ್ಧ ದೂರು ನೀಡಿದರೂ ಕ್ರಮಕೈಗೊಳ್ಳದೇ ಪೊಲೀಸರು ಅಸಹಾಯಕರಾಗಿದ್ದಾರೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ದೇಶದ ಕಾನೂನೇ ಸರಿಯಿಲ್ಲ, ನಿಂದಕರ ವಿರುದ್ಧ ದೂರು ನೀಡಿದರು ಪ್ರಯೋಜನವಿಲ್ಲ: ಸಚಿವ ಮಂಕಾಳ ವೈದ್ಯ
ಸಚಿವ ಮಂಕಾಳ ವೈದ್ಯ
ವಿನಾಯಕ ಬಡಿಗೇರ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 30, 2023 | 5:39 PM

Share

ಕಾರವಾರ: ಈ ದೇಶದ ಕಾನೂನೇ ಸರಿಯಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವವರ ವಿರುದ್ಧ ದೂರು ನೀಡಿದರೂ ಕ್ರಮಕೈಗೊಳ್ಳದೇ ಪೊಲೀಸರು ಅಸಹಾಯಕರಾಗಿದ್ದಾರೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಕ್ರಮ ಕೈಗೊಳ್ಳಲು ಐದು ಪ್ರಕರಣಗಳನ್ನು ನೀಡಿದ್ದೆ. ದೇಶ ಕಾನೂನು ತಂದಿದೆ, ಆದರೆ ಕೋರ್ಟ್ ಅದನ್ನ ತಡೆ ಹಿಡಿದಿದೆ. ಪೊಲೀಸ್ ಇಲಾಖೆ‌ ಸಹ ಅಸಹಾಯಕರಾಗಿದ್ದಾರೆ ಎಂದಿದ್ದಾರೆ.

ಬಿಜೆಪಿಯವರ ಮನಸ್ಥಿತಿಯೇ ಸರಿಯಿಲ್ಲ: ಮಂಕಾಳ ವೈದ್ಯ ಕಿಡಿ

ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಬಿಜೆಪಿಯವರಿಗೆ ಕೆಲಸ ಇಲ್ಲ. ಅತ್ಯಂತ ಕೆಟ್ಟದಾಗಿ ಟೀಕೆ ಮಾಡುತ್ತಾರೆ. ಬಿಜೆಪಿಯವರ ಮನಸ್ಥಿತಿಯೇ ಸರಿಯಿಲ್ಲ. ರಾಜ್ಯ, ದೇಶದ ಜನ ಅಧಿಕಾರ ಕೊಟ್ಟರೂ ಬಿಜೆಪಿ ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿಯವರು ಸುಳ್ಳು ಹೇಳೇ ರಾಜಕಾರಣ ಮಾಡುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಪಂಚೆಯೊಳಗೆ ಬಿಜೆಪಿ ವಿಲವಿಲ ಒದ್ದಾಡುತ್ತಿದೆ ಎಂದ ಕಾಂಗ್ರೆಸ್, ಇದನ್ನು ಸಿದ್ದರಾಮಯ್ಯರಿಗೆ ತಳುಕು ಹಾಕಿದ ಸಿಟಿ ರವಿ

ರಾಜ್ಯ ಕಳೆದುಕೊಂಡ ಮೇಲೆ ಇನ್ನೂ ಬಿಜೆಪಿಯವರು ಒಂದಾಗಿಲ್ಲ. ಬಿಜೆಪಿಯವರು ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಿಲ್ಲ. ಕಾಂಗ್ರೆಸ್​ನಿಂದ ಹೋದ 14 ಜನರನ್ನು ಬಿಜೆಪಿ ಸೇರಿಸಿಕೊಂಡಿದೆ. ಅಲ್ಲಿ ಶಿಸ್ತು ಇದ್ದರೆ ಶಿಸ್ತು ಬಿಟ್ಟು ಶಾಸಕರನ್ನು ಯಾಕೆ ತೆಗೆದುಕೊಂಡರು.

ಇದನ್ನೂ ಓದಿ: MP Renukacharya: ಬಿಜೆಪಿ ಸೋಲಿಗೆ ಎಳೆಎಳೆಯಾಗಿ ಕಾರಣ ಬಿಚ್ಚಿಟ್ಟ ರೇಣುಕಾಚಾರ್ಯ

ಕಾಂಗ್ರೆಸ್​ನಿಂದ ಹೋದವರು ಶಿಸ್ತು ತರಲು ಪ್ರಯತ್ನ ಮಾಡಿದರು. ಆದರೆ ಇದು ಆಗಲಿಲ್ಲ. ಅದಕ್ಕೆ ವಾಪಾಸ್ ಕಾಂಗ್ರೆಸ್​ನತ್ತ ಬರುತ್ತಾರೆ. ಕಾಂಗ್ರೆಸ್​ನಿಂದ ಬಂದವರಿಂದ ಶಿಸ್ತು ಹಾಳಾಗುತ್ತದೆ ಎಂದು ಈಗ ಬಿಜೆಪಿಗರು ಹೇಳುತ್ತಾರೆ. ಆದರೆ ‌ಕಾಂಗ್ರೆಸ್ಸಿನ ಹದಿನಾಲ್ಕು ಶಾಸಕರನ್ನ ತೆಗೆದುಕೊಳ್ಳುವುದೇ ಶಿಸ್ತು ಅಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:38 pm, Fri, 30 June 23