ಲೋಕಸಭೆ ಚುನಾವಣೆ; ಈ ಬಾರಿಯೂ ಅದೃಷ್ಟ ಕಟ್ಟಡದಲ್ಲಿ ಚುನಾವಣಾ ಕಚೇರಿ ಉದ್ಘಾಟಿಸಿದ ದಕ್ಷಿಣ ಕನ್ನಡ ಬಿಜೆಪಿ

| Updated By: Rakesh Nayak Manchi

Updated on: Feb 15, 2024 | 2:30 PM

ಬಿಜೆಪಿ ಹಾಗೂ ಹಿಂದುತ್ವದ ಭದ್ರಕೋಟೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಅದೃಷ್ಟ ಕಡ್ಡದ ಬಾಗಿಲು ತೆರೆದಿದೆ. ಲೋಕಸಭಾ ಚುನಾವಣೆಗೆ ಬಿಜೆಪಿಯ ಚುನಾವಣಾ ಕಚೇರಿಯನ್ನು ಅದೃಷ್ಟದ ಕಟ್ಟಡದಲ್ಲಿ ಉದ್ಘಾಟನೆ ಮಾಡಲಾಗಿದೆ. ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಬಳಿ‌ ಇರುವ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಪ್ರಮುಖರು ಭಾಗಿಯಾದರು.

ಲೋಕಸಭೆ ಚುನಾವಣೆ; ಈ ಬಾರಿಯೂ ಅದೃಷ್ಟ ಕಟ್ಟಡದಲ್ಲಿ ಚುನಾವಣಾ ಕಚೇರಿ ಉದ್ಘಾಟಿಸಿದ ದಕ್ಷಿಣ ಕನ್ನಡ ಬಿಜೆಪಿ
ಈ ಬಾರಿಯೂ ಅದೃಷ್ಟದ ಕಟ್ಟಡದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ
Follow us on

ಮಂಗಳೂರು, ಫೆ.15: ಬಿಜೆಪಿ ಹಾಗೂ ಹಿಂದುತ್ವದ ಭದ್ರಕೋಟೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಅದೃಷ್ಟ ಕಟ್ಟಡದ ಬಾಗಿಲು ತೆರೆದಿದೆ. ಲೋಕಸಭಾ ಚುನಾವಣೆಗಾಗಿ (Lok Sabha Elections) ಮಂಗಳೂರು (Mangaluru) ನಗರದ ಬಂಟ್ಸ್ ಹಾಸ್ಟೆಲ್ ಬಳಿ‌ ಇರುವ ಬಿಜೆಪಿಯ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಸೇರಿದಂತೆ ಬಿಜೆಪಿಯ ಪ್ರಮುಖರು ಭಾಗಿಯಾದರು.

ಗಣಪತಿ ಹೋಮ ನಡೆಸಿ ಧಾರ್ಮಿಕ ವಿಧಿ ವಿಧಾನ ಸಂಪನ್ನಗೊಳಿಸಲಾಯಿತು. ಬಳಿಕ ಮಾಡಿದ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗಿಸುವ ಮೂಲಕ ಚುನಾವಣಾ ಕಚೇರಿ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಗಣಪತಿ ಪೂಜೆಯ ಮೂಲಕ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ದೇಶದಲ್ಲಿ 400 ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ಬಿಜೆಪಿ ಗೆಲುವು ಸಾಧಿಸಬೇಕು ಎಂದರು.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಲೋಕಸಭಾ ಕ್ಷೇತ್ರ ಬಿಜೆಪಿಯ ಗೆಲುವಾಗಬೇಕು. 2004 ರಿಂದ ಈ ಕಾರ್ಯಾಲಯ ಬಿಜೆಪಿಯ ಗೆಲುವಿನ ಕಾರ್ಯಾಲಯವಾಗಿದೆ. ಯಾವ ಯಾವ ಚುನಾವಣೆಯಲ್ಲಿ ಈ ಕಾರ್ಯಾಲಯ ಬಳಸಿದ್ದೇವೊ ಆ ಎಲ್ಲಾ ಚುನಾವಣೆಯಲ್ಲಿ ನಮಗೆ ಗೆಲುವಾಗಿದೆ ಎಂದರು.

ಇದನ್ನೂ ಓದಿ: ಶಿಕ್ಷಕಿಯಿಂದ ಹಿಂದೂ ಧರ್ಮ ಅವಹೇಳನ ಪ್ರಕರಣ; ತಮ್ಮ ವಿರುದ್ಧ ಯಾಕೆ ಎಫ್ಐಆರ್ ಎಂದ ಬಿಜೆಪಿ ಶಾಸಕರು

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಹಿನ್ನಡೆಯಾದರೂ ನಮ್ಮ ಜಿಲ್ಲೆಯಲ್ಲಿ ಈ ಕಾರ್ಯಾಲಯ ಮೂಲಕ‌ ಕಾರ್ಯ ಮಾಡಿ ಗೆಲುವು ಸಾಧಿಸಿದ್ದೇವೆ. ಮಹಾನಗರ ಪಾಲಿಕೆಗೆ ಈ ಕಾರ್ಯಾಲಯ ಬಳಕೆ ಮಾಡಿ ಚುನಾವಣೆ ಗೆದ್ದಿದ್ದೇವೆ. ಹಿಂದಿನ ಮೂರು ಲೋಕಸಭಾ ಚುನಾವಣೆಗೆ ಈ ಕಾರ್ಯಾಲಯ ಬಳಕೆ ಮಾಡಿ ಗೆದ್ದಿದ್ದೇವೆ ಎಂದರು.

ಗೆಲುವಿನ ಕಾರ್ಯಾಲಯವನ್ನು ಈ ಬಾರಿ ಮತ್ತೆ ಉದ್ಘಾಟನೆ ಮಾಡಿದ್ದೇವೆ. ಈ ಬಾರಿ ಮತ್ತೆ ಅಭೂತಪೂರ್ವವಾದ ಗೆಲುವು ಬಿಜೆಪಿಗೆ ಆಗುತ್ತದೆ. ಇಲ್ಲಿ ಬಿಜೆಪಿ ಮತ್ತೆ ಗಟ್ಟಿಯಾದ ಸ್ಥಾನ ಉಳಿಸಿಕೊಳ್ಳುತ್ತದೆ. ಕಳೆದ ಸಾರಿ 2 ಲಕ್ಷದ 73 ಸಾವಿರ ಮತಗಳ ಅಂತರದಿಂದ ಗೆದ್ದಿದೆ. ಈ ಬಾರಿ ಮೂರೂವರೆ ಲಕ್ಷಕ್ಕಿಂತ ಹೆಚ್ಚು ಬಹುಮತದಿಂದ ಈ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Thu, 15 February 24