ಏನು ಗೂಂಡಾಗಿರಿ ಮಾಡ್ತೀರಾ ಎಂದ ಸಿಎಂ: ಸದನದಲ್ಲಿ ಭುಗಿಲೆದ್ದ ‘ಗೂಂಡಾಗಿರಿ’ ಗದ್ದಲ!
ವಿಧಾನಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಸಿದ್ದರಾಮಯ್ಯ ಉತ್ತರಿಸುವಾಗ ಗದಲ್ಲ ಉಂಟಾಗಿದೆ. ಈ ವೇಳೆ ಗರಂ ಆದ ಸಿಎಂ ಸಿದ್ದರಾಮಯ್ಯ, ಏನು ಗೂಂಡಾಗಿರಿ ಮಾಡ್ತೀರಾ? ನಾನು ಯಾವುದಕ್ಕೂ ಹೆದರಲ್ಲ, 7 ಕೋಟಿ ಜನರು ನೋಡ್ತಾ ಇದ್ದಾರೆ. ಜನ ಇವರಿಗೆ ಛೀ.. ಥೂ... ಅಂತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.
ವಿಧಾನಪರಿಷತ್, ಫೆಬ್ರವರಿ 15: ಏನು ಗೂಂಡಾಗಿರಿ ಮಾಡ್ತೀರಾ? ನಾನು ಯಾವುದಕ್ಕೂ ಹೆದರಲ್ಲ, 7 ಕೋಟಿ ಜನರು ನೋಡ್ತಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ವಿಧಾನಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸುವಾಗ ಸಿಎಂ ಸಿದ್ದರಾಮಯ್ಯ ಗೂಂಡಾಗಿರಿ ಪದವನ್ನು ಬಳಕೆ ಮಾಡಿದ್ದಾರೆ. ಎದ್ದು ನಿಂತಿದ್ದಾರೆ ಅಂದರೆ ಅವರು ತಪ್ಪು ಮಾಡಿದ್ದಾರೆ ಅಂತಾ ಅರ್ಥ ಎಂದಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸೌಧದಲ್ಲಿ ತೊಡೆ ತಟ್ಟಿದ್ದು ನೀವಾ, ನಾವಾ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ. ನಮಗೆ ಗೂಂಡಾಗಿರಿ ಅಂತೀರಲ್ಲ, ಆಗ ತೊಡೆ ತಟ್ಟಿದ್ದು ಯಾರು? ನೀವು ಗೂಂಡಾಗಳು, ನಿಮ್ಮ ಗೂಂಡಾಗಿರಿಗೆ ನಾವು ಹೆದರುವುದಿಲ್ಲ ಎಂದರು. ಜನ ಇವರಿಗೆ ಛೀ.. ಥೂ… ಅಂತಿದ್ದಾರೆ ಎಂದ ಸಿದ್ದರಾಮಯ್ಯ, ಪರಿಷತ್ನಲ್ಲಿ ವಿಪಕ್ಷ ಸದಸ್ಯರು ಗೂಂಡಾ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.
ಫ್ಯಾಕ್ಟ್ ಈಸ್ ಫ್ಯಾಕ್ಟ್ ಎಂದ ಸಿಎಂ
ನಾನು ಫ್ಯಾಕ್ಟ್ ಹೇಳುತ್ತಿದ್ದೇನೆ, ಫ್ಯಾಕ್ಟ್ ಈಸ್ ಫ್ಯಾಕ್ಟ್. ವಿಪಕ್ಷಗಳ ಈ ನಡೆ ಸಹಿಸಲ್ಲ, ನಾನು ಉತ್ತರ ಕೊಡಲ್ಲ. ಪ್ರಶ್ನೆ ಕೇಳಿದವರು ಸುಮ್ಮನಿರುವಾಗ ವಿಪಕ್ಷದ್ದವರದ್ದೇನು ಮಾತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಸದಸ್ಯರ ಮನವೊಲಿಕೆ ಮಾಡಿದರು. ನಮ್ಮ ಫ್ಯಾಕ್ಟ್ ಉತ್ತರ ಸಹಿಸಲಾಗ್ತಿಲ್ಲ, ನೀವು ಕೂಗಾಡಿದರೂ ಅದು ಸತ್ಯವೇ ಎಂದಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಕಟ್ಟಿಹಾಕಲು ಬಿಜೆಪಿ ತಂತ್ರ, ಮೈಸೂರಿನಲ್ಲಿ ಚುರುಕಾದ ಬಿಜೆಪಿ
ನಿರ್ಮಲಾ ಸೀತಾರಾಮನ್ ಕೂಡ ವಿರೋಧಿ ಧೋರಣೆ ತೋರಿಸಿದ್ದಾರೆ. ಇದೇ ವೇಳೆ ಸಿಎಂ ಉತ್ತರ ಬೇಡ ಎಂದು ಬಿಜೆಪಿ ಸದಸ್ಯರ ಘೋಷಣೆ ಮಾಡಿದರು. ಬಿಜೆಪಿ ಸದಸ್ಯರ ಘೋಷಣೆ ನಡುವೆ ಸಿಎಂ ಉತ್ತರ ಮುಂದುವರಿಕೆ ಆಗಿದೆ. ಅವರೇ ಬಜೆಟ್ ಒಪ್ಪಿಕೊಂಡಿದ್ದ 5300 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಆದರೆ ನಾವು 1 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿ ಸಲಹೆ ಮೇರೆಗೆ ಕುಪೇಂದ್ರ ರೆಡ್ಡಿ ಕಣಕ್ಕೆ, ಕಾಂಗ್ರೆಸ್ಗೆ ಅಡ್ಡಮತದಾನದ ಆತಂಕ
ಯೋಜನೆ ಮೇಲಿನ ಕಾಳಜಿಯಿಂದ 1 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1 ಸಾವಿರ ಕೋಟಿ ರೂ. ಹಣ ದ್ರೋಹ ಮಾಡಿದೆ. ಇದಕ್ಕೆ ಹಣಕಾಸು ಸಚಿವರು ಸಹಕಾರ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ವಿಷಾದಕ್ಕೆ ವಿಪಕ್ಷಗಳ ಬಿಗಿ ಪಟ್ಟು
ಸಿಎಂ ಗೂಂಡಾ ಹೇಳಿಕೆ ಖಂಡಿಸಿ ಬಿಜೆಪಿ ಸದಸ್ಯರಿಂದ ಸಭಾತ್ಯಾಗ ಮಾಡಲಾಗಿದೆ. ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಲೇ ಬೇಕು ಎಂದು ವಿಪಕ್ಷ ಬಿಗಿ ಪಟ್ಟು ಹಿಡಿದಿದೆ. ಸರ್ಕಾರ ಹೀಗೆ ಮುಂದುವರೆದರೆ ನಾವು ಬಾಯ್ಕಾಟ್ ಮಾಡುತ್ತೇವೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.