Sumalatha PressMeet: ನನ್ನ ಮೇಲೆ ಎರಡು ಕಡೆ ಹಲ್ಲೆ ಯತ್ನ ಆಯ್ತು, 4 ವರ್ಷ ಮಂಡ್ಯ ರಾಜಕೀಯದಲ್ಲಿ ಅನುಭವಿಸಿದ ಕಷ್ಟಗಳನ್ನ ಬಿಚ್ಚಿಟ್ಟ ಸುಮಲತಾ
ಸುಮಲತಾ ಅಂಬರೀಶ್ ಅವರು ತಮ್ಮ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಂಡ್ಯ ರಾಜಕೀಯದಲ್ಲಿ ತಾವು ಅನುಭವಿಸಿದ ಕಷ್ಟ, ಪಟ್ಟ ನೋವುಗಳನ್ನು ಹೇಳಿಕೊಂಡರು.
ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ(Mandya) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ತಮ್ಮ ರಾಜಕೀಯ ನಡೆ ಗುಟ್ಟು ಬಿಟ್ಟು ಕೊಡದೇ ತಮ್ಮ ನಾಲ್ಕು ವರ್ಷದ ರಾಜಕೀಯ ಅನುಭವ ಹಂಚಿಕೊಂಡರು. ಮಂಡ್ಯದ ಚಾಮುಂಡೇಶ್ವರಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ನಾಲ್ಕು ವರ್ಷದಲ್ಲಿ ಮಂಡ್ಯ ರಾಜಕೀಯ ಬಗ್ಗೆ ವಿವರಿಸಿದರು. ಇದೇ ವೇಳೆ ಜೆಡಿಎಸ್ ಭದ್ರಕೋಟೆ ಎಂದು ಹೇಳುವ ದಳಪತಿಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಅಲ್ಲದೇ ತಮ್ಮ ಮೇಲೆ ಎರಡು ಕಡೆ ಹಲ್ಲೆ ಯತ್ನ ಪ್ರಯತ್ನಗಳು ಸಹ ನಡೆದಿವೆ ಎಂದು ಹೊಸ ಬಾಂಬ್ ಸಿಡಿಸಿದರು.
ಇದನ್ನೂ ಓದಿ: Sumalatha Ambareesh Pressmeet Live: ಮಂಡ್ಯ ಎಂಪಿ ಸುಮಲತಾ ಅಂಬರೀಶ್ ಪತ್ರಿಕಾ ಗೋಷ್ಠಿ ಲೈವ್
ಪ್ರಮಾಣಿಕವಾಗಿ ಕೆಲಸ ಮಾಡುವ ಒಂದೊಂದು ಸಭೆಯಲ್ಲಿ ಅಡ್ಡಿಪಡಿಸಿದರು. ಮೇಲುಕೋಟೆ, ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ನಿಲ್ಲಿಸಿ ನಿಂದಿಸಿದರು. ಎರಡು ಕಡೆ ನನ್ನ ಮೇಲೆ ಹಲ್ಲೆ ನಡೆಸುವ ಪ್ರಯತ್ನ ನಡೆದಿತ್ತು. ಶ್ರೀರಂಗಪಟ್ಟಣ ಹಾಗೂ ಪಾಂಡವಪುರದಲ್ಲಿ ಹಲ್ಲೆಗೆ ಯತ್ನಿಸಿದರು. ನಾನು ಏನು ಕೆಲಸ ಮಾಡಿದ್ದೇನೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ 4 ವರ್ಷದ ಮಂಡ್ಯ ರಾಜಕೀಯದಲ್ಲಿ ಅನುಭವಿಸಿದ ಕಷ್ಟ. ಪಟ್ಟ ಸಂಕಷ್ಟಗಳನ್ನು ಮೆಲುಕು ಹಾಕಿದರು.
ಎಂಎಲ್‌ಸಿಯಾಗುವಂತೆ ನನಗೆ ಬಹಿರಂಗ ಆಹ್ವಾನವೂ ಬಂದಿತ್ತು. ಅಂಬರೀಶ್ ಅವರ ಪತ್ನಿ ಎನ್ನುವುದನ್ನೂ ಮರೆತು ನನ್ನ ತೇಜೋವಧೆ ಮಾಡಿದರು. ಪ್ರತಿದಿನವೂ ನನ್ನ ಹೆಸರನ್ನು ಪ್ರಸ್ತಾಪಿಸಿ ಟಾರ್ಗೆಟ್ ಮಾಡಿದರು. ಆದರೆ, ಕಾಂಗ್ರೆಸ್‌ನ ಸ್ಥಳೀಯ ನಾಯಕರು, ಕಾರ್ಯಕರ್ತರು ಬೆಂಬಲಿಸಿದರು. ಚುನಾವಣೆ ವೇಳೆ ಬಿಜೆಪಿ ಬಹಿರಂಗವಾಗಿ ಬೆಂಬಲ ನೀಡಿತ್ತು. ರೈತ ಸಂಘ, ಬೇರೆ ಸಂಘಟನೆಗಳು ನನಗೆ ಬಹಿರಂಗವಾಗಿ ಬೆಂಬಲ ನೀಡಿದರು. ಕೊರೋನಾ ಟೈಮ್‌ನಲ್ಲಿ ಸಂಸದರ ನಿಧಿ ಬರದೇ ಇದ್ದರೂ, ನಾನು ಜನರ ಸಹಾಯಕ್ಕೆ ಬಂದೆ. ಆದರೆ, ಪ್ರತಿ ಹಂತದಲಲ್ಲೂ ನನಗೆ ಅವಮಾನ ಮಾಡಿದರು ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
Published On - 1:38 pm, Fri, 10 March 23