ಬೆಂಗಳೂರು, ಜುಲೈ 24: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Valmiki Scheduled Tribes Development Corporation) ಬಹಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ವಿರುದ್ಧ ನಿಗಮದ ಮಾಜಿ ಪದನಿಮಿತ್ತ ನಿರ್ದೇಶಕ ಕಲ್ಲೇಶ್ ಬಿ ದೂರು ನೀಡಿದ್ದಾರೆ. ಕೇಂದ್ರ ಸರ್ಕಾರ (Union Government) ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಂಡಿದೆ ಅಂತ ಆರೋಪಿಸಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಹರಿಹಾಯ್ದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ “ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯನವರಿಂದ ಇನ್ನಿಲ್ಲದ ದುಸ್ಸಾಹಸ. ಇಂದು ಇಡಿ ವಿರುದ್ಧ ಕಂಪ್ಲೇಂಟ್ ಮಾಡಿರುವ ಕಲ್ಲೇಶ್ ಬಿ ಎಂಬ ಅಧಿಕಾರಿಯನ್ನು ಕಳೆದ ತಿಂಗಳು ಭ್ರಷ್ಟಾಚಾರದ ಆರೋಪದಡಿ ರಾಜ್ಯ ಸರ್ಕಾರ ಅಮಾನತ್ತಿನಲ್ಲಿಟ್ಟಿತ್ತು. ಇಡಿ ತನಿಖೆಯಲ್ಲಿ ಸಿಎಂ ಹಾಗೂ ಡಿಸಿಎಂಗಳ ಕೈವಾಡದ ಬಗ್ಗೆ ಈ ಅಧಿಕಾರಿ ಮಾಹಿತಿ ನೀಡಿದ್ದಾನೆ ಎಂಬ ವಿಷಯ ತಿಳಿದ ತಕ್ಷಣ ಕಾಂಗ್ರೆಸ್ ನಾಟಕ ಒಂದನ್ನು ಆರಂಭಿಸಿದೆ” ಎಂದು ವಾಗ್ದಾಳಿ ಮಾಡಿದೆ.
ಕುರ್ಚಿ ಉಳಿಸಿಕೊಳ್ಳಲು @siddaramaiah ನವರಿಂದ ಇನ್ನಿಲ್ಲದ ದುಸ್ಸಾಹಸ.
ಇಂದು ED ವಿರುದ್ಧ ಕಂಪ್ಲೇಂಟ್ ಮಾಡಿರುವ ಕಲ್ಲೇಶ್ ಬಿ ಎಂಬ ಅಧಿಕಾರಿಯನ್ನು ಕಳೆದ ತಿಂಗಳು ಭ್ರಷ್ಟಾಚಾರದ ಆರೋಪದಡಿ ರಾಜ್ಯ ಸರ್ಕಾರ ಅಮಾನತ್ತಿನಲ್ಲಿಟ್ಟಿತ್ತು.
ED ತನಿಖೆಯಲ್ಲಿ ಸಿಎಂ ಹಾಗೂ ಡಿಸಿಎಂ ಗಳ ಕೈವಾಡದ ಬಗ್ಗೆ ಈ ಅಧಿಕಾರಿ ಮಾಹಿತಿ ನೀಡಿದ್ದಾನೆ ಎಂಬ ವಿಷಯ… pic.twitter.com/DYu5Jg4qcb
— BJP Karnataka (@BJP4Karnataka) July 24, 2024
“ಕಳಂಕಿತ ಅಧಿಕಾರಿಯಾದ ಕಲ್ಲೇಶ್ ಗೆ ಆಮಿಷ ಒಡ್ಡಿ, ಅಧಿಕಾರ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಸರ್ಕಾರವು ಇಡಿ ತನಿಕಾ ಅಧಿಕಾರಿಗಳ ವಿರುದ್ಧ ಸಿಎಂ ಡಿಸಿಎಂ ಹೆಸರನ್ನು ಹೇಳಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಸುಳ್ಳು ಕಂಪ್ಲೇಂಟ್ ಮಾಡಿಸಿದೆ. ಸಿದ್ದರಾಮಯ್ಯನವರು ಕುರ್ಚಿಗೆ ಅಂಟಿಕೊಳ್ಳದೆ, ವಾಲ್ಮೀಕಿ ಹಾಗೂ ಮೂಡಾ ಹಗರಣದ ನೈತಿಕ ಹೊಣೆಯನ್ನು ಹೊತ್ತು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿಬಿಐ ತನಿಖೆಗೆ ಸಹಕರಿಸಬೇಕೆಂದು ಆಗ್ರಹಿಸುತ್ತೇವೆ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಬಿಜೆಪಿ ಚಿಂತನೆ
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿಂದತೆ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು “ನಿಗಮದ ಹಣ ಅಕ್ರಮವಾಗಿ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಬಿ. ನಾಗೇಂದ್ರ ಸೂಚನೆ ನೀಡಿದ್ದಾರೆ ಎಂದ ಒಪ್ಪಿಕೊ. ನಾವು ಹೇಳಿದಂತೆ ಒಪ್ಪಿಕೊಳ್ಳದಿದ್ದರೆ ಬಂಧಿಸುವುದಾಗಿ ಇಡಿ ಅಧಿಕಾರಿಗಳು” ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಧಿಕಾರಿ ಕಲ್ಲೇಶ್ ದೂರು ದಾಖಲಸಿದ್ದರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಹಗರಣದ ತನಿಖೆಯನ್ನು ಎಸ್‌ಐಟಿ, ಸಿಬಿಐ ಮತ್ತು ಇಡಿ ನಡೆಸುತ್ತಿವೆ.
ರಾಜ್ಯ ಸರ್ಕಾರದವತಿಯಿಂದ ಎಸ್‌ಐಟಿ ತನಿಖೆ ನಡೆಸುತ್ತಿದೆ. ಬ್ಯಾಂಕ್ ಅಧಿಕಾರಿಗಳ ದೂರಿನ ಆಧಾರದ ಮೇಲೆ ಸಿಬಿಐ ತನಿಖೆ ನಡೆಸುತ್ತಿದೆ. ದೂರು ನೀಡಿದ್ದಾರೆ. ಹಗರಣ ಸಂಬಂಧ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ (ಜು.10) ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಬಂಧಿಸಿದ್ದರು.
“ಕಡು ಭ್ರಷ್ಟ ಅಧಿಕಾರಿ ಕಲ್ಲೇಶಪ್ಪರನ್ನು ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಿದೆ ಕಾಂಗ್ರೆಸ್ ಸರ್ಕಾರ.ಇಡಿ ವಿರುದ್ಧ ಆರೋಪ ಮಾಡಿದರೆ, ನಿಮ್ಮ ಅಮಾನತು ಆದೇಶವನ್ನು ರದ್ದು ಮಾಡುತ್ತೆವೆಂಬ ಬೋಗಸ್ ಗ್ಯಾರಂಟಿಯನ್ನು ಕಾಂಗ್ರೆಸ್ ಕಲ್ಲೇಶಪ್ಪರಿಗೆ ಒಡ್ಡಿರುವ ಸಾಧ್ಯತೆ ಹೆಚ್ಚು. ಶಾಸಕರೊಬ್ಬರಿಗೆ 3 ರೂ. ಕೋಟಿ ನೀಡಿ, ಹುದ್ದೆ ಗಿಟ್ಟಿಸಿಕೊಂಡು ಅಮಾನಾತಾಗಿದ್ದ ಕಡು ಭ್ರಷ್ಟ ಅಧಿಕಾರಿಯನ್ನು, ತನ್ನ ಭ್ರಷ್ಟಾಚಾರ ರಕ್ಷಿಸಿಕೊಳ್ಳಲು ಬಳಸುವಂತಹ ಸ್ಥಿತಿ ಕಾಂಗ್ರೆಸ್ಸಿಗರಿಗೆ ಬರಬಾರದಿತ್ತು”. ಎಂದು ಎಮ್ಎಲ್ಸಿ ಸಿಟಿ ರವಿ ಕಿಡಿಕಾರಿದ್ದಾರೆ.
ಕಡು ಭ್ರಷ್ಟ ಅಧಿಕಾರಿ ಕಲ್ಲೇಶಪ್ಪರನ್ನು ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಿದೆ @INCKarnataka ಸರ್ಕಾರ.
ಕಳೆದ ತಿಂಗಳು ಜೂನ್ 26 ರಂದು ಭ್ರಷ್ಟಾಚಾರದ ಆರೋಪದ ಮೇಲೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಎಂ.ಡಿ ಕಲ್ಲೇಶಪ್ಪರನ್ನು ಅಮಾನತು ಮಾಡಿದ್ದ ಕಾಂಗ್ರೆಸ್ ಸರ್ಕಾರ, ಈಗ ತಾನು ಇಡಿ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇಡಿ ವಿರುದ್ಧ… pic.twitter.com/s9R295IiLi
— C T Ravi 🇮🇳 ಸಿ ಟಿ ರವಿ (@CTRavi_BJP) July 23, 2024
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Wed, 24 July 24